ಏಕಾಂಗಿ ನಾನಲ್ಲ....


ಏಕಾಂಗಿ ನಾನಲ್ಲ, ಏಕಾಂಗಿ ನಾವಲ್ಲ
ಎಲ್ಲರೂ ಸೇರಿ ದೇಶ ಮುನ್ನಡಿಸೋಣ...

ಏಕಾಂಗಿ ನಾನಲ್ಲ, ಏಕಾಂಗಿ ನಾವಲ್ಲ
ಎಲ್ಲರೂ ಸೇರಿ ದೇಶ ಮುನ್ನಡಿಸೋಣ...

ನಟನಿಗೆ ಅಭಿನಯವು ಜೋಡಿ
ಗಾಯಕನಿಗೆ ಸ್ವರ ನಾದವು ಜೋಡಿ
ಕವಿಗೆ ತಾ ಕಾಣುವ ಸುಂದರ ಕನಸುಗಳ ಜೋಡಿ
ಮತ್ಯಾಕೆ ಚಿಂತಿಸುವೆ ಓಹ್ ಗೆಳೆಯ ನಾನು ಒಂಟಿಯೆಂದು..!!!

ಹುಟ್ಟುವಾಗ ತಾಯಿಯ ಹಕ್ಕರೆಯ ಜೋಡಿ
ಬೆಳೆಯುತ್ತ ತಂದೆಯ ಪ್ರೀತಿಯ ಜೋಡಿ
ಶಾಲೆ ಕಾಲೇಜಲ್ಲಿ ಗೆಳಯರ ಜೋಡಿ
ಆಮೇಲೆ ಹೆಂಡತಿ ಮಕ್ಕಳ ಜೋಡಿ
ಮತ್ಯಾಕೆ ಚಿಂತಿಸುವೆ ಓಹ್ ಗೆಳೆಯ ನಾನು ಒಂಟಿಯೆಂದು..!!!

ಪ್ರೀತಿಗೆ ನಂಬಿಕೆಯೇ ಜೋಡಿ
ನಂಬಿಕೆಗೆ ಸತ್ಯವೇ ಜೋಡಿ
ಆ ಸತ್ಯಕ್ಕೆ ಯಾಕೆ ಮುಚ್ಚುಮರೆ???
ನಿನ್ನಲಿನ ಅಹಂಕಾರ, ಕೋಪ ಹೊರಗೇ ಹಾಕಿ
ಪ್ರೀತಿ, ನಂಬಿಕೆಗೆ ಶರಣಾಗು ಗೆಳೆಯ...

#ಶರಣು #Sharanu

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