ಮಹಾರಾಜ ಮತ್ತು ಯುವರಾಜ
ಕೆಲವೇ ದಿನಗಳಲ್ಲಿ ರಾಜ್ಯದ ಚುಕ್ಕಾಣಿಯನ್ನು ಹಿಡಿಯಲಿರುವ ರಾಜಕುಮಾರ ತನ್ನ ರಾಜ್ಯದ ಜನರ ನಾಡಿ ಮಿಡಿತ ತಿಳಿಯಲು ಮಾರು ವೇಷದರಿಸಿ, ನಾಡು ಸುತ್ತಲು ಹೋರಟ. ಸಮೃದ್ಧಿಯಿಂದ ಕೂಡಿದ ನಾಡಾದುದರಿಂದ ದೇಗುಲಗಳು, ಗುಡಿ-ಗೊಪುರಗಳು ವಿಜೃಂಭಣೆಯಿಂದ ನಡಿಯುತ್ತಿದ್ದವು. ವನ ದೇವತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದಳು. ಕಳ್ಳರ, ಸುಲಿಗೆಕೋರರ ಸುಳಿವುಗಳಿರಲಿಲ್ಲ. ಇದನ್ನೆಲ್ಲ ಕಣ್ಣಾರೆ ಕಂಡು ಮನ ಮುಗಿಲ ಮುಟ್ಟಿ, ಮರಳಿ ಅರಮನೆಗೆ ಬಂದು. ಮಹಾರಾಜರ ಮುಂದೆ ತಾನು ಕಂಡಂತಹ ಅನುಭವವನ್ನು ವಿವರಿಸಿದ. ರಾಜಕುಮಾರರ ಮಾತುಗಳನ್ನು ಗಂಭೀರವಾಗಿ ಕೇಳಿದ ಮಹಾರಾಜ ತನ್ನ ಮಗನ ಜವಾಬ್ದಾರಿಯನ್ನು ನೋಡಿ ರಾಜ್ಯದ ಮೇಲಿರುವ ಪ್ರೀತಿಯನ್ನು ಕಂಡು ಸಂತೋಷಬರಿತನಾದ.
ಮತ್ತು ರಾಜಕುಮಾರರಿಗೆ ರಾಜವನ್ನಾಳಲು ಇನ್ನೂ ತಳಮಟ್ಟದ ಅನುಭವವನ್ನರಿಯಲು, ಸರ್ಕಾರದ ನಡೆಗಳು ಎಷ್ಟು ಗಂಭೀರವಾಗಿದೆ ಎಂದು ತಿಳಿಸುವ ಅವಶ್ಯಕತೆವಿದೆ ಎಂದರಿತ ಮಹಾರಾಜ. ಕೂಡಲೆ ರಾಜಕುಮಾರರಿಗೆ ಇನ್ನೊಂದು ಬಾರಿ ಮಾರು ವೇಷದರಿಸಿ ಹಳ್ಳಿ,ನಗರಗಳನ್ನು ತಲುಪಿ ಜನರ ನಾಡಿ ಮಿಡಿತ ತಿಳಿಯಲು ಹೇಳಿದ.
ಮಹಾರಾಜರ ಆಜ್ಞೆಯಂತೆ ಮಾರು ವೇಷದರಿಸಿ ಹೊರಟ ರಾಜಕುಮಾರ ಮೊದಲು ಒಂದು ಗ್ರಾಮವನ್ನು ತಲುಪಿ ಅಲ್ಲಿ ಕೆಲಸವಿಲ್ಲದೆ ಕುಳಿತು ಗಂಭೀರ ಚರ್ಚೆಯಲ್ಲಿರುವ ಒಂದು ಗುಂಪಿನ ಬಳಿ ಬಂದು ಅವರ ಮಾತುಗಳನ್ನು ಕೇಳ ತೊಡಗಿದ.
ವ್ಯಕ್ತಿ ೧: ನೋಡೊ ನಮ್ಮ ರಾಜ್ಯ ಎಷ್ಟು ಸಮೃದ್ಧವಾಗಿದೆ, ಮಹಾರಾಜರು ಈ ಊರಿಗೆ ಕೊಟ್ಟ ಕೊಡುಗೆ ಅಪಾರ ಎಂದು ಆರಂಭ ಮಾಡಿ ಆ ರಸ್ತೆ ನೋಡು ಎಷ್ಟು ಚಂದ ಮಾಡಿದ್ದಾರೆ ಎಂದ.
