ಟೈಟಲ್ ನೀವೇ ಕೊಡಿ

ಮಾತು ಮಾತು ಮಾತು, ಏನು ಗುರು ಏನೇನೋ "ಮಾತು ಮಾತು" ಅಂತ ಕೋರಿತಾನೆ ಅನ್ಕೋಬೇಡಿ. ಒಂದಿನ ದೊಡ್ಡ ಮನಸಿನ ವ್ಯಕ್ತಿಯ ಮಾತು ಕೇಳ್ಕೊಂದು ಕುಂತಿದ್ದೆ. ತಾಳಿಕೋಟಿ ದಾಟಿ ಒಂದೆರಡು ಕಿಲೋಮೀಟರ್ ಮುಂದೆ ಹೋಗಿ ಯೂಟ್ಯೂಬನ್ಯಾಗ್ ನೋಡಕತ್ತಿದೆ. ಹೆಂಗಿದ್ರು2GB ಇತ್ತು, ಇನ್ನೇನು ಒಳ್ಳೆ 1080p ಕ್ವಾಲಿಟಿನ ಇಟ್ಟು ನೋಡಕತ್ತಿದೆ. ಬೆಂಕಿ🔥 Sennheiser headset🎧, ಬೆನಿಗಿಡದ ನೆಳ್ಳು ಒಟ್ನಲ್ಲಿ ಬಾರಿ ಇತ್ತು.

"AI Generated image using OpenAI's DALL•E"

ನೀವು ಒಬ್ಬ ಮಹಾನ್ ವ್ಯಕ್ತಿ! ನೀವು ಆ ನಾಯಿ🐕 ಮಾಡಿದ್ದು ತಪ್ಪು ಎಂದು ತಿಳಿದು ಸುಮ್ಮನೇ ಅದನ್ನು ನೋಡುತ್ತಾ ಕುಳಿತಿದ್ದಿರಲ್ಲ ಬೇಜಾರಾಗುವದಿಲ್ವಾ? 
ಕೇಳಿದ ಪ್ರಶ್ನೆಗೆ ಒಂದು ಕ್ಷಣವೂ ವಿಚಲಿತನಾಗದೆ, ನೋಡಿ ಸ್ವಾಮಿ, ನೀವು ತಪ್ಪು ತಿಳಿದಿದ್ದೀರಾ ಆ ನಮ್ಮ ನಾಯಿಯು ಒಂದು ಮಹಾನ ಅರ್ಥಶಾಸ್ತ್ರ ಪರಿಣಿತೆ, ನಮ್ಮ ದೇಶದ ಆರ್ಥಿಕ ಬೆಳವಣಿಗೆ ಅಪಾರ ಕೊಡುಗೆ ಕೊಟ್ಟಿದೆ, ಇದರಿಂದ ನಾವು ಖುಷಿ ಪಡಬೇಕು ವಿನಃ ಬೇಜಾರು ಮಾಡಿಕೊಳ್ಳುವ ಪ್ರಸಂಗವೇ ಬರುವದಿಲ್ಲ ಎಂದು ಮೈಕ್ ಕೆಳಗಿಳಿಸಿದ. ಆ ನಿರೂಪಕ ವಿಚಲಿತನಾಗಿ, ಅಲ್ಲ ಸರ್ ಆ ನಾಯಿ ಮನೆಯ ಹೊರಗಡೆ ನಿಲ್ಲಿಸಿದ ಆ ಬೈಕ್ ಸೀಟ್ ಅರಿದು ಹಾಕಿದೆ, ಮನೆಯ ಮುಂದೆಯಲ್ಲ ಕಸ ಹಾಕಿದೆ ಮತ್ತೆ ಇನ್ನೇನೋ ಅನಾಹುತ ಮಾಡಿದೆ ನೀವು ನೋಡಿದರೆ ಆ ನಾಯಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಅಂತಿರಲ್ಲ ಸ್ವಲ್ಪ ಬಿಡಿಸಿ ಹೇಳುವಿರಾ ಅಂತೆ ಕೇಳಿದ.

