ಪೋಸ್ಟ್‌ಗಳು

ಜುಲೈ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾದು & ಮಂತ್ರಿ

ಇಮೇಜ್
  ಒಂದು ಆಸ್ಥಾನದಲ್ಲಿ ಒಬ್ಬ ಮಂತ್ರಿ ಇದ್ದ , ಸರ್ವ ವಿದ್ಯೆಯನ್ನು ಬಲ್ಲವನಾದ ಅವನು ಈ ಜಗತ್ತಲ್ಲಿ ತನಗಿಂತ ಮೇಧಾವಿಗಳು ಯಾರೂ ಇಲ್ಲ , ನಾನೇ ಎಲ್ಲವೆಂದು ಬಿಗುತ್ತಿದ್ದನು . ಒಂದು ದಿನ ಆ ಆಸ್ಥಾನಕ್ಕೆ ಸಾದು ಬರುವನು , ಜನರೆಲ್ಲ ಸಾದುವಿನ ಹತ್ತಿರ ಬಂದು ಆಶೀರ್ವಾದ ಪಡೆದು ಸ್ವಲ್ಪ ಹಿತ ವಚನ ಕೆಳಿ ತೆರಳುತ್ತಿದ್ದರು . ಹೀಗೆ ಕೆಲವು ದಿನಗಳ ಬಳಿಕ   ಆಸ್ಥಾನದ ಆ ಮಂತ್ರಿಗೆ ಒಂದು ಆಲೊಚನೆ ಬಂದಿತು .  ಆಸ್ಥಾನದ ಜನರೆಲ್ಲ ಈ ಸಾದುವಿನ ಮಾತುಗಳನ್ನು ಕೇಳಿ ಮರಳಾಗುತ್ತಿದ್ದಾರೆ , ನೊಡೊಣ ಒಂದು ಪರೀಕ್ಷೆ ಮಾಡಿ ಬಿಡೋಣ ಅಂತೆ ಮಠದ ಕಡೆ ನಡೆದರು .   ಆಕಾಶದಲ್ಲಿ ಮೋಡಗಳು ತುಂಬಿ ಇನ್ನೇನು ವರುಣನ ಆರ್ಭಟ ಜೋರಾಗಿತ್ತು ಅನ್ನುವಷ್ಟರಲ್ಲಿ ಆ ಮಂತ್ರಿ ಮಠವನ್ನು ತಲುಪಿದ . ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ , ಅನ್ನದಾಸೋಹ , ಸ್ವಚ್ಚತೆ ಮತ್ತು ಭಕ್ತಿಯನ್ನು ನೊಡಿ ಮನದಲ್ಲಿ ಏನೋ ಸಮಾಧಾನದ ನಿಟ್ಟಿಸಿರು , ಆ ಸಾದುವಿನ ಹತ್ತಿರ ಹೊಗಿ ತಮ್ಮ ಕಿರು ಪರಿಚಯ ಮಾಡಿಕೊಂಡರು . ಹಾಗೆಯೇ ಎಷ್ಟೋ ಸಮಯದ ನಂತರ ಈ ಸಾಧುವಿನ ಪರೀಕ್ಷಿಸುವ ಸಮಯ ಬಂದಿತೆಂದು ಒಂದು ಪ್ರಶ್ನೆಯನ್ನು ಕೆಳಿದರು :   ಮಂತ್ರಿ : “ ಮಹಾ ಸ್ವಾಮಿಜಿ , ನಿಮ್ಮ ಬಗ್ಗೆ ನಾನು ಇಲ್ಲಿಯವರೆಗೆ ಬರಿ ಅವರಿವರ ಬಾಯಿಯಲ್ಲಿ ಕೇಳಿದ್ದೆ ಆದರೆ...

ಮಹಾರಾಜ ಮತ್ತು ಯುವರಾಜ

ಇಮೇಜ್
ಕೆಲವೇ ದಿನಗಳಲ್ಲಿ ರಾಜ್ಯದ ಚುಕ್ಕಾಣಿಯನ್ನು ಹಿಡಿಯಲಿರುವ ರಾಜಕುಮಾರ ತನ್ನ ರಾಜ್ಯದ ಜನರ ನಾಡಿ ಮಿಡಿತ ತಿಳಿಯಲು ಮಾರು ವೇಷದರಿಸಿ, ನಾಡು ಸುತ್ತಲು ಹೋರಟ. ಸಮೃದ್ಧಿಯಿಂದ ಕೂಡಿದ  ನಾಡಾದುದರಿಂದ ದೇಗುಲಗಳು, ಗುಡಿ-ಗೊಪುರಗಳು ವಿಜೃಂಭಣೆಯಿಂದ ನಡಿಯುತ್ತಿದ್ದವು. ವನ ದೇವತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದಳು. ಕಳ್ಳರ, ಸುಲಿಗೆಕೋರರ ಸುಳಿವುಗಳಿರಲಿಲ್ಲ. ಇದನ್ನೆಲ್ಲ ಕಣ್ಣಾರೆ ಕಂಡು ಮನ ಮುಗಿಲ ಮುಟ್ಟಿ, ಮರಳಿ ಅರಮನೆಗೆ ಬಂದು. ಮಹಾರಾಜರ ಮುಂದೆ ತಾನು ಕಂಡಂತಹ ಅನುಭವವನ್ನು ವಿವರಿಸಿದ. ರಾಜಕುಮಾರರ ಮಾತುಗಳನ್ನು ಗಂಭೀರವಾಗಿ ಕೇಳಿದ ಮಹಾರಾಜ ತನ್ನ ಮಗನ ಜವಾಬ್ದಾರಿಯನ್ನು ನೋಡಿ ರಾಜ್ಯದ ಮೇಲಿರುವ ಪ್ರೀತಿಯನ್ನು ಕಂಡು ಸಂತೋಷಬರಿತನಾದ.  ಮತ್ತು ರಾಜಕುಮಾರರಿಗೆ ರಾಜವನ್ನಾಳಲು ಇನ್ನೂ ತಳಮಟ್ಟದ ಅನುಭವವನ್ನರಿಯಲು, ಸರ್ಕಾರದ ನಡೆಗಳು ಎಷ್ಟು ಗಂಭೀರವಾಗಿದೆ ಎಂದು ತಿಳಿಸುವ ಅವಶ್ಯಕತೆವಿದೆ ಎಂದರಿತ ಮಹಾರಾಜ. ಕೂಡಲೆ ರಾಜಕುಮಾರರಿಗೆ ಇನ್ನೊಂದು ಬಾರಿ ಮಾರು ವೇಷದರಿಸಿ ಹಳ್ಳಿ,ನಗರಗಳನ್ನು ತಲುಪಿ ಜನರ ನಾಡಿ ಮಿಡಿತ ತಿಳಿಯಲು ಹೇಳಿದ.  ಮಹಾರಾಜರ ಆಜ್ಞೆಯಂತೆ ಮಾರು ವೇಷದರಿಸಿ ಹೊರಟ ರಾಜಕುಮಾರ ಮೊದಲು ಒಂದು ಗ್ರಾಮವನ್ನು ತಲುಪಿ ಅಲ್ಲಿ ಕೆಲಸವಿಲ್ಲದೆ ಕುಳಿತು ಗಂಭೀರ ಚರ್ಚೆಯಲ್ಲಿರುವ ಒಂದು ಗುಂಪಿನ ಬಳಿ ಬಂದು ಅವರ ಮಾತುಗಳನ್ನು ಕೇಳ ತೊಡಗಿದ. ವ್ಯಕ್ತಿ ೧: ನೋಡೊ ನಮ್ಮ ರಾಜ್ಯ ಎಷ್ಟು ಸಮೃದ್ಧವಾಗಿದೆ, ಮಹಾರಾಜರು ಈ ಊರಿಗೆ ಕೊಟ್ಟ ...