ಹಾಗೆ ಸುಮ್ಮನೆ

ದೊಡ್ಡ ಗೂಡು, ಅದರ ಸುತ್ತಲೂ ಜೈಲಿನಂತ ಬೇಲಿ ಅಮ್ಮನ ಮಡಿಲಲ್ಲಿ ಬೆಚ್ಚನೆ ಮಲಗಿದ್ದ ನನಗೆ ಒಂದು ವಿಷ್ಮಯ ಕಾದಿತ್ತು. ಐದು ಬೆರಳುಗಳು, ನನ್ನನ್ನು ಗಟ್ಟಿಯಾಗಿ ಹಿಡಿದು ತಾಯಿಯ ಮಡಿಲಿಂದ ಹೊರ ತೆಗೆಯಿತು. ನಾನು ಏಷ್ಟು ಚಿರಾಡಿದರು, ಕೂಗಾಡಿದರು ಆ ಐದು ಬೆರಳಿನ ಕೈಗೆ ಕೇಳಲಿಲ್ಲ, ನನ್ನ ತಾಯಿ ಆ ಕೈಗಳಿಗೆ ತನ್ನ ಬಾಯಿಂದ ಕುಕ್ಕಿದರು ಅಂಜದೆ ನನ್ನನ್ನು ಹೊರತೆಗೆದರು. ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ನನಗೆ ಈಗ ಹೊಸ ಪ್ರಪಂಚದ ಪರಿಚಯ ಶುರುವಾಯಿತು. ಗಿಜಿಬಿಜಿ ಸದ್ದು, ನನ್ನನ್ನೆ ಓಲುವ ಪ್ಲಾಸ್ಟಿಕ್ ಡಬ್ಬ, ಬಿಸಿಲು, ಗಾಳಿ ಎಲ್ಲವೂ ಹೊಸತು. ಆ ಕೈಗಳು ನನ್ನನ್ನು ಪುಟ್ಟ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಮುಚ್ಚಿತು. ಮತ್ತೆ ಸ್ವಲ್ಪ ಸಮಯದ ನಂತರ ಹೊರ ತೆಗೆದು, ಬಿಸಿ ಬಿಸಿ ನೀರಿನಲ್ಲಿ ಮುಳುಗಿಸಿ ಕುದಿಸಲು ಶುರು ಮಾಡಿದರು. ಆ ಸುಡು ನೀರಿನ ನೋವು ತಾಳಲಾಗದೆ ಏಷ್ಟು ಕೂಗಿದರು ಯಾರಿಗೂ ಕೇಳಲಿಲ್ಲ, ಸ್ವಲ್ಪ ಸಮಯದ ನಂತರ ನನ್ನ ಚರ್ಮವನ್ನು ತೆಗೆದು ಒಂದು ದೊಡ್ಡ ಡಬ್ಬದಲ್ಲಿ ಹಾಕಿದರು. ನೋಡಿದರೆ ನನ್ನ ಹಾಗೆ ನೂರಾರು! ಆಶ್ಚರ್ಯವಾಹಿತು, ಎಲ್ಲರನ್ನು ನೀರಲ್ಲಿ ಕುದಿಸಿ, ಚರ್ಮ ತೆಗೆದು ಹಾಕಿದ್ದರು. ಆ ದೊಡ್ಡ ಡಬ್ಬವನ್ನು ತೆಗೆದಾಗ ಒಂದು ಸುಂದರ ಶಾಲೆ, ಪುಟ್ಟ ಪುಟ್ಟ ಮಕ್ಕಳು, ಹಸಿರು ತುಂಬಿದ ಮೈದಾನ. ಆ ಪುಟ್ಟ ಮಕ್ಕಳನ್ನು ನೋಡಿ ನನ್ನ ಬಾಲ್ಯದ ನೆನಪುಗಳೆಲ್ಲ ಕಣ್ಣ ಮುಂದೆ ಬಂದಂತಾಗಿ, ಕನಸಲ್ಲಿ ಮಗ್ನನಾದೆ. ಒಂದೇ ಸಮನೆ ದೊಡ್ಡ ಕೂಗು, ಕಣ್ಣ ತೆಗೆದು ನೋಡಿದರೆ ಸುಮಾರು ೧೫ ರಿಂದ ೨೦ ದೊಡ್ಡ ದೊಡ್ಡ ಜನ, ನಮ್ಮನ್ನೆಲ್ಲ ಮೇಲೆ ಎತ್ತಿ ಬಿಸಾಡಲು ಪ್ರಯತ್ನಿಸುತ್ತಿದ್ದರು ಆದರೆ ಸ್ವಲ್ಪ ಮಕ್ಕಳು ನಮಗೆ ಮೊಟ್ಟೆ ಬೇಕು ಅನ್ನುತ್ತಿದ್ದರು. ಸ್ವಲ್ಪ ಮಹಾನ ವ್ಯಕ್ತಿಗಳು ಮಕ್ಕಳಿಗೆ ಮೊಟ್ಟೆ ಕೊಡಿ ಅಂತೆ ಇನ್ನು ಸ್ವಲ್ಪ ಮಹಾನ ವ್ಯಕ್ತಿಗಳು ಬೇಡ ಅಂತೆ, ಹೀಗೆ ಒಡೆದಾಡುವ ಹಂತಕ್ಕೆ ಹೋಗುವಷ್ಟರಲ್ಲಿ ಒಬ್ಬ ವ್ಯಕ್ತಿ ನಮ್ಮನ್ನೆಲ್ಲ ಒಂದು ಬಟ್ಟೆಯಲ್ಲಿ ಹಾಕಿ ಹೊರಟ. ರೈತರು ಕಷ್ಟಪಟ್ಟು ಹತ್ತಿಯನ್ನು ಬೆಳೆದರು, ದಲ್ಲಾಳಿಗಳು ಅದನ್ನು ಕೊಂಡರು, ಕಂಪನಿಯಲ್ಲಿ ಹಲವಾರು ಕಾರ್ಮಿಕರ ಶ್ರಮದ ಫಲದಿಂದ ಉತ್ಪಾದಿಸಿದ ಬಟ್ಟೆಯು ಇವಾಗ ನನ್ನ ಹೊಸ ಗೆಳೆಯ. ನನ್ನ ಹಾಗೆ ಅವನನ್ನು ಸರಿಯಾಗಿ ಬಡಿದು, ಮಸೀನಲ್ಲಿ ಹಾಕಿ ಬಟ್ಟೆಯ ರೂಪಕ್ಕೆ ತಂದಿದ್ದರು, ಇಬ್ಬರದೂ ಒಂದೇ ಜೀವನ. ಪುಟ್ಟ ರಕ್ತದ ಕಲೆಯನ್ನು ನೋಡಿ, ಏನದು ಅಂತೆ ಕೇಳಿದೆ, ಅದರ ಉತ್ತರ ನನ್ನ ಜೀವನಕ್ಕಿಂತಲು ಭಯಾನಕ. ಬಟ್ಟೆ ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿತ್ತು, ಆವತ್ತು ಬಟ್ಟೆ ಮಗುವಿನಂತೆ ಜೊತೆ ಶಾಲೆಗೆ ಹೋಯಿತು. ಆ ಶಾಲೆಯ ಪಾಠ, ಮಕ್ಕಳ ಆಟ, ತುಂಟಾಟ, ಕೀಟಲೆ ಎಲ್ಲವನ್ನು ನೋಡುತ್ತಾ ಮಕ್ಕಳ ಜೊತೆ ಮಕ್ಕಳಾಗಿ ಇತ್ತು. ಒಂದು ದಿನ ಬಟ್ಟೆ ಬಟ್ಟೆಗಳ ಮದ್ಯೆ ವಾದ ವಿವಾದ ನಡೆಯಿತು. ನಾನು ಮುಂದೆ ನೀನು ಮುಂದೆ ಅಂತೆ ದೊಡ್ಡ ರಗಳೆ. ಶಾಲೆಯ ಕೆಲವು ಜನರ ಮದ್ಯೆ ಇದ್ದ ಜಗಳ ನೂರಾರು ಜನರಿಗೆ ತಲುಪಿತು. ಸ್ವಲ್ಪ ಜನ ಅದನ್ನು ದೊಡ್ಡದಾಗಿ ಬಿಂಬಿಸಿದರು ಆಗ ಆದ ