ಸತತ ಪರಿಶ್ರಮ, ಛಲಬಿಡದ ನಾಯಕ ಯಡಿಯೂರಪ್ಪ ನವರಿಗೆ ಒಂದು ಸಲಾಂ☺️



ಕೆಲವು ದಿನಗಳ ಹಿಂದೆಯಷ್ಟೇ ಒಂದು ವಿಡಿಯೋ ನೋಡಿದೆ, ಯಡಿಯೂರಪ್ಪ ಅವರು ಹೇಳಿದ ಮಾತು ಇನ್ನು ನೆನಪಿದೆ:
Anchor: ಯಡಿಯೂರಪ್ಪನವರ್ ಅಹಿತಕರ ಘಟನೆ ಯಾವುದು, ಯಾವಾಗಲೂ ನೆನಪಲ್ಲಿರುವ ಘಟನೆ ಯಾವುದು?
ಯಡಿಯೂರಪ್ಪನವರು: ಸುಮಾರು ವರ್ಷಗಳ ಹಿಂದೆ ನಾನು ಪಂಚಾಯತ್(ತಾಲೂಕ/ಜಿಲ್ಲಾ) ಸದಸ್ಯರಾಗಿದ್ದಾಗ ಒಬ್ಬ ವ್ಯಕ್ತಿ ಬಂದು ನನಗೆ ಹೊಡಿದ, ಅದರಿಂದ ನಾನು ತುಂಬಾ ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು, ಆಮೇಲೆ ನಾನು ದೃತಿಗೆಡದೆ ಮತ್ತೇ ರಾಜಕೀಯದಲ್ಲಿ ಸಕ್ರಿಯನಾದೆ, ಸಚಿವನಾದೆ, ಮುಖ್ಯಮಂತ್ರಿಯಾದೆ. ಸತತ ಪ್ರಯತ್ನವಿದ್ದರೆ ಎಲ್ಲವನ್ನು ಸಾಧಿಸಲು ಸಾಧ್ಯ ಅನ್ನುವದಕ್ಕೆ ಇದೊಂದು ಉದಾಹರಣೆ.

ಹೌದಲ್ವಾ! ಅವರು ನಡೆದುಬಂದ ದಾರಿ ಒಂದು ಅಚ್ಚರಿ ಅಂದರೆ ತಪ್ಪಾಗಲಾರದು. ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ರಾಜಕೀಯ ಪಯಣಕ್ಕೆ ಶರಣಾಗಿ, ಭಾರತಿಯ ಜನತಾ ಪಾರ್ಟಿಯ ಪತಾಕಿಯನ್ನು ಅತಿರತ ಮಹಾರತ ನಾಯಕರ ಮದ್ಯ ಅಧಿಕಾರಕ್ಕೆ(ದಕ್ಷಿಣದಲ್ಲಿ)  ತರುವುದು ಸಾಮಾನ್ಯದ ಮಾತಲ್ಲ. ವಿರೋಧಪಕ್ಷದ ನಾಯಕನಾಗಿ ಮಾನ್ಯ ಮಾಜಿ ಪ್ರಧಾನಿ ದೇವೇಗೌಡರಿಂದ ಅವರ ಮಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿವರೆಗೂ ಫ್ಲೋರ್ ಟೇಸ್ಟ್ ಮಾಡಿಸುವುದನ್ನು ಬಿಟ್ಟಿಲ್ಲ. ಬಿಜೆಪಿ ಅಧ್ಯಕ್ಷರಾಗಿ, 
ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ, ಹಣಕಾಸು ಮಂತ್ರಿ, ಮುಖ್ಯಮಂತ್ರಿ ಎಲ್ಲಾ ರೀತಿಯ ಪದವಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಹಿರಿಮೆ.

