ಮೇ ಕೊನೆಯ ವಾರದ ಕಥೆ
ವರುಣನ ಆಗಮನಕ್ಕೆ ಎಸ್ಟೋ ದಿನಗಳಿಂದ ಕಾಯುತ್ತಿದ್ದ ಕನ್ನಡಿಗರು ಆವತ್ತು ಮಾತ್ರ ವರುಣನಿಗೆ ದಿಗ್ಬಂಧನವೇರಲು ಶುರುಮಾಡಿದರು ಆದರೂ ವರುಣನೂ ತನ್ನ ಆರ್ಭಟವನ್ನು ಶುರುಮಾಡಿದ ವರುಣ ಕೊನೆಗೆ ಇರಲಿ ಪಾಪ ಆಟ ಮುಂದುವರೆಯಲಿ ಅಂತೆ ಸುಮ್ಮನಾದ! ನಮ್ಮ ಯಾತ್ರಿಯ ಕಾರ್ ಡ್ರೈವರ್ ಮೊಬೈಲ್ ಮತ್ತೆ ನನ್ನ ಮೊಬೈಲ್ ಅಲ್ಲಿ ಉಚಿತವಾಗಿ ಸಿಗುವ ಜಿಯೋ ಸಿನಿಮಾದ ಆರ್ಭಟ. ಮೊದಲು ಖುಷಿಯಲ್ಲಿ ಆಟವಾಡುತ್ತಾ ಇದ್ದ ಮಗಳು ಮಳೆ ಬರುತ್ತಿದ್ದಹಾಗೆ ಗುಡುಗು, ಸಿಡಿಲು, ಕತ್ತಲು ಮತ್ತು ಶಕೆಗೆ ಸ್ವಲ್ಪ ಸಮಯ ರಾದಾಂತವನ್ನೇ ಶುರುಮಾಡಿ ಅಜ್ಜಿಯ ಮಡಿಲಲ್ಲಿ ನಿದ್ರೆಗೆ ಜಾರಿದಳು. ಆಟ ನಡೆಯುತ್ತಿರುವ ಕಾರಣ ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಬರುತ್ತಿರುವ ಹಾಗೆ ಟ್ರಾಫಿಕ್ ಜಾಸ್ತಿಯಾಗತೊಡಗಿತು ಮತ್ತು ಮಳೆರಾಯನು ಸ್ವಲ್ಪ ಜಾಸ್ತಿಯಾಗತೊಡಗಿದ ಆದರೆ ನನಗೆ ಮಾತ್ರ ಆರ್ಸಿಬಿ ಮ್ಯಾಚ್ ನ ಕುತೂಹಲ ಮಾತ್ರ ಏನೋ ಜಾಸ್ತಿಯಾಗತೊಡಗಿತು. ಕ್ರಿಕೆಟ್ ನೋಡುವುದನ್ನೇ ಕಡಿಮೆ ಮಾಡಿದ ನನಗೆ ಆರ್ಸಿಬಿ ತಂಡದ “come back” ಸತತ ಗೆಲುವುಗಳು, ಛಲ ಬಿಡದ ಪ್ರದರ್ಶನ ತುಂಬಾ ಇಷ್ಟವಾಗಿತ್ತು, ಅದಕ್ಕೇ ಅನಿಸುತ್ತೆ ಕುತೂಹಲ ಜಾಸ್ತಿಯಾಗಿ ಮಗಳು, ಮಳೆ, ಊರಿಗೆ ಹೋಗುವ ಕುತೂಹಲಕಿಂತ ಕ್ರಿಕೆಟ್ ಮೇಲೆನೆ ಜಾಸ್ತಿ ಒಲವಾಗಿದ್ದು ಅನಿಸ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಎಂದೇ ಹೆಸರುವಾಸಿಯಾದ ಆರ್ಸಿಬಿ vs CSK ಮ್ಯಾಚ್ ನಮ್ಮ ಆರ್ಸಿಬಿ ಹುಡುಗರ ರೋಚಕ ಆಟದಿಂದ ಗೆಲ್ಲುವೂ ಸಾದಿಸಿದ್ದು ಮನಸಿಗೆ ಆನಂದ ಪರಮಾನಂದ! ಆ ಜೋಶ್ ಅಲ್ಲಿ ಬಸ್ ಅಲ್ಲಿ ನಿದ್ದೆ ಮಾಡುವುದನ್ನೇ ಮರೆತು ಹೋಗಿದ್ದೆ, ಮಳೆಯ ಕಾರಣ ಟ್ರಾಫಿಕ್ ಜಾಸ್ತಿಯಾಗಿ ಆ ಬಸ್ ಊರು ತಲುಪುವುದು ಲೇಟ್ ಆಯಿತು.
