ಪೋಸ್ಟ್‌ಗಳು

ಅವಳು ಮಗಳು😍

ಇಮೇಜ್
ಅವಳು ಮಗಳು ಅವಳು ತಾಯಿ ಅವಳು ಹೆಂಡತಿ ಮನೆಯ ಮಹಾಲಕ್ಷಿಯರು ಮನೆಯ ಮಹಾಲಕ್ಷಿಯರು ಅವಳು ಅಜ್ಜಿ ಅವಳು ಅಕ್ಕ ಅವಳು ತಂಗಿ ಮನೆಯ ಮಹಾಲಕ್ಷಿಯರು ಮನೆಯ ಮಹಾಲಕ್ಷಿಯರು ಅವಳು ಗೆಳತಿ ಅವರು ಮೇಡಂ ಅವರುಗಳೆಲ್ಲ ಅವನ ಹೃದಯದ ಮಿಡಿತ | ಅವನ ಹೃದಯದ ಮಿಡಿತ

ಟೈಟಲ್ ನೀವೇ ಕೊಡಿ

ಇಮೇಜ್
ಮಾತು ಮಾತು ಮಾತು, ಏನು ಗುರು ಏನೇನೋ "ಮಾತು ಮಾತು" ಅಂತ ಕೋರಿತಾನೆ ಅನ್ಕೋಬೇಡಿ. ಒಂದಿನ ದೊಡ್ಡ ಮನಸಿನ ವ್ಯಕ್ತಿಯ ಮಾತು ಕೇಳ್ಕೊಂದು ಕುಂತಿದ್ದೆ. ತಾಳಿಕೋಟಿ ದಾಟಿ ಒಂದೆರಡು ಕಿಲೋಮೀಟರ್ ಮುಂದೆ ಹೋಗಿ ಯೂಟ್ಯೂಬನ್ಯಾಗ್ ನೋಡಕತ್ತಿದೆ. ಹೆಂಗಿದ್ರು2GB ಇತ್ತು, ಇನ್ನೇನು ಒಳ್ಳೆ 1080p ಕ್ವಾಲಿಟಿನ ಇಟ್ಟು ನೋಡಕತ್ತಿದೆ. ಬೆಂಕಿ🔥 Sennheiser headset🎧, ಬೆನಿಗಿಡದ ನೆಳ್ಳು ಒಟ್ನಲ್ಲಿ ಬಾರಿ ಇತ್ತು. "AI Generated image using OpenAI's DALL•E" ನೀವು ಒಬ್ಬ ಮಹಾನ್ ವ್ಯಕ್ತಿ! ನೀವು ಆ ನಾಯಿ🐕 ಮಾಡಿದ್ದು ತಪ್ಪು ಎಂದು ತಿಳಿದು ಸುಮ್ಮನೇ ಅದನ್ನು ನೋಡುತ್ತಾ ಕುಳಿತಿದ್ದಿರಲ್ಲ ಬೇಜಾರಾಗುವದಿಲ್ವಾ?  ಕೇಳಿದ ಪ್ರಶ್ನೆಗೆ ಒಂದು ಕ್ಷಣವೂ ವಿಚಲಿತನಾಗದೆ, ನೋಡಿ ಸ್ವಾಮಿ, ನೀವು ತಪ್ಪು ತಿಳಿದಿದ್ದೀರಾ ಆ ನಮ್ಮ ನಾಯಿಯು ಒಂದು ಮಹಾನ ಅರ್ಥಶಾಸ್ತ್ರ ಪರಿಣಿತೆ, ನಮ್ಮ ದೇಶದ ಆರ್ಥಿಕ ಬೆಳವಣಿಗೆ ಅಪಾರ ಕೊಡುಗೆ ಕೊಟ್ಟಿದೆ, ಇದರಿಂದ ನಾವು ಖುಷಿ ಪಡಬೇಕು ವಿನಃ ಬೇಜಾರು ಮಾಡಿಕೊಳ್ಳುವ ಪ್ರಸಂಗವೇ ಬರುವದಿಲ್ಲ ಎಂದು ಮೈಕ್ ಕೆಳಗಿಳಿಸಿದ. ಆ ನಿರೂಪಕ ವಿಚಲಿತನಾಗಿ, ಅಲ್ಲ ಸರ್ ಆ ನಾಯಿ ಮನೆಯ ಹೊರಗಡೆ ನಿಲ್ಲಿಸಿದ ಆ ಬೈಕ್ ಸೀಟ್ ಅರಿದು ಹಾಕಿದೆ, ಮನೆಯ ಮುಂದೆಯಲ್ಲ ಕಸ ಹಾಕಿದೆ ಮತ್ತೆ ಇನ್ನೇನೋ ಅನಾಹುತ ಮಾಡಿದೆ ನೀವು ನೋಡಿದರೆ ಆ ನಾಯಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಅಂತಿರಲ್ಲ ಸ್ವಲ್ಪ ಬಿಡಿಸಿ ಹೇ...

