ಶರಣರ ನಾಡಿನ ನದಿಗಳ ಅಂತರ್ಜಲದ ಕಳವಳಿ





ಇತ್ತೀಚೆಗೆ ನಮಗೆ ದಿನಬೆಳಗಾದರೆ ಕಾಡುವ ಸಮಸ್ಯೆ ಎಂದರೆ ಅದು ನೀರಿನ ಸಮಸ್ಯೆ, ಅದು ಬೆಂಗಳೂರಿನಂಥ ಮಹಾನಗರವಿರಲಿ ಅಥವಾ ಪುಟ್ಟ ಪಟ್ಟಣವಿರಲಿ ಕುಡಿಯುವ ನೀರಿನ ಅಭಾವ ತಡೆಯಲು ಹರಸಾಹಸ ನಡೆಯುತ್ತಿರುವುದು ನಮಗೆಲ್ಲ ಗೊತ್ತಿದೆ. ಇದಕ್ಕೆ ಸಾಕ್ಷಿ ಒಂದೆ ವಾರದಲ್ಲಿ ಎರಡು ಬಂದ್ ಗಳನ್ನು ಕನ್ನಡಿಗರು ನೋಡಿದ್ದು/ಮಾಡಿದ್ದು ಆದರೆ ನಮ್ಮ ಕೆಲವೋಂದು ನಿರ್ದಾರಗಳೆ ಅದಕ್ಕೆ ಕಾರಣಗಳು ಅಂತೆ ತಿಳಿದರು ತಿಳಿಯದ ಹಾಗೆ ಇರುವ ಪರಿಸ್ತಿತಿ ಬಂದಿದೆ, ಬನ್ನಿ ಅದರ ಬಗ್ಗೆ ಸ್ವಲ್ಪ ಚರ್ಚಿಸೋಣ:


ಅರಣ್ಯ ನಾಶ: ಇತ್ತೀಚೆಗೆ ಬಂದ ಯುಎನ್‌ಎಫ್‌ಸಿಸಿಸಿ ವರದಿಯ ಪ್ರಕಾರ ಜಾಗತಿಕ ಅರಣ್ಯನಾಶಕ್ಕೆ ಕೃಷಿಯು 80% (ಜೀವನಾಧಾರ & ವಾಣಿಜ್ಯ ಕೃಷಿಯು) ಕಾರಣವಾಗಿದೆ. ಉಳಿದವು ಇತರ ಚಟುವಟಿಕೆಗಳಿಂದ ಹಾಳಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಕಾರಣವೆಂದರೆ ಹವಾಮಾನ ಬದಲಾವಣೆ & ಕಾಳ್ಗಿಚ್ಚುಗಳು ಅರಣ್ಯ ನಾಶದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಸ್ವಾರ್ಥ ಅಥವಾ ಇನ್ನಿತರ ಕಾರಣದಿಂದ ನಡೆಯುವ ಈ ಚಟುವಟಿಕೆಗಳು ವ್ಯತಿರಿಕ್ತ ಪರಿಣಾಮ ಬಿರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ನಮ್ಮ ರೈತರು ಕೊನೆಯ ಪಕ್ಷ ಬಹುವಾರ್ಷಿಕ ಬೆಳೆಗಳು ಬೆಳೆದರೆ ಸ್ವಲ್ಪ ಮಟ್ಟಿಗೆ ಮರಗಳ ಸಂಖ್ಯೆ ಜಾಸ್ತಿಯಾಗಬಹುದೆನೊ, ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕು.

ಗಣಿಗಾರಿಕೆ (ಅಕ್ರಮ / ಸಕ್ರಮ): ಯಾವುದೇ ನವೀಕರಣಗೊಳಿಸಲಾಗದ ಸಂಪನ್ಮೂಲವನ್ನು ಹೊರತೆಗೆಯುವುದು ಗಣಿಗಾರಿಕೆ, ಅಂದರೆ ಉಪಯುಕ್ತ ಖನಿಜಗಳು ಅಥವಾ ಇತರ ಭೂವೈಜ್ಞಾನಿಕ ವಸ್ತುಗಳನ್ನು (ಸಾಮಾನ್ಯವಾಗಿ ಅದಿರುಗಳು, ಲೋಹಗಳು ಅಥವಾ ಕಲ್ಲಿದ್ದಲ ಪದರ) ಭೂಮಿಯಿಂದ ಹೊರತೆಗೆಯುವುದು. ಗಣಿಗಾರಿಕೆ ನಡೆಸಲು ಮರಗಳನ್ನು ನಾಶಪಡಿಸುವುದು, ವಿಷಪೂರಿತ ರಾಸಾಯನಿಕ ಹೊರಸುಸುವಿಕೆ ಮತ್ತು ಇನ್ನು ಹಲವು ಸಮಸ್ಯೆಗಳು ಗಣನೀಯ ರಿತಿಯ ಪರಿಸರ ಹಾಳುಮಾಡಲು ಸಹಕಾರಿಯಾಗಿದೆ. ಆದರೆ ಇದು ಮಾನವನಿಗೆ ಅತಿ ಮುಖ್ಯವಾದ ಆರ್ಥಿಕ & ದಿನನಿತ್ಯ ಬೇಕಾದ ಅವಶ್ಯಕತೆಯನ್ನು ಒದಗಿಸುವ ಪ್ರಕ್ರಿಯೆಯಾದರಿಂದ ಅಕ್ರಮ & ಸಕ್ರಮವೆಂದು ಬೇರ್ಪಡಿಸಿ ಸುಮ್ಮನಾಗಿದ್ದೆವೆ. ಸರ್ಕಾರಗಳು ಇದನ್ನು ಗಂಬಿರವಾಗಿ ಪರಿಗಣಿಸಿ ಸೂಕ್ತನಿರ್ದಾರಗಳನ್ನು ತೆಗೆದುಕ್ಕೋಳ್ಳುವ ಮೂಲಕ ಒಂದು ಹಂತದ ಸಮಸ್ಯೆಯನ್ನು ತಡೆಯಬಹುದು.

ಕೈಗಾರಿಕೆಗಳ ತ್ಯಾಜ್ಯ: 
ಕಾರ್ಖಾನೆಗಳು, ಗಿರಣಿಗಳು ಅಥವಾ ಗಣಿಗಾರಿಕೆ ಚಟುವಟಿಕೆಗಳಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಅನುತ್ಪಾದಕವಾಗಿ ಉಳಿದಿರುವ ತ್ಯಾಜ್ಯವನ್ನು ಕೈಗಾರಿಕಾ ತ್ಯಾಜ್ಯ ಎಂದು ಕರೆಯಬಹುದು, ಅದನ್ನು ಸರಿಯಾದ ರಿತಿಯಲ್ಲಿ ಸಂಸ್ಕರಣೆ ಮಾಡಿ, ಪರಿಸರಕ್ಕೆ ಆಗುವ ಅನಾನುಕೂಲಗಳನ್ನು ತಡೆಯಬಹುದು, ಆದರೆ ತರಾತುರಿಯಲ್ಲಿ ಹಾಗೆಯೆ ಬಿಟ್ಟರೆ ಪರಿಸರದಲ್ಲಾಗುವ ದುಷ್ಪರಿಣಾಮ ಯಾರು ತಡೆಯಲಾಗುವುದಿಲ್ಲ. ಇದರ ಜೋತೆಗೆ ಊರು, ಪಟ್ಟಣದ ಕಲುಷಿತ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಿಸಿದರೆ ಸ್ವಲ್ಪ ಮಟ್ಟಿಗೆ ಜಲ ಮಾಲಿನ್ಯ ತಡೆಯಬಹುದು. ಸರ್ಕಾರಗಳು, ಕಾರ್ಖಾನೆಗಳು, ಜನರು ಸಂಘಟಿತವಾಗಿ ಇದನ್ನು ಗಂಬಿರವಾಗಿ ಪರಿಗಣಿಸಿ ಸೂಕ್ತನಿರ್ದಾರಗಳನ್ನು ತೆಗೆದುಕ್ಕೋಳ್ಳುವ ಮೂಲಕ ಒಂದು ಹಂತದ ಸಮಸ್ಯೆಯನ್ನು ತಡೆಯಬಹುದು.

