ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಸವಣ್ಣನವರ ನೆನಪುಗಳು

ಇಮೇಜ್
ಬಸವಣ್ಣನವರ ನೆನಪುಗಳು 12ನೇ ಶತಮಾನವನ್ನು ಸುವರ್ಣ ಯುಗ, ಶರಣರ ಯುಗ, ಜ್ಞಾನದ ಯುಗ ಅಂತೇ ಹೇಳಿದರು ತಪ್ಪಾಗಲಾರದು. ಬಸವಣ್ಣನವರು, ಅಕ್ಕಮಹಾದೇವಿ ಹೀಗೆ ಹಲವಾರು ಶರಣರು ಬದುಕಿ ಕನ್ನಡ ನಾಡಿಗೆ ಹೆಸರು ತಂದು ಕೊಟ್ಟ ಯುಗ ಅದು. ಜಗತ್ತಿಗೆ ವಚನ ಸಾಹಿತ್ಯವನ್ನು ಪರಿಚಯಿಸಿದ ಸುವರ್ಣ ಯುಗವದು. ಇಂದು ವಿಶ್ವಗುರು ಬಸವಣ್ಣನವರ ಜಯಂತಿ, ಕೊರೊನಾ ಕಾರಣ ಎಲ್ಲರೂ ಮನೆಯಲ್ಲೇ ಕುಳಿತು ಅವರ ಒಂದಾದರೂ ವಚನವನ್ನು ನೆನಪಿಸಿಕೊಳ್ಳುತ್ತಾ ಅವರ ತತ್ವಗಳು, ಸಿದ್ದಾಂತಗಳನ್ನು ಅಳವಡಿಸೋಳ್ಳೋದು ಪ್ರತಿಯೊಬ್ಬರ ಕರ್ತವ್ಯ. ತಮ್ಮ ಪ್ರಾಣವನ್ನೇ ಲೆಕ್ಕಿಸದೆ 12ನೇ ಶತಮಾನದಲ್ಲಿದ್ದ ಜಾತಿ ಪದ್ಧತಿ/ವ್ಯವಸ್ಥೆ ವಿರುದ್ಧ ಹೋರಾಡಿದ ಮಹಾನ ಶರಣರು. ದುರದೃಷ್ಟಕರ ಅಂದರೆ ಜಾತಿ, ಮೇಲೂ, ಕೀಳು ಇನ್ನು ಕೆಲವೊಂದು ಕಡೆ ಇದೆ ಅಂದರೆ ತಪ್ಪಾಗಲಾರದು. ಕೆಲವು ಕಡೆ ಮನದಲ್ಲಿ ಹೆಮ್ಮರವಾದ ಜಾತಿಯ ಆರಾದನೆವಿದ್ದರು ಮೇಲ್ನೋಟಕ್ಕೆ ಏನು ಇಲ್ಲದ ಹಾಗೆ ನಟನೆಮಾಡುವ ಜನಗಳಿದ್ದಾರೆ. 21ನೇ ಶತಮಾನದಲ್ಲೂ ಅಂತರ್ಜಾತಿ ವಿವಾಹ ಒಂದು ದೊಡ್ಡ ಸವಾಲಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ನಗರಗಲ್ಲಿ ಜಾತಿ ಪದ್ಧತಿ ಸ್ವಲ್ಪ ಕಡಿಮೆ ಇದ್ದರೂ ಜಾತಿಯ ಆರಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಹುಟ್ಟುವ ಮಕ್ಕಳ ಹೆಸರಿನ ಜೊತೆ ತನ್ನ ಜಾತಿಯನ್ನು ಗುರುತಿಸುವ ಹಾಗೆ ನೋಡಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ. ಸ್ವಲ್ಪ ಜಾತಿಗಳು ಮೇಲ್ವರ್ಗ ಅಂತೇ ಬಿಂಬಿತವಾಗಿ ಕೆಳವರ್ಗ...