ನಾವೆಲ್ಲ ಏನೋ ಒಂದು ಚುರು ಬೇಜಾರು ಆದರೆ ಅಥವಾ ಸೋತರೆ ಅಲ್ಲೇ ಬಿಟ್ಟು ಅಯ್ಯೋ ಸಾಕಪ್ಪಾ ಜೀವನ ಕೆಲ್ಸನು ಬೇಡ ಏನು ಬೇಡ ಅಂತೇ ಬಿಟ್ಟೋಗ್ತೀವಿ ಆದರೆ ತಮ್ಮ ಈ ಇಳಿ ವಯಸಲ್ಲು ಕೊರೊನಾ ಸೋಂಕಿನ ವಿರುದ್ಧ ಹೋರಾಟವನ್ನು, ಹೋರಾಟದಲ್ಲಿ ತೊಡಗಿಕೊಳ್ಳುವಿಕೆ ನೋಡಿದ್ರೆ ಛಲಬಿಡದ ನಾಯಕ ಬಿರುದ್ದಿಗೆ ಸರಿಸಮಾನರು ಅನಿಸುತ್ತೆ.

ಅವರ ರಾಜಕೀಯ ಜೀವನವೇನು ಅಂತ ಸರಳವಿಲ್ಲ 2007 ರಲ್ಲಿ 20:20 ಸೂತ್ರದ ಎಣೆದು ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುತ್ತಾರೆ ಆದರೆ ದುರಾದೃಷ್ಟ ಬರಿ ಏಳೇ ದಿನಗಳಲ್ಲಿ ರಾಜಕೀಯ ಬೆಳೆವಣಿಗೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬರುತ್ತೆ. ಮತ್ತೆ ಚಲಬಿಡದೆ ಮುಂದಿನ ಎಲೆಕ್ಷನ್ ಅಲ್ಲಿ ಹೆಚ್ಚು ಲೀಡ್ ಅಲ್ಲಿ ಗೆಲ್ಲುತ್ತಾರೆ, ಮುಖ್ಯಮಂತ್ರಿಯು ಆಗುತ್ತಾರೆ ಮತ್ತೆ ಅದೇ ದುರಾದೃಷ್ಟ, ಡಿನೋಟಿಫಿಕೇಷನ್, ಗಣಿ ಮುಂತಾದ ಹಗರಣಗಳಿಂದ ತಮ್ಮದೇ ಪಕ್ಷದ ನಾಯಕರಿಂದ ಹಿನ್ನಡೆಗೊಳಗಾಗಿ ಮತ್ತೆ ಹುದ್ದೆಯನ್ನು ತ್ಯಜಿಸಬೇಕಾಗುತ್ತೆ, ಕೆಲವೇ ದಿನಗಳಲ್ಲಿ ಜೈಲ್ ವಾಸವನ್ನು ಅನುಭವಿಸಿ ತನ್ನದೇಯಾದ ಪಕ್ಷದಿಂದ ಆದಂತಹ ಅಪಮಾನವನ್ನು ಧಿಕ್ಕರಿಸಿ ಸ್ವಂತ ಪಕ್ಷವನ್ನು ಕಟ್ಟುತ್ತಾರೆ. ನಮ್ಮಿಂದ ಪಕ್ಕದ ಮನೆಯವರ ಮನಸ್ಸನ್ನೇ ಗೆಲ್ಲುವುದು ಒಂದು ಚಾಲೆಂಜಿಂಗ್ ಇರುವಾಗ ಹೊಸ ಪಕ್ಷವನ್ನು ಕಟ್ಟುವುದು ಅದು ಕರ್ನಾಟಕದಂತ ರಾಜ್ಯದಲ್ಲಿ ಸಾಮಾನ್ಯದ ಮಾತಲ್ಲ. ಸೆಲ್ಫ್ ಕಾಂಫಿಡೆನ್ಸ್ ಮತ್ತು ತಮ್ಮ ಶಕ್ತಿಯನ್ನು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿ ಮತ್ತೆ ಬಿಜೆಪಿಯ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಹೆಚ್ಚು ಶಾಸಕರನ್ನು ಗೆಲ್ಲವಹಾಗೆ ಮಾಡುವಲ್ಲಿ ಅವರ ಕಾಣಿಕೆ ತುಂಬಾ ಇದೆ. ಅತಿಹೆಚ್ಚು ಶಾಸಕರಿದ್ದರು ಸರ್ಕಾರ ನಡೆಸಲು ಬೇಕಾದ ಮ್ಯಾಜಿಕ್ ನಂಬರ್ ಕೊರತೆಯಿಂದ ಎಲ್ಲಾ ಪಕ್ಷಗಳು ಪರಿತಪಿಸುವಾಗ ಇವರು ಮತ್ತೆ ಹೋಗಿ ಒಂದು ದಿನದ ಮುಖ್ಯಮಂತ್ರಿಯಾಗುತ್ತಾರೆ. ಮತ್ತೆ ಅದೇ ದುರಾದೃಷ್ಟ - ಮತ್ತೆ ರಾಜೀನಾಮೆ, ಆದರೂ ಸುಮ್ಮನೆ ಕೂಡದೆ ಛಲ ಬಿಡದೆ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವಹಾಗೆ ತನ್ನ ವಿರೋಧ ಪಕ್ಷದ ಶಾಸಕರನ್ನು ರಾಜೀನಾಮೆ ಕೊಡಿಸಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ನೋಡಿ ಇದು ಅಲ್ವಾ ನಿಜವಾದ ಚಾಲೆಂಜ್!.

