ಸಾದು & ಮಂತ್ರಿ
ಒಂದು ಆಸ್ಥಾನದಲ್ಲಿ ಒಬ್ಬ ಮಂತ್ರಿ ಇದ್ದ, ಸರ್ವ ವಿದ್ಯೆಯನ್ನು ಬಲ್ಲವನಾದ ಅವನು ಈ ಜಗತ್ತಲ್ಲಿ ತನಗಿಂತ ಮೇಧಾವಿಗಳು ಯಾರೂ ಇಲ್ಲ, ನಾನೇ ಎಲ್ಲವೆಂದು ಬಿಗುತ್ತಿದ್ದನು. ಒಂದು ದಿನ ಆ ಆಸ್ಥಾನಕ್ಕೆ ಸಾದು ಬರುವನು, ಜನರೆಲ್ಲ ಸಾದುವಿನ ಹತ್ತಿರ ಬಂದು ಆಶೀರ್ವಾದ ಪಡೆದು ಸ್ವಲ್ಪ ಹಿತ ವಚನ ಕೆಳಿ ತೆರಳುತ್ತಿದ್ದರು. ಹೀಗೆ ಕೆಲವು ದಿನಗಳ ಬಳಿಕ ಆಸ್ಥಾನದ ಆ ಮಂತ್ರಿಗೆ ಒಂದು ಆಲೊಚನೆ ಬಂದಿತು. ಆಸ್ಥಾನದ ಜನರೆಲ್ಲ ಈ ಸಾದುವಿನ ಮಾತುಗಳನ್ನು ಕೇಳಿ ಮರಳಾಗುತ್ತಿದ್ದಾರೆ, ನೊಡೊಣ ಒಂದು ಪರೀಕ್ಷೆ ಮಾಡಿ ಬಿಡೋಣ ಅಂತೆ ಮಠದ ಕಡೆ ನಡೆದರು.
ಆಕಾಶದಲ್ಲಿ ಮೋಡಗಳು ತುಂಬಿ ಇನ್ನೇನು ವರುಣನ ಆರ್ಭಟ ಜೋರಾಗಿತ್ತು ಅನ್ನುವಷ್ಟರಲ್ಲಿ ಆ ಮಂತ್ರಿ ಮಠವನ್ನು ತಲುಪಿದ. ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ, ಸ್ವಚ್ಚತೆ ಮತ್ತು ಭಕ್ತಿಯನ್ನು ನೊಡಿ ಮನದಲ್ಲಿ ಏನೋ ಸಮಾಧಾನದ ನಿಟ್ಟಿಸಿರು, ಆ ಸಾದುವಿನ ಹತ್ತಿರ ಹೊಗಿ ತಮ್ಮ ಕಿರು ಪರಿಚಯ ಮಾಡಿಕೊಂಡರು. ಹಾಗೆಯೇ ಎಷ್ಟೋ ಸಮಯದ ನಂತರ ಈ ಸಾಧುವಿನ ಪರೀಕ್ಷಿಸುವ ಸಮಯ ಬಂದಿತೆಂದು ಒಂದು ಪ್ರಶ್ನೆಯನ್ನು ಕೆಳಿದರು:
ಮಂತ್ರಿ: “ಮಹಾ ಸ್ವಾಮಿಜಿ, ನಿಮ್ಮ ಬಗ್ಗೆ ನಾನು ಇಲ್ಲಿಯವರೆಗೆ ಬರಿ ಅವರಿವರ ಬಾಯಿಯಲ್ಲಿ ಕೇಳಿದ್ದೆ ಆದರೆ ಇಗ ಕಣ್ಣಾರೆ ಕಂಡು ತುಂಭಾ ಸಂತೊಷವಾಹಿತು. ನನಗು ನಿಮ್ಮ ಶಿಷ್ಯನಾಗು ಒಂದು ಅವಕಾಶ ಕೊಟ್ಟು, ಶಿಷ್ಯನೆಂದು ಪರಿಗಣಿಸಿ ಸ್ವಲ್ಪ ವಿದ್ಯೆಯನ್ನು ಕಲಿಸಿ”
ಸಾದು: ನೋಡು ಮಗು,
ಅಲ್ಲಿ ಕಾಣುವ ಆ ಚಂಬು ತೊಗೊ ಅಂತ ಹೇಳಿದ.