ರವಿವಾರ ಸಾಯಂಕಾಲವರೆಗೂ ಹಾಗೆ ಏನೇನೋ ಮಾಡುತ್ತ ಸಮಯ ಕಳೆದೆ ಸ್ವಲ್ಪ ನಿದ್ದೆ ಮಾಡಿ ಆಯಾಸ ಕಳೆಯೋಣ ಅಂದ್ರೆ ಮನೆಯಲ್ಲಿ ಇದ್ದ ಜಂಜಾಟದಲ್ಲಿ ನಿದ್ದೆ ಮಾಡುವುದು ಕಷ್ಟ ಮತ್ತು ಸಾಯಂಕಾಲ ಸ್ವಲ್ಪ ಮಳೆ ಊರಲ್ಲಿ ಬರಲು ಶುರು ಮಾಡಿತು, ಇದನ್ನೇ ಕಾಯುತ್ತಿದ್ದ ನಮ್ಮ ಎಲೆಕ್ಟ್ರಿಕಲ್ ಬೋರ್ಡ್ ಕರೆಂಟ್ ಸ್ವಲ್ಪ ಸಮಯ ತೆಗೆದರು ಮುಗೀತು ಆ ಶಕೆಯಲ್ಲಿ ಮತ್ತು ಸೊಳ್ಳೆಗಳ ಮದ್ಯ ಮಲಗುವುದು ಕಷ್ಟದ ಕೆಲಸ. ಬೆಳಿಗ್ಗೆ ಬೇಗ ಎದ್ದು ರೆಡಿ ಆಗಿ ಒಂದು ಸರ್ಕಾರಿ ಕೆಲಸದ ನಿಮಿಷ ನಮ್ಮ ಹಳೆಯ ತಾಲೂಕು ಕಚೇರಿಗೆ ಗೆಳೆಯರ ಜೊತೆ ಹೊರಟೆ. ನಮ್ಮ ದುರಾದೃಷ್ಟ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಸರ್ವರ್ ಡೌನ್ ಅಂತೆ ಯಾವ ಕೆಲಸವು ಹಾಗಲಿಲ್ಲ🤦 ಮತ್ತೆ ವಾಪಸ ಊರಿಗೆ ಬಂದು ಬ್ಯಾಗ್ ರೆಡಿ ಮಾಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೇ. ಕೊನೆಯ ಗಳಿಗೆಯಲ್ಲಿ ಬಸ್ ಟಿಕೆಟ್ ಬುಕ್ ಮಾಡಿದ ಕಾರಣ ಒಳ್ಳೆಯ ಸೀಟ್ ಸಿಗಲಿಲ್ಲ ಹಾಗೆ ನಿದ್ದೆಯೂ ಹಾಗಲಿಲ್ಲ. ಬೆಳಗ್ಗೆ ಮನೆಗೆ ಬೇಗ ಬಂದು ರೆಡಿ ಹಾಗಿ ಆಫೀಸ್ ಹೊರಟೆ. ಮೊದಮೊದಲು ಅಷ್ಟೊಂದು ಸುಸ್ತು ಅನಿಸದಿದ್ದರೂ ಬೆಳಗಿನ ತಿಂಡಿ ತಿಂದ ತಕ್ಷಣ ಎಲ್ಲಿತ್ತೋ ಏನೋ ಆ ಗಾಢ ನಿದ್ರೆ ಕಾಡತೊಡಗಿತು! ಆದರೆ ಕೆಲಸದ ನಿಮಿತ್ತ ನಿದ್ರೆಗೆ ಜಾರುವುದು ನನಗೆ ಇಷ್ಟ ಇರಲಿಲ್ಲ. ಹೆಂಗೋ ಮ್ಯಾನೇಜ್ ಮಾಡುತ್ತ ದಿನ ಕಳೆದೆ. ಜವಾಬ್ದಾರಿಗಳು ಜಾಸ್ತಿ, ಕೆಲಸ ಜಾಸ್ತಿ ಅದರಲ್ಲೂ ಕೆಲವು ದಿನಗಳಿಂದ ನಿದ್ರೆ ಇಲ್ಲ! ಆವತ್ತು ಲೇಟ್ ಹಾಗಿ ಮನಗಿ ಬೇಗ ಎದ್ದು ಕೆಲಸಕ್ಕೆ ಹೊರಟೆ, ತಿಂಡಿ ತಿನ್ನುವಾಗ ಮಾಡಿದ ನಿರ್ಧಾರ “ಫಿಸಿಕಲ್ ವರ್ಕ್ ಬೇಗ ಮುಗಿಸಿ ಆಮೇಲೆ ರಿಮೋಟ್ ಅಲ್ಲಿ ಮಾಡೋಣ” ಏನೋ ಚೆನ್ನಾಗಿತ್ತು ಆದರೆ ಮನೆಗೆ ಹೋಗುವಷ್ಟರಲ್ಲಿ ರಾತ್ರಿ 1.30am ಅಂದು ಆರ್ಸಿಬಿ ಸೋಲು ಸ್ವಲ್ಪ ಮನ ನೋಯಿಸಿತು. ಮತ್ತೆ ಅದೇ ನಿದ್ದೆ ಕಡಿಮೆ ಬೆಳಿಗ್ಗೆ ಬೇಗ ಹೇಳುವ ಚಾಳಿ. ಅವತ್ತು ಆಫೀಸ್ ಅಲ್ಲಿ ಏನೋ ಡಲ್ಲ ಹೊಡಿಯುತ್ತಾ ಮುಖ ಯಾವಾಗಲೂ ನಿದ್ರೆಯಲ್ಲೆ ಕಾಣುತ್ತಿತ್ತು, ಕೆಲಸ ಮುಗಿಸಿ ಮನೆಗೆ ಬಂದು ಸುಮ್ಮನೆ ಕುಳಿತಿದ್ದ ನೆನಪು ಎಚ್ಚರವಾದಾಗ ಬೆಳಗಿನ ಜಾವ 6am. ಸ್ವಲ್ಪ ತಲೆನೋವು ಮತ್ತು ಸುಸ್ತು ಕಾರಣ ಮನೆಯಿಂದಲೇ ಕೆಲಸ ಮಾಡಲು ನಿರ್ಧರಿಸಿದೆ, ಆಫೀಸ್ ಜಂಜಾಟಗಳು ತಪ್ಪಿದವು ಆದರೆ ಪೆಂಡಿಂಗಲ್ಲಿ ಇದ್ದ ನಿದ್ರೆ ಮಾತ್ರ ಆಗಲಿಲ್ಲ. ಬ್ಯಾಕ್ ಟು ಬ್ಯಾಕ್ ಕೆಲಸಗಳು ಮುಗಿಯುದರಲ್ಲಿ ರಾತ್ರಿ 11 ಗಂಟೆ! ಸ್ವಲ್ಪ ಸ್ಟ್ರೆಸ್ ಲೆವಲ್ ಕಡಿಯಾದರೂ ನಿದ್ದೆ ಇನ್ನು ಬೇಕಿತ್ತು. ಏನೋ ಗೊತ್ತಿಲ್ಲ ಮತ್ತೆ ಬೇಗ ಎಚ್ಚರವಾಯಿತು! ದೇಹಕ್ಕೆ ನಿದ್ದೆ ಬೇಕಿದೆ ಆದರೆ ನಿದ್ದೆ ಬರುತ್ತಿಲ್ಲ ಏನು ಮಾಡೋದು ಅಂತೆ ಮೊಬೈಲ್ ಅಲ್ಲೇ ಕಾಲ ಕಳೆದೆ. ಬೆಳಿಗ್ಗೆ ಶಾಪಿಂಗ್ ಹೋಗಿ, ಗಾಡಿ ಸ್ವಲ್ಪ ರೆಪೈರ್ ಮಾಡಿ ಮನೆಗೆ ಬರುವಷ್ಟರಲ್ಲಿ ರಾತ್ರಿ ೮ ಗಂಟೆ, ಹಾಗೆಯೇ ಊಟ ಮಾಡಿ ನಿದ್ರೆಗೆ ಜಾರಿದೆ. ಬೆಳಿಗ್ಗೆ ಎದ್ದಾಗ ಸಮಯ ೮ ಗಂಟೆ, ತಿಂಡಿ ತಿಂದು ಸ್ವಲ್ಪ ಮಲಗಿದೆ. ಮಧ್ಯಾಹ್ನ ಊಟ ಮುಗಿಸಿ ಹಾಗೆ ಬಿನ್ ಬ್ಯಾಗ್ ಮೇಲೆನೆ ನಿದ್ರೆಗೆ ಜಾರಿದೆ, ಎದ್ದಾಗ ೬ ಗಂಟೆ ಆಗ ಎಲ್ಲ ಸ್ಟ್ರೆಸ್ ಕಡಿಮೆ ಅನಿಸಿದ್ದು.
ಎಲ್ಲರಿಗೂ ಜೀವನವಿರುತ್ತೆ, ಸಂಸಾರವಿರುತ್ತೆ, ಕೆಲಸ ಕಾರ್ಯಗಳಿರುತ್ತವೆ ಆದರೆ ಅವೆಲ್ಲಗಿಂತ ಮಿಗಿಲಾದದ್ದು ಆರೋಗ್ಯ, ನಿಮ್ಮ ಮನರಂಜನೆ, ಕೆಲಸ, ಸಂಸಾರದ ಜೊತೆ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಸರಿಯಾದ ನಿದ್ದೆ, ಊಟ ಮತ್ತು ವ್ಯಾಯಾಮ ಅವಶ್ಯಕ. ನಾನು ಇದೆಲ್ಲವನ್ನೂ ಮ್ಯಾನೇಜ್ ಮಾಡಲು ಕಲಿಯಬೇಕಿದೆ, ನೀವು ಕಲಿತಿರಿ ಆರೋಗ್ಯವಾಗಿರಿ👍
ವಿ ಸೂ: ಇದು ನನ್ನ ಸ್ವಂತ ಅನುಭವ, ಯಾವ ವ್ಯಕ್ತಿಯನ್ನಾಗಲಿ ಯಾರನ್ನಾಗಲಿ ದೂಷಿಸುವುದಿಲ್ಲ. ನನ್ನ ದೇಹ ನನ್ನ ನಿರ್ಧಾರಗಳಿಂದ ಹಾಳಾಗಬಾರದು ಅನ್ನುವುದೊಂದೇ ನನ್ನ ನಿಲುವು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