ನೋಡಿ ಸ್ವಾಮಿ, ಇಂದು ನಮ್ಮ ರೂರಲ್ ಏಕಾನಾಮಿ ಡೆವಲೋಪ ಆಗಬೇಕು ಅಂದ್ರೆ ನಮ್ಮ ದೇಶದ ಪ್ರೊಡ್ಯೂಕ್ಷನ್ ಜಾಸ್ತಿ ಆಗಬೇಕು, ನಮ್ಮ ಪ್ರೊಡ್ಯೂಕ್ಷನ್ ಜಾಸ್ತಿ ಆಗಬೇಕು ಅಂದ್ರೆ ನಮ್ಮಲ್ಲಿ ಬೇಡಿಕೆ ಜಾಸ್ತಿಯಾಗಬೇಕು.ಇಂದು ಆಟೋಮೋಟಿವ್ ಕ್ಷೇತ್ರದಲ್ಲಿ ಏನಾದ್ರು ಬದಲಾವಣೆ ಬೇಕಂದ್ರೆ ನಮ್ಮಲ್ಲಿ ಒಳ್ಳೆಯ ಬೇಡಿಕೆಯಿಂದ ಮಾತ್ರ ಅದಕ್ಕೆ ನಮ್ಮ ನಾಯಿ ಹಾಗೆ ಮಾಡಿದ್ದು ಅಂತೆ ಹೇಳಿ ಮತ್ತೆ ಮೈಕ್ ಕೆಳಗಿಳಿಸಿ. ಪಾಪ ಆ ನಿರೂಪಕನಿಗೆ ಏನು ತೋಚದೆ,, ಸರ್ ಸ್ವಲ್ಪ ವಿವರವಾಗಿ ಹೇಳಿದ್ರೆ ನಮ್ಮ ವೀಕ್ಷಕರಿಗೆ ಒಂದು ಒಳ್ಳೆಯ ವಿಚಾರವನ್ನು ನಮ್ಮ ಚಾನೆಲ್ ಮುಖಾಂತರ ತಿಳಿದುಕೊಳ್ಳುತ್ತಾರೆ ಅನ್ನುವಷ್ಟರಲ್ಲಿ ಮತ್ತೆ ಮೈಕ್ ತೆಗೆದುಕೊಂಡು "ನೋಡಿ ನಮ್ಮ ನಾಯಿ ಆ ಬೈಕ್ ಸೀಟ್ ಹರಿದು ಹಾಕಿತು, ಇದರಿಂದ ಆ ವ್ಯಕ್ತಿ ಅಲ್ಲೇ ಪಕ್ಕದಲ್ಲಿ ಇದ್ದ ಅಂಗಡಿಗೆ ಹೋಗಿ ಹೊಸ ಸೀಟ್ ಕವರ ಹಾಕಿಸಿದ. ನೋಡಿ ನಮ್ಮ ನಾಯಿ ಮಾಡಿದ ಮಹಾನ ಕಾರ್ಯದಿಂದ ಆ ಅಂಗಡಿಯವನ ವ್ಯವಹಾರ ಜಾಸ್ತಿ ಆಯ್ತು, ಅದನ್ನು ಸಾಗಣೆ ಮಾಡಿದವರಿಗೆ, ಅದನ್ನು ಉತ್ಪಾದಿಸಿದವರಿಗೆ, ಅಲ್ಲಿಯ ಕಾರ್ಮಿಕರಿಗೆ ಎಲ್ಲರಿಗೂ ಕೆಲಸದ ಜೊತೆ ಆರ್ಥಿಕವಾಗಿ ನೆರವು ಸಿಕ್ಕಂತಾಯಿತು" ಇದು ಒಳ್ಳೆಯ ಕೆಲಸ ತಾನೇ ಮತ್ತೇಕೆ ಬೇಜಾರು ಮಾಡ್ಕೋಬೇಕು ಅಂತೇ ಹೇಳಿದ. ಆ ನಿರೂಪಕನಿಗೆ ಮಾತುಗಳೇ ಇಲ್ಲದಂತಾಯಿತು. 

