ಬಸವಣ್ಣನವರ ನೆನಪುಗಳು


ಬಸವಣ್ಣನವರ ನೆನಪುಗಳು

12ನೇ ಶತಮಾನವನ್ನು ಸುವರ್ಣ ಯುಗ, ಶರಣರ ಯುಗ, ಜ್ಞಾನದ ಯುಗ ಅಂತೇ ಹೇಳಿದರು ತಪ್ಪಾಗಲಾರದು. ಬಸವಣ್ಣನವರು, ಅಕ್ಕಮಹಾದೇವಿ ಹೀಗೆ ಹಲವಾರು ಶರಣರು ಬದುಕಿ ಕನ್ನಡ ನಾಡಿಗೆ ಹೆಸರು ತಂದು ಕೊಟ್ಟ ಯುಗ ಅದು. ಜಗತ್ತಿಗೆ ವಚನ ಸಾಹಿತ್ಯವನ್ನು ಪರಿಚಯಿಸಿದ ಸುವರ್ಣ ಯುಗವದು.

ಇಂದು ವಿಶ್ವಗುರು ಬಸವಣ್ಣನವರ ಜಯಂತಿ, ಕೊರೊನಾ ಕಾರಣ ಎಲ್ಲರೂ ಮನೆಯಲ್ಲೇ ಕುಳಿತು ಅವರ ಒಂದಾದರೂ ವಚನವನ್ನು ನೆನಪಿಸಿಕೊಳ್ಳುತ್ತಾ ಅವರ ತತ್ವಗಳು, ಸಿದ್ದಾಂತಗಳನ್ನು ಅಳವಡಿಸೋಳ್ಳೋದು ಪ್ರತಿಯೊಬ್ಬರ ಕರ್ತವ್ಯ. ತಮ್ಮ ಪ್ರಾಣವನ್ನೇ ಲೆಕ್ಕಿಸದೆ 12ನೇ ಶತಮಾನದಲ್ಲಿದ್ದ ಜಾತಿ ಪದ್ಧತಿ/ವ್ಯವಸ್ಥೆ ವಿರುದ್ಧ ಹೋರಾಡಿದ ಮಹಾನ ಶರಣರು. ದುರದೃಷ್ಟಕರ ಅಂದರೆ ಜಾತಿ, ಮೇಲೂ, ಕೀಳು ಇನ್ನು ಕೆಲವೊಂದು ಕಡೆ ಇದೆ ಅಂದರೆ ತಪ್ಪಾಗಲಾರದು. ಕೆಲವು ಕಡೆ ಮನದಲ್ಲಿ ಹೆಮ್ಮರವಾದ ಜಾತಿಯ ಆರಾದನೆವಿದ್ದರು ಮೇಲ್ನೋಟಕ್ಕೆ ಏನು ಇಲ್ಲದ ಹಾಗೆ ನಟನೆಮಾಡುವ ಜನಗಳಿದ್ದಾರೆ. 21ನೇ ಶತಮಾನದಲ್ಲೂ ಅಂತರ್ಜಾತಿ ವಿವಾಹ ಒಂದು ದೊಡ್ಡ ಸವಾಲಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಇಂದು ನಗರಗಲ್ಲಿ ಜಾತಿ ಪದ್ಧತಿ ಸ್ವಲ್ಪ ಕಡಿಮೆ ಇದ್ದರೂ ಜಾತಿಯ ಆರಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಹುಟ್ಟುವ ಮಕ್ಕಳ ಹೆಸರಿನ ಜೊತೆ ತನ್ನ ಜಾತಿಯನ್ನು ಗುರುತಿಸುವ ಹಾಗೆ ನೋಡಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ. ಸ್ವಲ್ಪ ಜಾತಿಗಳು ಮೇಲ್ವರ್ಗ ಅಂತೇ ಬಿಂಬಿತವಾಗಿ ಕೆಳವರ್ಗದ ಜನರನ್ನು ಶೋಷಣೆಗೆ ಒಳಪಡಿಸುವವರು ಆದರೆ ಅಂತವರು ಸರ್ಕಾರದ ಕೆಲವೊಂದು ಸವಲತ್ತನು ಸಿಗದೆ ಪರಿತಪಿಸಿದ್ದು ಇದೆ. ಇನ್ನು ಕೆಲವರು ಮೇಲ್ವರ್ಗದವರಿಂದ ಶೋಷಿತಕ್ಕೊಳಗಾಗಿದ್ದಾದರು ಸರ್ಕಾರದಿಂದ ಬರುವ ಎಷ್ಟೋ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರವಾಗಲಿ, ಮೇಲ್ವರ್ಗವಾಗಲಿ ಅಥವಾ ಕೆಲವರ್ಗವಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮೇಲ್ವರ್ಗದವರು ಸರ್ಕಾರದ ಸವಲತ್ತುಗೆ ಹೋರಾಡಿದರೆ ಕೆಲವರ್ಗದವರು ಶೋಷಣೆಯ ವಿರುದ್ಧ ಹೋರಾಡುತ್ತಿದ್ದಾರೆ, ಇದನ್ನೇ ಒಂದು ಅಸ್ತ್ರವಾಗಿ ನಮ್ಮ ರಾಜಕೀಯ ಮುಖಂಡರು  ಉಪಯೋಗಿಸುತ್ತಿರುವು ಶೋಚನೀಯ.