ಬಾವಿಯ ಕಪ್ಪೆ

ಇಮೇಜ್
ಬಾವಿಯ ಕಪ್ಪೆ: ಸರ್, ನಿಧಾನವಾಗಿ ಕ್ಲಚನ್ ಬ್ರೇಕಿಂಗ್ ಪಾಯಿಂಟಗೆ ಬಿಟ್ಟು, ಬ್ರೇಕ್ ನಿಧಾನವಾಗಿ ಬಿಡಿ. ಬ್ರೇಕ್, ಕ್ಲಚ್, ಅಕ್ಸೆಲರೇಟರ್, ರೈಟ್ ಇಂಡಿಕೆಟಾರ್, ಸರ್ ಲೆಫ್ಟ್ ಇಂಡಿಕೆಟಾರ್, ಲೆಫ್ಟ್ ಅಲ್ಲೇ ಇರಿ, ಸರ್ ರೈಟಗೆ ಹೋಗ್ಬೇಡಿ ಸ್ಟೆಯರಿಂಗ್ ಸ್ಟ್ರೇಟಲ್ಲೆ ಇರ್ಲಿ ಅನ್ನುವಷ್ಟರಲ್ಲಿ ಏನೋ ಶಬ್ದ ಬಂದಂಗೆ ಐತು, ಏನು ಅಂತೆ ನೋಡಿದ್ರೆ ಮಾರ್ನಿಂಗ್ 5.30ಗೆ ಇದ್ದ ಅಲಾರಂ. ನಾನು ಡ್ರೈವಿಂಗ್ ಕ್ಲಾಸ್ ಸೇರಿದ ಸಮಯ ಯಾಕೋ ಸರಿ ಇಲ್ಲ. ಸಮಸ್ಯೆಗಳ ಮೇಲೆ ಸಮಸ್ಯೆಗಳು! ಆ ಸಮಸ್ಯೆಗಳಿಗೆ ಏನೋ ಪರಿಹಾರ ಮಾಡಿ ಕ್ಲಾಸ್ ಒಂದು ದಿನಾಂಕ ನಿಗದಿಪಡಿಸಿದೆ, ನನ್ನ ದುರಾದೃಷ್ಟ ಅದೇ ಸಮಯದಲ್ಲಿ ವಾತಾವರಣದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿ ನಮ್ಮ ಬೆಂಗಳೂರಿನ ವಾತಾವರಣವನ್ನೇ ಬದಲಿಸಿತು. ಕೆಲವು ಸಾರಿ ನಾವು ಅದೃಷ್ಟ ಮಾಡಿರುತ್ತೇವೋ ಏನೋ ಗೊತ್ತಿಲ್ಲ, ನನಗೆ ಏನು ಹೇಳಿ ಕೊಡದ ಶಿಕ್ಷಕ ಸಿಕ್ಕರು ಪರವಾಗಿಲ್ಲ, ಇಷ್ಟು ಇಷ್ಟಕ್ಕೆ ಸಿಡಿಮಿಡಿಯಾಗುವ ವ್ಯಕ್ತಿತ್ವದ ಮನುಶ್ಯ ಅಂದ್ರೆ ಆ ಕಡೆ ಹೋಗುವದೇ ಇಲ್ಲ, ಹೀಗೆ ಕೆಲವು ವರ್ಷಗಳ ಹಿಂದೆ ಬೇರೆ ಕಾರ್ ಡ್ರೈವಿಂಗ್ ಸ್ಕೂಲನ ಕ್ಲಾಸ್ ಅಟೆಂಡ್ ಮಾಡೋದೇ ಬಿಟ್ಟು ಬಿಟ್ಟೆ. ನನ್ನ ಅದೃಷ್ಟ ಚೆನ್ನಾಗಿತ್ತು ಈ ಸಾರಿ ಒಬ್ಬ ಒಳ್ಳೆಯ ಟ್ರೈನರ್ ಸಿಕ್ಕರು, ಒಂದು ಮೂರು ನಾಲ್ಕು ಕ್ಲಾಸ್ ಅವರೇ ಇದ್ದ ಕಾರಣ ಕಾರ ಹೊಡಿಸೋದು ಸ್ವಲ್ಪ ಮಟ್ಟಿಗೆ ಭರವಸೆ ಬರುವಷ್ಟರಲ್ಲಿ ಒಂದು ದಿನ ಬೇರೆಯ ಟ್ರೈನರ್ ಬಂದರು. ಇನ್ನೊಬ್ಬ ಟ್ರೈನ...