ವ್ಯಕ್ತಿ ೨: ಅಯ್ಯೋ ಬಿಡಪ್ಪ, ಅದರಲ್ಲೇನಿದೆ ರಸ್ತೆ ಪಕ್ಕದಲ್ಲಿ ಒಂದೇ ಒಂದು ಕುಡಿಯುವ ನಿರಿನ ಘಟಕ ಇಲ್ಲ, ದಣಿದ ಜನರ ಕಷ್ಟ ಕೇಳದ ರಾಜ ಸುಮ್ಮನೇ ಕಾಟಾಚಾರಕ್ಕೆ ರಸ್ತೆ ಮಾಡಿಸಿದ್ದಾರೆ ಎಂದನು.
ರಾಜಕುಮಾರ ಅವರ ಮಾತುಗಳನ್ನೆಲ್ಲ ಕೇಳಿ. ಗಂಭೀರವಾಗಿ ತೊಗೊಂಡು ತಕ್ಷಣ ನೀರಿನ ವ್ಯವಸ್ಥೆ ಮಾಡಿಸಿದ.
ಕೆಲವು ದಿನಗಳ ನಂತರ ಮತ್ತೆ ಮಾರು ವೇಷದಲ್ಲಿ ಹೋದ.
ವ್ಯಕ್ತಿ ೧: ದೇವಸ್ಥಾನ ಏಷ್ಟು ಹಳೆಯದು, ಇದು ನಮ್ಮ ರಾಜ್ಯದ ಒಂದು ಹಳೆಯ ದೇವಸ್ಥಾನ ಎಂದ.
ವ್ಯಕ್ತಿ ೨: ಅಯ್ಯೋ ಬಿಡಪ್ಪ, ಆ ದೇವಸ್ಥಾನ ನೋಡು ಹೇಗಿದೆ. ರಾಜಕುಮಾರ ಆ ರಸ್ಥೆಯ ಜೊತೆ ಈ ದೇವಸ್ಥಾನನ ಜೀರ್ಣೋದ್ಧಾರ ಮಾಡಿದ್ರೆ ಚೇನ್ನಾಗಿ ಇರ್ತಿತ್ತು. ಎನ್ ಮಾಡೊದು. ಅಂತೆ ಹೇಳಿದ.
ಮತ್ತೆ ರಾಜಕುಮಾರ ಆ ಮಾತುಗಳನ್ನು ಗಂಭೀರವಾಗಿ ತೊಗೊಂಡು ತಕ್ಷಣ ದುರಸ್ತಿ ಕಾರ್ಯಗಳನ್ನು ಮಾಡಿಸಿ, ಮತ್ತೇ ಮಾರು ವೇಷದಲ್ಲಿ ಬಂದ.
ಮತ್ತೆ ಜನರು ಏನೆಲ್ಲಾ ಹೇಳುವರೋ ರಾಜಕುಮಾರ ಅದನ್ನೆಲ್ಲ ಮಾಡಿಸುತ್ತಾ ಹೋದರು. ಒಂದು ದಿನ ತನ್ನಷ್ಟಕ್ಕೆ ತಾನು ಜಿಗುಪ್ಸೆ ಪಟ್ಟು ಮಹಾರಾಜರ ಹತ್ತಿರ ಹೋಗಿ. ನಾನು ಈ ರಾಜ್ಯ ಸಮೃದ್ಧವಾಗಿದೆ ಅಂದುಕೊಂಡರೆ, ರಾಜ್ಯದ ಜನರ ಅಭಿಪ್ರಾಯವೆ ಬೇರೆ ಇದೆಯಂತ ತನ್ನ ಅನುಭವಗಳನ್ನು ವಿವರಿಸಿದ.
ಇದನ್ನೆಲ್ಲ ಕೇಳಿದ ಮಹಾರಾಜ.ನೋಡು ಮಗನೆ ನಾನು ನಿನ್ನನ್ನು ಮತ್ತೆ ಕಳಿಸಿದ್ದು. ಈ ತರಹದ ಅನುಭವಗಳು ನಿನಗಾಗಲೆಂದೇ. ಯಾವುದೇ ರಾಜನಾಗಲಿ, ಯಾರನ್ನು ವ್ಯಕ್ತಿಗತವಾಗಿ ಸಂತೊಷಪಡಿಸಲು ಸಾದ್ಯವಿಲ್ಲ. ಒಬ್ಬರ ಮನಸ್ಸು ಒಂದು ತರಹವಾದರೆ, ಇನ್ನೊಬ್ಬರದ್ದು ಇನ್ನೊಂದು ತರಹ. ನಿನು ಮಾಡುವ ಕಾರ್ಯಗಳು ಮನಸ್ಸಾರೆ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಇರಬೇಕು ಎಂದು ಹೇಳಿದ.
ರಾಜಕುಮಾರ ಮುಂದೆ ಸರ್ವಜನರ ಅಭಿವೃದ್ದಿ ಕಡೆಗೆ ಗಮನ ಕೊಟ್ಟು ಒಬ್ಬ ಅತ್ಯುತ್ತಮ ರಾಜ ಎನಿಸಿಕೋಂಡ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