ನಾವ್ಯಾಕೆ ಈ ಜಾತಿ ಧರ್ಮಗಳನ್ನು ಮಾಡಿ ಒಡೆದಾಡುತಿದ್ದಿವಿ? ಯಾಕೆ ಈ ಪಾರ್ಸಿಯಾಲಿಟಿ? ಯಾಕೆ ಸಮಾಜದಲ್ಲಿ ಅಸಮತೋಲನ? ಇದನ್ನು ಯಾಕೆ ಮಾಡಿದರು? ಹೀಗೆ ಹತ್ತು ಹಲವಾರು ಪ್ರಶ್ನೆಗಳಿವೇ ಬದಲಿಗೆ ಉತ್ತರವೇ ಇಲ್ಲ. ನಾನೇಕೆ ಈ ಗೊಂದಲವನ್ನು ಬಿಟ್ಟು ಹೊಸ ಮಾರ್ಗವನ್ನು ಹಿಡಿಯಬಾರ್ದು? ಯಾವುದೋ ಒಂದು ಕಾಲದಲ್ಲಿ ತಾನು ಮಾಡುವ ವೃತ್ತಿ ಆಧಾರದಲ್ಲಿ ಮಾಡಿದ ಆ ಪದ್ದತಿಯನ್ನು ನಾವೆಕು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ? ಈ ವೃತ್ತಿ ಆಧಾರದ ಅಸಮತೋಲನ ಪ್ರಾಚೀನ ಕಾಲದಿಂದ ಈಗಿನ ತಂತ್ರಜ್ಞಾನ ಕಾಲದವರೆಗೂ ಹಬ್ಬಿದೆಯೆಂದರೆ ಯಾರು ಇದಕ್ಕೆ ಹೊಣೆಗಾರಿಕೆ? ಮ್ಯಾನೇಜರಗೆ ಇರುವಷ್ಟು ಬೆಲೆ ಒಬ್ಬ ಚಿಕ್ಕ ಕೆಳಗಾರನಿಗಿಲ್ಲ. ಮ್ಯಾನೇಜರನ ಇನ್ಸುರನ್ಸ್ ಕಷ್ಟು ಪಟ್ಟು ದುಡಿಯುವ ಕೆಲ್ಸಗಾರನ ಇನ್ಸುರನ್ಸ್ ಗಿಂತ 10 ಪಟ್ಟು ಜಾಸ್ತಿ ಇರುತ್ತದೇನೋ. ಯಾಕೆ? ಯಾಕೆ? ಪ್ರಶ್ನೆ ಗಳಿವೆಯೋ,  ಉತ್ತರವಿಲ್ಲ. ಹೀರೋಗಿದ್ದ ಬೆಲೆ ಪೋಷಕ ನಟಗಿಲ್ಲ. ಇಂತ ಸಮಾಜವನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ಓಂದು ಬಿಗ್ ಚಾಲೆಂಜಿಂಗ್ ವಿಷಯ!.

ಇದಕ್ಕೆ ಪರಿಹಾರ ಬೇಕಂದ್ರೆ ಮೆಸೇಜ್ ಮಾಡಿ, ತಿಳಿಸಲು ಪ್ರಯತ್ನಿಸುವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