"AI Generated image using OpenAI's DALL•E"

ಸೂರ್ಯನ ಬಿಸಿಲು ಆ ಬೆನಿಗಿಡದ ಒಳಗ ನುಗ್ಗಿ ಮೈಯೆಲ್ಲ ಬಿಸಿ ಆಯ್ತು, ತಲೆ ಕೆಟ್ಟೋಗಿ ಆ ಕಡೆ ಹೋಗಿ ಬೇರೆ ಚಾನೆಲ್ ನೋಡಲು ಶುರಿಮಾಡಿದೆ. ಶಿವನೇ ಅಲ್ಲಿನು ಆ ಮಹಾನ ವ್ಯಕ್ತಿನೆ ಅದನಲ್ಲೋ😳 ಅಂತೇ ಮುಂದುವರಿಸಿದೆ...

ನಿಮ್ಮ ಕಾರಿನ ಗಾಜು ಒಡೆದೋಗಿದೆಯಲ್ಲಾ ಸರ್, ಏನಾಯಿತು ಅಂತೆ ಪತ್ರಕರ್ತ ಕೇಳುತ್ತಿದ್ದಂತೆ ರೊಚ್ಚಿಗೆದ್ದ ಆ ಮಹಾನ ವ್ಯಕ್ತಿ, ನೋಡಿ ಸ್ವಾಮಿ! ಆ ಬಡವ ರಾಸ್ಕಲ್ ಹಸು ನಿಲ್ಲಿಸಿದ ನನ್ನ ಕಾರಿಗೆ ಗುದ್ದಿ ಈ ಅವಸ್ಥೆ ಮಾಡಿದೆ, ನಾನು ಸುಮ್ಮನೆ ಬಿಡುವುದಿಲ್ಲ ಆ ಹಸು ಮತ್ತೆ ಮಾಲೀಕನನ್ನು ಇವತ್ತೇ ಹಿಡಿದು ಸರಿಯಾಗಿ ಪಾಠ ಕಲಿಸುತ್ತೇನೆ, ದುಡ್ಡು ಯಾರು ಅವನ ಅಪ್ಪ ಕೊಡುತ್ತಾನ, ಕೋಟಿ ಕಾರಿದು, ಸುಮ್ಮ ಸುಮ್ಮನೆ ಹಾದಿ ಬೀದಿಯಲ್ಲಿ ಹಸು ಬಿಟ್ಟರೆ ಹೆಂಗೆ? ಆ ಖರ್ಚುಗಳನ್ನು ಅವರೇ ಬರಿಸಬೇಕು ಇಲ್ಲ ಅಂದ್ರೆ ಆ ಹಸು ನಮ್ಮ ಮನೆಯಲ್ಲಿ ಕಟ್ಟುತ್ತೇನೆ ಅಂತೆ ರೊಚ್ಚಿಗೆದ್ದು ಹೊರಟು ಹೋದರು. 

ನನ್ನ ತಲಿಮ್ಯಾಲಿನ Sennheiser ತೆಗಿದು, ಕಣ್ಣು ಮುಚ್ಚಿದ್ರೆ ಕಂಡಿದ್ದು ಎರಡು ಮುಖಗಳು. ನಾವು ನನ್ನದು, ನಮ್ಮದು ಅಂತೇ ಬಂದಾಗ ಎಂತ ವಿಷಯಗಳಿದ್ದರು ನಮಗೆ +ve ಹಾಗೆ ಕಾಣುತ್ತೆ ಆದರೆ ಅದೇ ನಮಗೆ ಬೇರೆಯವರಿಂದ ಏನಾದ್ರು ಆದರೆ ಆಕಾಶವೇ ತಲೆಯ ಮೇಲೆ ಬಿದ್ದಹಾಗೆ ಮಾಡುತ್ತೇವೆ. ಇದುವೇ ಜಗದ ನಿಯಮನಾ? ಅಂತೇ ಯೋಚಿಸಿತ್ತಾ ಮನೆಗೆ ಹೊರಟೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗಳು

ಅವಳು ಮಗಳು😍