ಬರಿ ರಾಜಕೀಯ ಚಾಲೆಂಜ್ ಮಾತ್ರವಲ್ಲ, ಅವರು ಅಧಿಕಾರದಲ್ಲಿ ಇರುವಾಗ ಬಂದ ಚಾಲೆಂಜಗಳು ಬೇರೆ ಮುಖ್ಯಮಂತ್ರಿಗಳಿಗೆ ಬಂದಿರುವುದು ತುಂಬಾ ಕಡಿಮೆ ಅನಿಸುತ್ತೆ. ಅವರ ದುರಾದೃಷ್ಟವೇನೋ ಅವರು ಮುಖ್ಯಮಂತ್ರಿಯಾದಾಗಲೇ ಕರ್ನಾಟಕ ರಾಜ್ಯದಲ್ಲಿ ಅತಿವೃಷ್ಟಿ ಅನಾವವೃಷ್ಟಿಯಂತಹ ಪ್ರಕೃತಿವಿಕೋಪಗಳು ನಡೆದವು, ಉತ್ತರ ಕರ್ನಾಟಕದ/ಮಲೆನಾಡು ಎಲ್ಲಾ ಜಿಲ್ಲೆಗಳು ಮಳೆಯಿಂದ ಆವೃತಿಯಾದಾಗ ಬಿಜೆಪಿಯ ಹೈಕಮಾಂಡ್ ಸಚಿವ ಸಂಪುಟ ರಚನೆಗೆ ಸಹಕಾರ ಕೊಡದೆ ಇದ್ದಾಗ ಒಬ್ಬರೇ ಏಕಾಗಿಯಾಗಿ ರಾಜ್ಯದ ತುಂಬಾ ಸಂಚರಿಸಿದರು. ಮತ್ತೆ ಈಗ ಕೋವಿಡ್19 ಅನ್ನುವ ಭಯಾನಕ ವೈರಸ್ ವಿರುದ್ಧ ಹಗಲಿರುಳು ಹೋರಾಡುತ್ತಿರುವುದು ನೋಡಿದರೆ ಹೆಮ್ಮೆ ಅನಿಸುತ್ತದೆ.

ರಾಜಕೀಯವಾಗಿ ಏನೇನೋ ಇರಬಹುದು ಆದರೆ ನೀವೊಬ್ಬ ಅಜಾತಶತ್ರು ನಾಯಕರಾಗಿ ಯುವಕರಿಕೆ ಸ್ಫೂರ್ತಿಯಾಗಿ ಇರುವದಕ್ಕೆ ಒಂದು ಶರಣು ನಿಮಗೆ...

ಯಡಿಯೂರಪ್ಪನವರ ಜೀವನದ ಕೆಲವು ಚಾಲೆಂಜ್ ಅನ್ನು ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ಇದು ಯಾವುದೋ ಪಕ್ಷದ ದೃಷ್ಟಿಯಿಂದ ಅಲ್ಲ, ಒಬ್ಬ ಮಾನವನಾಗಿ ಬರಿದಿರುವ ಖುಷಿ ಇದೆ... ಏನಾದ್ರು ತಪ್ಪುಗಳಿದ್ದರೆ ದಯವಿಟ್ಟು ಕಾಮೆಂಟ್ ಮಾಡಬೇಡಿ, ನನಗೆ ಕಾಲ್ ಮಾಡಿ ತಿಳಿಸಿ, ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