ಮೇ ಕೊನೆಯ ವಾರದ ಕಥೆ

ಇಮೇಜ್
ವರುಣನ ಆಗಮನಕ್ಕೆ ಎಸ್ಟೋ ದಿನಗಳಿಂದ ಕಾಯುತ್ತಿದ್ದ ಕನ್ನಡಿಗರು ಆವತ್ತು ಮಾತ್ರ ವರುಣನಿಗೆ ದಿಗ್ಬಂಧನವೇರಲು ಶುರುಮಾಡಿದರು ಆದರೂ ವರುಣನೂ ತನ್ನ ಆರ್ಭಟವನ್ನು ಶುರುಮಾಡಿದ ವರುಣ ಕೊನೆಗೆ ಇರಲಿ ಪಾಪ ಆಟ ಮುಂದುವರೆಯಲಿ ಅಂತೆ ಸುಮ್ಮನಾದ! ನಮ್ಮ ಯಾತ್ರಿಯ ಕಾರ್ ಡ್ರೈವರ್ ಮೊಬೈಲ್ ಮತ್ತೆ ನನ್ನ ಮೊಬೈಲ್ ಅಲ್ಲಿ ಉಚಿತವಾಗಿ ಸಿಗುವ ಜಿಯೋ ಸಿನಿಮಾದ ಆರ್ಭಟ. ಮೊದಲು ಖುಷಿಯಲ್ಲಿ ಆಟವಾಡುತ್ತಾ ಇದ್ದ ಮಗಳು ಮಳೆ ಬರುತ್ತಿದ್ದಹಾಗೆ ಗುಡುಗು, ಸಿಡಿಲು, ಕತ್ತಲು ಮತ್ತು ಶಕೆಗೆ ಸ್ವಲ್ಪ ಸಮಯ ರಾದಾಂತವನ್ನೇ ಶುರುಮಾಡಿ ಅಜ್ಜಿಯ ಮಡಿಲಲ್ಲಿ ನಿದ್ರೆಗೆ ಜಾರಿದಳು. ಆಟ ನಡೆಯುತ್ತಿರುವ ಕಾರಣ ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಬರುತ್ತಿರುವ ಹಾಗೆ ಟ್ರಾಫಿಕ್ ಜಾಸ್ತಿಯಾಗತೊಡಗಿತು ಮತ್ತು ಮಳೆರಾಯನು ಸ್ವಲ್ಪ ಜಾಸ್ತಿಯಾಗತೊಡಗಿದ ಆದರೆ ನನಗೆ ಮಾತ್ರ ಆರ್ಸಿಬಿ ಮ್ಯಾಚ್ ನ ಕುತೂಹಲ ಮಾತ್ರ ಏನೋ ಜಾಸ್ತಿಯಾಗತೊಡಗಿತು. ಕ್ರಿಕೆಟ್ ನೋಡುವುದನ್ನೇ ಕಡಿಮೆ ಮಾಡಿದ ನನಗೆ ಆರ್ಸಿಬಿ ತಂಡದ “come back” ಸತತ ಗೆಲುವುಗಳು, ಛಲ ಬಿಡದ ಪ್ರದರ್ಶನ ತುಂಬಾ ಇಷ್ಟವಾಗಿತ್ತು, ಅದಕ್ಕೇ ಅನಿಸುತ್ತೆ ಕುತೂಹಲ ಜಾಸ್ತಿಯಾಗಿ ಮಗಳು, ಮಳೆ, ಊರಿಗೆ ಹೋಗುವ ಕುತೂಹಲಕಿಂತ ಕ್ರಿಕೆಟ್ ಮೇಲೆನೆ ಜಾಸ್ತಿ ಒಲವಾಗಿದ್ದು ಅನಿಸ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಎಂದೇ ಹೆಸರುವಾಸಿಯಾದ ಆರ್ಸಿಬಿ vs CSK ಮ್ಯಾಚ್ ನಮ್ಮ ಆರ್ಸಿಬಿ ಹುಡುಗರ ರೋಚಕ ಆಟದಿಂದ ಗೆಲ್ಲುವೂ ಸಾದಿಸಿದ್ದು ಮನಸಿಗೆ ಆನಂದ ಪರಮಾನಂದ! ...

ಒಂದು ಪಯಣ

ಇಮೇಜ್
ಬರ್ವೆವ್ವ ಇಲ್ಲಿ ಬೇನಿ ಗಿಡದ ನೆಳ್ಳಾದ ಕುಡಮ್ರಿ ಅಂತೆ ಮುಂದಾಳತ್ವ ವಹಿಸಿದ್ದ ಮಹಿಳೆ ದೇವಸ್ಥಾನಕ್ಕೆ ಬಂದಂತ ಮಹಿಳಾ ಸಂಗಡಿಗರಿಗೆ ಆಹ್ವಾನವಿತ್ತು, ಬಸ್ಸಿಗಾಗಿ ಕಾಯ ತೊಡಗಿದರು. 41 ಡಿಗ್ರಿ ತಾಪಮಾನದಲ್ಲಿ ಉರಿಯುತ್ತಿರುವ ಬಿಸಿಲಿಗೆ ಪಾಪ ಆ ಮಹಿಳೆಯರು ಬೆಂದು ಹೋಗಿದ್ದರು. ದೇವರ ದರ್ಶನಕ್ಕೆ ೫೦೦ಮೀಟರಗಿಂತಲೂ ಎತ್ತರ ಗುಡ್ಡ ಹತ್ತಬೇಕು ಮತ್ತು ಬಸ್ ಸ್ಟಾಪ್ ಇಂದ ಒಂದು ಕಿಲೋಮೀಟರ ದೂರವಿರುವ ದೇವಸ್ಥಾನವದು. ಅದಕ್ಕೆ ನಾನು ಸ್ವಲ್ಪ ಬೇಗ ರೆಡಿ ಹಾಗಿ ಮನೆಯಿಂದ ಹೊರಬಂದು ಯಾರಾದ್ರೂ ಗೆಳೆಯರ ಜೊತೆ ಸೇರಿ ಬಿಸಿಲು ಕಾಯುವಷ್ಟರಲ್ಲೇ ಹೋಗಿ ಬರಲು ನಿರ್ಧರಿಸಿದೆ, ದುರಾದೃಷ್ಟ ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಬಿಜಿ ಇದ್ದ ಕಾರಣಕ್ಕೆ ಬರಲು ಒಪ್ಪಲಿಲ್ಲ. ಬಸ್ ಅಲ್ಲಿ ಹೋಗಲೂ ನನಗೆ ಇಷ್ಟ ಇರ್ಲಿಲ್ಲ ಅದಕ್ಕೆ ವಾಪಸ್ ಮನೆಗೆ ಹೋಗಿ ಟಿವಿ ನೋಡುತ್ತಾ ಕುಳಿತೆ. ಸುಮಾರು ಸಮಯದ ಬಳಿಕ ಒಬ್ಬ ಗೆಳೆಯ ಕಾಲ್ ಮಾಡಿ ಇವಾಗ ಹೋಗೋಣ ಅಂತೆ ಹೇಳಿದ. ಆಗಾಗಲೇ ಸುಮಾರು ೧೧ ಗಂಟೆ, ಬಿಸಿಲು ಗಗನ ಬೆದಿಸಿ ದರೆಯನ್ನು ಸುಡಲು ಪ್ರಯತ್ನಿಸುತ್ತಿತ್ತು. ನಮಗೂ ಹುಚ್ಚು ಧೈರ್ಯ ಮತ್ತು ಗಾಡಿ ಇರುವ ಕಾರಣ ಬರೀ ೨೫ಕಿಲೋ ಮೀಟರ್, ಬೇಗ ಹೋಗಿ ಬರುವೆವು ಅನ್ನುವ ನಂಬಿಕೆ, ಆ ಗೆಳೆಯ ಬಂದ ತಕ್ಷಣ ಕೋಲ್ಡ್ ಡ್ರಿಂಕ್ಸ್ ಕುಡಿದು ಹೊರಟೆವು. ತುಂಬಾ ದಿನಗಳ ನಂತರ ಬೇಟಿಯಾದ ನಾವು ಹಳೆಯ ನೆನಪುಗಳನ್ನು ಮೇಲಕು ಗೆಳೆಯರ ಜೀವನದ ಬಗ್ಗೆ ಮಾತನಾಡುತ್ತಾ ಹೊರಟೆವು. ಮೂರು ಕಿಲೋಮೀಟರ್ ಕ್ರಮಿಸಿದ ...

