ಬಾವಿಯ ಕಪ್ಪೆ
ಬಾವಿಯ ಕಪ್ಪೆ:
ಸರ್, ನಿಧಾನವಾಗಿ ಕ್ಲಚನ್ ಬ್ರೇಕಿಂಗ್ ಪಾಯಿಂಟಗೆ ಬಿಟ್ಟು, ಬ್ರೇಕ್ ನಿಧಾನವಾಗಿ ಬಿಡಿ. ಬ್ರೇಕ್, ಕ್ಲಚ್, ಅಕ್ಸೆಲರೇಟರ್, ರೈಟ್ ಇಂಡಿಕೆಟಾರ್, ಸರ್ ಲೆಫ್ಟ್ ಇಂಡಿಕೆಟಾರ್, ಲೆಫ್ಟ್ ಅಲ್ಲೇ ಇರಿ, ಸರ್ ರೈಟಗೆ ಹೋಗ್ಬೇಡಿ ಸ್ಟೆಯರಿಂಗ್ ಸ್ಟ್ರೇಟಲ್ಲೆ ಇರ್ಲಿ ಅನ್ನುವಷ್ಟರಲ್ಲಿ ಏನೋ ಶಬ್ದ ಬಂದಂಗೆ ಐತು, ಏನು ಅಂತೆ ನೋಡಿದ್ರೆ ಮಾರ್ನಿಂಗ್ 5.30ಗೆ ಇದ್ದ ಅಲಾರಂ. ನಾನು ಡ್ರೈವಿಂಗ್ ಕ್ಲಾಸ್ ಸೇರಿದ ಸಮಯ ಯಾಕೋ ಸರಿ ಇಲ್ಲ. ಸಮಸ್ಯೆಗಳ ಮೇಲೆ ಸಮಸ್ಯೆಗಳು! ಆ ಸಮಸ್ಯೆಗಳಿಗೆ ಏನೋ ಪರಿಹಾರ ಮಾಡಿ ಕ್ಲಾಸ್ ಒಂದು ದಿನಾಂಕ ನಿಗದಿಪಡಿಸಿದೆ, ನನ್ನ ದುರಾದೃಷ್ಟ ಅದೇ ಸಮಯದಲ್ಲಿ ವಾತಾವರಣದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿ ನಮ್ಮ ಬೆಂಗಳೂರಿನ ವಾತಾವರಣವನ್ನೇ ಬದಲಿಸಿತು.
ಕೆಲವು ಸಾರಿ ನಾವು ಅದೃಷ್ಟ ಮಾಡಿರುತ್ತೇವೋ ಏನೋ ಗೊತ್ತಿಲ್ಲ, ನನಗೆ ಏನು ಹೇಳಿ ಕೊಡದ ಶಿಕ್ಷಕ ಸಿಕ್ಕರು ಪರವಾಗಿಲ್ಲ, ಇಷ್ಟು ಇಷ್ಟಕ್ಕೆ ಸಿಡಿಮಿಡಿಯಾಗುವ ವ್ಯಕ್ತಿತ್ವದ ಮನುಶ್ಯ ಅಂದ್ರೆ ಆ ಕಡೆ ಹೋಗುವದೇ ಇಲ್ಲ, ಹೀಗೆ ಕೆಲವು ವರ್ಷಗಳ ಹಿಂದೆ ಬೇರೆ ಕಾರ್ ಡ್ರೈವಿಂಗ್ ಸ್ಕೂಲನ ಕ್ಲಾಸ್ ಅಟೆಂಡ್ ಮಾಡೋದೇ ಬಿಟ್ಟು ಬಿಟ್ಟೆ. ನನ್ನ ಅದೃಷ್ಟ ಚೆನ್ನಾಗಿತ್ತು ಈ ಸಾರಿ ಒಬ್ಬ ಒಳ್ಳೆಯ ಟ್ರೈನರ್ ಸಿಕ್ಕರು, ಒಂದು ಮೂರು ನಾಲ್ಕು ಕ್ಲಾಸ್ ಅವರೇ ಇದ್ದ ಕಾರಣ ಕಾರ ಹೊಡಿಸೋದು ಸ್ವಲ್ಪ ಮಟ್ಟಿಗೆ ಭರವಸೆ ಬರುವಷ್ಟರಲ್ಲಿ ಒಂದು ದಿನ ಬೇರೆಯ ಟ್ರೈನರ್ ಬಂದರು.