ಸತತ ಪರಿಶ್ರಮ, ಛಲಬಿಡದ ನಾಯಕ ಯಡಿಯೂರಪ್ಪ ನವರಿಗೆ ಒಂದು ಸಲಾಂ☺️

ಇಮೇಜ್
ಕೆಲವು ದಿನಗಳ ಹಿಂದೆಯಷ್ಟೇ ಒಂದು ವಿಡಿಯೋ ನೋಡಿದೆ, ಯಡಿಯೂರಪ್ಪ ಅವರು ಹೇಳಿದ ಮಾತು ಇನ್ನು ನೆನಪಿದೆ: Anchor: ಯಡಿಯೂರಪ್ಪನವರ್ ಅಹಿತಕರ ಘಟನೆ ಯಾವುದು, ಯಾವಾಗಲೂ ನೆನಪಲ್ಲಿರುವ ಘಟನೆ ಯಾವುದು? ಯಡಿಯೂರಪ್ಪನವರು: ಸುಮಾರು ವರ್ಷಗಳ ಹಿಂದೆ ನಾನು ಪಂಚಾಯತ್(ತಾಲೂಕ/ಜಿಲ್ಲಾ) ಸದಸ್ಯರಾಗಿದ್ದಾಗ ಒಬ್ಬ ವ್ಯಕ್ತಿ ಬಂದು ನನಗೆ ಹೊಡಿದ, ಅದರಿಂದ ನಾನು ತುಂಬಾ ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು, ಆಮೇಲೆ ನಾನು ದೃತಿಗೆಡದೆ ಮತ್ತೇ ರಾಜಕೀಯದಲ್ಲಿ ಸಕ್ರಿಯನಾದೆ, ಸಚಿವನಾದೆ, ಮುಖ್ಯಮಂತ್ರಿಯಾದೆ. ಸತತ ಪ್ರಯತ್ನವಿದ್ದರೆ ಎಲ್ಲವನ್ನು ಸಾಧಿಸಲು ಸಾಧ್ಯ ಅನ್ನುವದಕ್ಕೆ ಇದೊಂದು ಉದಾಹರಣೆ. ಹೌದಲ್ವಾ! ಅವರು ನಡೆದುಬಂದ ದಾರಿ ಒಂದು ಅಚ್ಚರಿ ಅಂದರೆ ತಪ್ಪಾಗಲಾರದು. ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ರಾಜಕೀಯ ಪಯಣಕ್ಕೆ ಶರಣಾಗಿ, ಭಾರತಿಯ ಜನತಾ ಪಾರ್ಟಿಯ ಪತಾಕಿಯನ್ನು ಅತಿರತ ಮಹಾರತ ನಾಯಕರ ಮದ್ಯ ಅಧಿಕಾರಕ್ಕೆ(ದಕ್ಷಿಣದಲ್ಲಿ)  ತರುವುದು ಸಾಮಾನ್ಯದ ಮಾತಲ್ಲ. ವಿರೋಧಪಕ್ಷದ ನಾಯಕನಾಗಿ ಮಾನ್ಯ ಮಾಜಿ ಪ್ರಧಾನಿ ದೇವೇಗೌಡರಿಂದ ಅವರ ಮಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿವರೆಗೂ ಫ್ಲೋರ್ ಟೇಸ್ಟ್ ಮಾಡಿಸುವುದನ್ನು ಬಿಟ್ಟಿಲ್ಲ. ಬಿಜೆಪಿ ಅಧ್ಯಕ್ಷರಾಗಿ,  ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ, ಹಣಕಾಸು ಮಂತ್ರಿ, ಮುಖ್ಯಮಂತ್ರಿ ಎಲ್ಲಾ ರೀತಿಯ ಪದವಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಹಿರಿಮೆ. ನಾವ...

ಏಕಾಂಗಿ ನಾನಲ್ಲ....

ಇಮೇಜ್
ಏಕಾಂಗಿ ನಾನಲ್ಲ, ಏಕಾಂಗಿ ನಾವಲ್ಲ ಎಲ್ಲರೂ ಸೇರಿ ದೇಶ ಮುನ್ನಡಿಸೋಣ... ಏಕಾಂಗಿ ನಾನಲ್ಲ, ಏಕಾಂಗಿ ನಾವಲ್ಲ ಎಲ್ಲರೂ ಸೇರಿ ದೇಶ ಮುನ್ನಡಿಸೋಣ... ನಟನಿಗೆ ಅಭಿನಯವು ಜೋಡಿ ಗಾಯಕನಿಗೆ ಸ್ವರ ನಾದವು ಜೋಡಿ ಕವಿಗೆ ತಾ ಕಾಣುವ ಸುಂದರ ಕನಸುಗಳ ಜೋಡಿ ಮತ್ಯಾಕೆ ಚಿಂತಿಸುವೆ ಓಹ್ ಗೆಳೆಯ ನಾನು ಒಂಟಿಯೆಂದು..!!! ಹುಟ್ಟುವಾಗ ತಾಯಿಯ ಹಕ್ಕರೆಯ ಜೋಡಿ ಬೆಳೆಯುತ್ತ ತಂದೆಯ ಪ್ರೀತಿಯ ಜೋಡಿ ಶಾಲೆ ಕಾಲೇಜಲ್ಲಿ ಗೆಳಯರ ಜೋಡಿ ಆಮೇಲೆ ಹೆಂಡತಿ ಮಕ್ಕಳ ಜೋಡಿ ಮತ್ಯಾಕೆ ಚಿಂತಿಸುವೆ ಓಹ್ ಗೆಳೆಯ ನಾನು ಒಂಟಿಯೆಂದು..!!! ಪ್ರೀತಿಗೆ ನಂಬಿಕೆಯೇ ಜೋಡಿ ನಂಬಿಕೆಗೆ ಸತ್ಯವೇ ಜೋಡಿ ಆ ಸತ್ಯಕ್ಕೆ ಯಾಕೆ ಮುಚ್ಚುಮರೆ??? ನಿನ್ನಲಿನ ಅಹಂಕಾರ, ಕೋಪ ಹೊರಗೇ ಹಾಕಿ ಪ್ರೀತಿ, ನಂಬಿಕೆಗೆ ಶರಣಾಗು ಗೆಳೆಯ... #ಶರಣು #Sharanu