ಮಂತ್ರಿ: ಆಯ್ತು ಅಂತೆ ಆ ಚಂಬನ್ನು ತೊಗೊಂಡು ಬಂದರು
ಸಾದು: ಅದರ ತುಂಬಾ ನೀರನ್ನು ತುಂಬಿಸಿ ಮತ್ತೆ ತಿರುಗಿ ಆ ಮಂತ್ರಿಗೆ ಕೊಟ್ಟು ಅದರ ತುಂಬಾ ಮತ್ತೆ ನಿರು ಹಾಕಲು ಹೇಳಿದರು.
ಮಂತ್ರಿ: ಸ್ವಾಮೀ,
ಜನರೆಲ್ಲ ನಿಮನ್ನು ಜ್ಞಾನಿ ಎಂದು ಹೇಳಿದರು ಆದರೆ ನಿಮಗೆ ಇಷ್ಟು ಪರಿಜ್ನಾನ ಇಲ್ಲವಾ? ಇದರಲ್ಲಿ ನಿರು ಹಾಕಿದ್ರೆ ಏಲ್ಲ ಕೆಳಗೆ ಚೆಲ್ಲಿವುದು. ಎಂದು ಹಾಸ್ಯಾಸ್ಪದವಾಗಿ, ಮಾರ್ಮಿಕವಾಗಿ ನುಡಿದರು.
ಆಗ ಆ ಸಾದು
“ ಮಗು ಆ ತುಂಬಿದ ಚಂಬುವಿನ ಹಾಗೆ ನಿನ್ನ ಮನವು ಜ್ಞಾನದಿಂದ, ಅಹಂಕಾರ, ದುರಾಚೊಲನೆ, ಸ್ವಾರ್ತದಿಂದ ತುಂಬಿದೆ ಕುಡಿದೆ, ಆ ತುಂಬಿದ ಚಂಬುವಿಗೆ ಹೆಂಗೆ ನಿರನ್ನು ತುಂಬಲು ಹಾಗುವದಿಲ್ಲವೊ ಹಾಗೆಯೆ ನಿಮಗು ಯಾರಿಂದಲು ಪಾಠ ಮಾಡಲು ಸಾದ್ಯವಿಲ್ಲ, ನಿನ್ನಲ್ಲಿ ಸ್ವಲ್ಪನಾದರು ಮನಸು ಖಾಲಿ ಮಾಡಿದರೆ ಅಥವಾ ಖಾಲಿ ಆದಾಗ ನನ್ನ/ಬೆರೆಯವರ ಹತ್ತಿರ ನಿನು ಶಿಷ್ಯನಾಗಬಹುದು” ಎಂದರು.
ಮಂತ್ರಿ: ತನ್ನ ತಪ್ಪಿನ ಹರಿವಾಗಿ ಸಾಮಾನ್ಯ ಮನುಷ್ಯರಂತೆ ಬದುಕು ನಡೆಸಿದ
ನೋಡಿ ಈ ಕಥೆಯ ಸಾರಾಂಶ ಇಷ್ಟೇನೆ
“ ವಿಷಾಲವಾದ ಜಗತ್ತಲ್ಲಿ ಕಲಿಯುವುದು ತುಂಬಾನೆ ಇರುತ್ತೆ ಆದರೆ ನಾನು..! ನಾನೆ ಬಾರಿ..!!
ನಂನ್ನಿಂದಲೆ ಎಲ್ಲ ..! ಎಂದು ಬಿಗಿದರೆ( ಇಗೊ ) ಅದರಿಂದ ನಾವು ವಂಚಿತರಾಗುತ್ತೆವೆ.
ಹೊಸತನವನ್ನು ಕಲಿಯಿರಿ …
ಮತ್ತೆ
ಗೊತ್ತಿದ್ದನು ಬೇರೆಯವರಿಗೂ ಕಲಿಸಿ..
ಸ್ವಾರ್ಥ ಬಿಡಿ - ಪ್ರೀತಿ ಮಾಡಿ
<Swalpa copied – ulididdella swanta>

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