ಇನ್ನೊಬ್ಬ ಟ್ರೈನರ್ ಯಾವಾಗಲೂ ಪಿಸುಗುಡುವ ಮನುಷ್ಯ, ಸ್ಟೆರಿಂಗ್, ಕ್ಲಚ ಬಗ್ಗೆ ಚೆನ್ನಾಗಿ ಹೇಳಿದರು. ಮತ್ತು ನಮಗೆ ಸ್ವಲ್ಪ ಮಟ್ಟಿಗೆ ಸ್ವತಂತ್ರ ಕೊಟ್ಟ ಕಾರಣಕ್ಕೆ ಕಾರ್ ಹೊಡಿಸುವದಕ್ಕಿಂತ ಬೇರೆ ವಿಷಯಗಳ ಚರ್ಚೆ ಜಾಸ್ತಿನೇ ಆಯ್ತು ಮತ್ತೆ ಒಂದು ಘಂಟೆ ಕಾರ ಹೊಡಿಸದೇ ಅಂತೆ ಗೊತ್ತೇ ಹಾಗಲಿಲ್ಲ. ಹಳೆಯ ಕಾರು ಅನ್ನೋದು ಬಿಟ್ಟರೆ ಒಂದು ಪುಟ್ಟ ಕಾರು ಹೊಡಿಸೋದೆ ಒಂದು ಮಜಾ ಅನಿಸಿತು.
ಮತ್ತೆ ಮರುದಿನ ಹಳೆಯ ಟ್ರೈನರ್ ಹಾಗೆ ಕೆಲವು ಕ್ಲಾಸ್ ಮುಗಿದ ಮೇಲೆ ನನಗೆ ಮಾರ್ನಿಂಗ್ ಎದ್ದು ಕ್ಲಾಸ್ ಹೋಗಿ ಆಮೇಲೆ ಆಫೀಸ್ ಹೋಗಿ ಮನೆಗೆ ಬಂದು ಮಗು ಜೊತೆ ಆಟ ಹೀಗೆ ಸಮಯದ ಅಭಾವ ಕಾಡತೊಡಗಿತು. ಮಾರ್ನಿಂಗ್ ಕ್ಲಾಸ್ ಕ್ಯಾನ್ಸಲ್ ಮಾಡಿ ವೀಕೆಂಡ್ ಕ್ಲಾಸ್ ಸೇರಿದೆ.
ಒಂದು ಭಾನುವಾರ ಬೆಳಿಗ್ಗೆ ಕ್ಲಾಸ್, ಹಬ್ಬದ ಪ್ರಯುಕ್ತ ನಮ್ಮ ಬೆಂಗಳೂರು ರಸ್ತೆಗಳು ಖಾಲಿ ಖಾಲಿ, ಮತ್ತೆ ಒಬ್ಬ ಹೊಸ ಟ್ರೈನರ್, ಹೊಸ ಕಾರು. ನಮ್ಮ ಹೊಸ ಟ್ರೈನರ್ ಕಾರು ನನ್ನ ಕೈಯಲ್ಲಿ ಕೊಟ್ಟು ಆರಾಮಾಗಿ ಕೂತರು. ಸೆಕೆಂಡ್ ಗೆಯರ್ ಅಲ್ಲಿ 30KM ಓಡಿಸಿದೆ, ಕಡಿಮೆ ಇನ್ಸ್ಟ್ರಕ್ಷನ್ ಅಲ್ಲಿ 30KM ಓಡಿಸಿದ ಖುಷಿಯಲ್ಲಿ ಒಂದು ವಾರ ತಳ್ಳಿದೆ. ಮುಂದಿನ ವಾರ ಮತ್ತೆ ಮೊದಲನೇ ಟ್ರೈನರ್ ಬಂದರು, ನಾನು 100ಕ್ಕೆ 100% ಕಾಂಫಿಡೆಂಟ್ ಅಲ್ಲಿ ಕಾರ್ ಹತ್ತಿದೆ ಆಮೇಲೆ ಗೊತ್ತಾಯ್ತು, ಕಾರ ಹೊಡಿಸೋದು ಅಷ್ಟೊಂದು ಈಜಿ ಅಲ್ಲ, ಅದಕ್ಕೆ ADAS, Connected Car ಅಂತ ತಂತ್ರಜ್ಞಾನ ಬಂದಿರೋದು