ಮಗಳು

ಇಮೇಜ್
ಮುದ್ದು ಮುಖದವಳು ಮುಗುಳು ನಗೆಯವಳು ಮಹಾನ ಗಾಂಭೀರ್ಯದವಳು ಗುಂಡವ್ವ | ನನ್ನ ಮುದ್ದಿನಮಗಳು ಲಕ್ಷ್ಮಿಯು ನೀನು ಸರಸ್ವತಿಯು ನೀನು ಮನೆ ಮಗಳು ನೀನು ಗುಂಡವ್ವ | ನನ್ನ ಮುದ್ದಿನಮಗಳು ಮುತ್ತುರತ್ನದಂತವಳು ನಕ್ಷತ್ರಗಳೇ ನಾಚುವಂತವಳು ಮನೆಯ ಮುದ್ದು ಮಗಳು ಗುಂಡವ್ವ | ನನ್ನ ಮುದ್ದಿನಮಗಳು ✍️S-BOSS SHARANU

ಶರಣರ ನಾಡಿನ ನದಿಗಳ ಅಂತರ್ಜಲದ ಕಳವಳಿ

ಇಮೇಜ್
ಇತ್ತೀಚೆಗೆ ನಮಗೆ ದಿನಬೆಳಗಾದರೆ ಕಾಡುವ ಸಮಸ್ಯೆ ಎಂದರೆ ಅದು ನೀರಿನ ಸಮಸ್ಯೆ, ಅದು ಬೆಂಗಳೂರಿನಂಥ ಮಹಾನಗರವಿರಲಿ ಅಥವಾ ಪುಟ್ಟ ಪಟ್ಟಣವಿರಲಿ ಕುಡಿಯುವ ನೀರಿನ ಅಭಾವ ತಡೆಯಲು ಹರಸಾಹಸ ನಡೆಯುತ್ತಿರುವುದು ನಮಗೆಲ್ಲ ಗೊತ್ತಿದೆ. ಇದಕ್ಕೆ ಸಾಕ್ಷಿ ಒಂದೆ ವಾರದಲ್ಲಿ ಎರಡು ಬಂದ್ ಗಳನ್ನು ಕನ್ನಡಿಗರು ನೋಡಿದ್ದು/ಮಾಡಿದ್ದು ಆದರೆ ನಮ್ಮ ಕೆಲವೋಂದು ನಿರ್ದಾರಗಳೆ ಅದಕ್ಕೆ ಕಾರಣಗಳು ಅಂತೆ ತಿಳಿದರು ತಿಳಿಯದ ಹಾಗೆ ಇರುವ ಪರಿಸ್ತಿತಿ ಬಂದಿದೆ, ಬನ್ನಿ ಅದರ ಬಗ್ಗೆ ಸ್ವಲ್ಪ ಚರ್ಚಿಸೋಣ: ಅರಣ್ಯ ನಾಶ:  ಇತ್ತೀಚೆಗೆ  ಬಂದ  ಯುಎನ್‌ಎಫ್‌ ಸಿಸಿಸಿ ವರದಿಯ ಪ್ರಕಾರ  ಜಾಗತಿಕ ಅರಣ್ಯನಾಶಕ್ಕೆ   ಕೃಷಿಯು 80% ( ಜೀವನಾಧಾರ &  ವಾಣಿಜ್ಯ ಕೃಷಿಯು)  ಕಾರಣವಾಗಿದೆ. ಉಳಿದವು ಇತರ  ಚಟುವಟಿಕೆಗಳಿಂದ ಹಾಳಾಗುತ್ತಿದೆ. ಇದರ  ಜೊತೆಗೆ   ಮತ್ತೊಂದು ಕಾರಣವೆಂದರೆ ಹವಾಮಾನ ಬದಲಾವಣೆ &  ಕಾಳ್ಗಿಚ್ಚುಗಳು  ಅರಣ್ಯ ನಾಶದಲ್ಲಿ  ಪ್ರಮುಖ ಪಾತ್ರವಹಿಸುತ್ತಿವೆ. ಸ್ವಾರ್ಥ ಅಥವಾ ಇನ್ನಿತರ ಕಾರಣದಿಂದ ನಡೆಯುವ ಈ ಚಟುವಟಿಕೆಗಳು ವ್ಯತಿರಿಕ್ತ ಪರಿಣಾಮ ಬಿರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ನಮ್ಮ ರೈತರು ಕೊನೆಯ ಪಕ್ಷ ಬಹುವಾರ್ಷಿಕ ಬೆಳೆಗಳು ಬೆಳೆದರೆ ಸ್ವಲ್ಪ ಮಟ್ಟಿಗೆ ಮರಗಳ ಸಂಖ್ಯೆ ಜಾಸ್ತಿಯಾಗಬಹುದೆನೊ, ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕು. ಗಣಿಗಾರಿಕೆ (ಅಕ್ರಮ / ಸಕ್ರಮ): ಯಾವುದೇ ...