ನಾನೆಂಗೆ ಬರಲಿ ಹೊರಗೆ?
![]() |
| ಅನುಮಾನ & ತಿಳಿಯದೆ ಆದ್ ತಪ್ಪಿಂದ ನಾನೆಂಗೆ ಬರಲಿ ಹೊರಗೆ? |
ಸಾವಿರ ಸುತ್ತನ್ನು ಸುತ್ತಿ
ಸಾಲದ ಸುಳಿಯಲ್ಲಿ ಸತ್ತು
ಮಾಡಿದ ತ್ಯಾಗದ। ಅರಿವಿಲ್ಲದೆ
ಮರಳಿನಲ್ಲಿ ಕಟ್ಟಿದ ಮನೆಯು
ಅಲೆಗಳಲ್ಲಿ ಅಲೆಯಾಗಿ ನಶಿಸಿ ಹೋಯಿತು ॥ಪ॥
ಪ್ರಿತಿನೇ ಹಿಂಗೇನಾ ? ಇದು ಮರಳಿನ ಮನೆಯೇನಾ?
ಗುಬ್ಬಿಯ ಗೂಡನ್ನು ನೋಡುತಾ ಕುಳಿತಾಗ
ಅಲೆಯೊಂದು ಬಂದು ಹಾಳಾಗಿಸಿದಾಗ
ಆ ದೇವರಿಗೆ ಏನೆಂದು ಶಪಿಸಲಿ ನಾನು?
ಆ ದೇವರಿಗೆ ಏನೆಂದು ಶಪಿಸಲಿ ನಾನು? ॥ಚ೧॥
ಹುಟ್ಟಿದ ಕೂಸು ಹುಸಿರಾಡೋ ಮುನ್ನ
ಮಾಡಿದ ಪಾಪನ ಆ ತಾಯಿ ಮನ್ನಿಸಲ್ವಾ?
ಕಲ್ಲನು ಎಸೆದು ಕಿತ್ತ ಹಣ್ಣು । ಸಿಹಿಯನು ಕೊಡಲು
ಹಿಂಜರಿಯುವುದಾ?
ಮಾಡಿದ ತಪ್ಪಿಗೆ ಮನ್ನಿಸಿ । ಕ್ಷಮೆಯನ್ನು ಸ್ವೀಕರಿಸಿ
ನಿನ್ನವಳಾಗಿರಲು ಅನುಮತಿಸು ॥ಚ೨॥

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