ಅನಿಸಿತು. ಕಳೆದ ವಾರ ಖಾಲಿ ರೋಡ್, ಹೊಸ ಕಾರು, ಜಾಸ್ತಿ ಗೆಯರ್, ಕ್ಲಚ್ ಮಾಡುವ ಗೋಜಿಗೆ ಹೋಗದೆ ಕಾರು ಓಡಿಸಿ ಇನ್ನೇನು ನನಗೆ ಡ್ರೈವಿಂಗ್ ಬಂದೆ ಬಿಡ್ತು ಅಂತೆ ಬಿಗುವಾಗ ತಿಳಿತು ನಾನು ಬರಿ ಭಾವಿಯಲ್ಲಿನ ಕಪ್ಪೆ, ಈ ಟ್ರಾಫಿಕ್, ಬೇರೆ ಬೇರೆ ಗೆಯರ್ ಚೇಂಜ್ ಮಾಡೋದು, ಕ್ಲಚ ಹಾಕೋದು ಬಿಡೋದು... ಹೀಗೆ ತಲೆ ಕೆಟ್ಟು ಹೋಯಿತು. ಕೊನೆಗೆ ಡೌನ್ ಅಲ್ಲಿ ಹೇಗೆ ಕಾರ್ ಹೊಡಿಸೋದು, up ಅಲ್ಲಿ ಹೇಗೆ, ಪಾರ್ಕಿಂಗ್ ಅಯ್ಯೋ ಶಿವನೇ ನಮಗ್ಯಾಕೆ ಬರಿ ಎರಡು ಕಣ್ಣು ಕೊಟ್ಟೆ ಮೈತುಂಬ ಕಣ್ಣುಗಳು ಇರಬಾರದಿತ್ತಾ ಅನಿಸಿ, ಕಾರ್ ಡ್ರೈವಿಂಗ್ ಒಂದು ಸಾಗರ್, ಕಲಿಯುವುದು ತುಂಬಾ ಇದೆ. ಎಲ್ಲವೂ ಬಂತು ಅಂತೆ ಬಿಗುವುದು ಬೇಡ ಅಂತೆ ಅನಿಸಿತು.
ಕಲಿಕೆಯೇ ಹಾಗೆ ನಮಗೆ ಬೇರೆ ಬೇರೆ ಗುರುಗಳು ಸಿಗ್ತಾರೆ, ಬೇರೆ ಬೇರೆ ವಿಷಯಗಳು ಇರ್ತಾವೆ ನಾವು ಸ್ವಲ್ಪ ಏನೋ ನೋಡಿ, ಎಲ್ಲವೂ ಬಂತು ನಾನು ಇದರಲ್ಲಿ ಪ್ರವೀಣ ಅಂತೆ ಮೈ ಮರೆತು ಕಲಿಯುವದನ್ನು ಬಿಟ್ಟರೆ, ನಮ್ಮಂತ ಮೂರ್ಖರು ಯಾರು ಹಾಗುವದಿಲ್ಲ. ಪ್ರತಿ ದಿನ ಬೇರೆ ಬೇರೆ ರೀತಿಯ ಸವಾಲುಗಳು ಬರುವವು, ಬೇರೆ ಬೇರೆ ರೀತಿಯ ಸಮಸ್ಯೆಗಳು ಬರುವವು, ನಾನು ಶ್ರದ್ಧೆಯಿಂದ ಬಗೆಹರಿಸಿ ಮುನ್ನುಗ್ಗಬೇಕೆ ವಿನಹ, ಎಲ್ಲವೂ ನನಗೆ ಗೊತ್ತು ಅಂತೆ ಬಿಗಬಾರದು. ಕೊನೆಯದಾಗಿ ಬೆಳೆಯಬೇಕಂದರೆ ಕಲಿಯಬೇಕು ಹಾಗೂ ಬದುಕಬೇಕಂಡರು ಕಲಿಯಬೇಕು, ಕಲಿಯದನ್ನು ನಿಲ್ಲಿಸದಿರಿ.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