ಅತಿಯಾದ ಬೋರ್ವೆಲ್ ಕೊರೆತಗಳು: ಆದುನಿಕ ಕೃಷಿ ಪದ್ದತಿಯಲ್ಲಿ ಅದರಲ್ಲೂ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಜವಾಬ್ದಾರಿಯಲ್ಲಿ ಬೋರ್ವೆಲ್ ಗಳ ಮೊರೆಹೋಗಿರುವ ಕಾರಣ ಭೂಮಿಯ ಅಂತರ್ಜಲ ಮಟ್ಟ ಕಡಿಮೆ ಮಾಡುತ್ತಿದ್ದೇವೆ ಆದರೆ ಇದಕ್ಕೆ ಕೃಷಿ ಹೊಂಡ, ಕೆರೆಗಳ ಅಬಿವೃದ್ದಿಗಳಂತ ಹಲವು
ಪರ್ಯಾಯ ಮಾರ್ಗಗಳಿವೆ ಈ ಬಗ್ಗೆ ಸೂಕ್ತ ಕ್ರಮ ಕೈಗೋಳ್ಳಬೇಕು.

ಮೂಢನಂಬಿಕೆಗಳು: ಮನುಷ್ಯ ನಾಗರಿಕನಾದಷ್ಟು ಮತ್ತು ವಿದ್ಯಾವಂತನಾದಷ್ಟು ಮೂಢನಂಬಿಕೆ ಆಚರಣೆಗೆ ದಾಸನಾಗಿರುತ್ತಿರುವ ಹಲವು ಉದಾಹರಣೆಗಳು ನಾವು ನೋಡಬಹುದಾದ, ನದಿ ಅಥವಾ ಕೋಳಗಳಲ್ಲಿ ತಂದು ಬಿಡುವ ಬಟ್ಟೆ, ಇನ್ನಿತರ ಚಟುವಟಿಕೆಗಳಿಂದ ಇಂದು ನದಿಗಳು ಕಲುಷಿತವಾಗುತ್ತಿದ್ದಾವೆ, ನಾವು ಸ್ವಲ್ಪ ಜಾಗುರಕರಾಗಿ ಸ್ವಚ್ಚತೆಯನ್ನು ನದಿಗಳ ದಡದಲ್ಲಿ ಕಾಪಾಡುವ ಅವಶ್ಯಕತೆಯಿದೆ.

ಪ್ರವಾಸೋದ್ಯಮದ ದುರ್ಬಳಕೆಗಳು: ಪ್ರವಾಸೋದ್ಯಮದ ಹೆಸರಿನಲ್ಲಿ ಜನರು ಹೋಟೆಲ್ ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸೌಲಭ್ಯಗಳನ್ನು ನಿರ್ಮಿಸುತ್ತಿದ್ದಾರೆ, ಇದರಿಂದಾಗಿ ನೀರು ಮತ್ತು ಪ್ರಕೃತಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರಗಳು, ಪ್ರವಾಸೋದ್ಯಮ ಏಜೆಂಟ್‌ಗಳು ಅಥವಾ ಕಂಪನಿಗಳು, ಜನರು ಸಂಘಟಿತವಾಗಿ ಇದನ್ನು ಗಂಬಿರವಾಗಿ ಪರಿಗಣಿಸಿ ಸೂಕ್ತನಿರ್ದಾರಗಳನ್ನು ತೆಗೆದುಕ್ಕೋಳ್ಳುವ ಮೂಲಕ ಒಂದು ಹಂತದ ಸಮಸ್ಯೆಯನ್ನು ತಡೆಯಬಹುದು.

Thanks 
Sharanu B

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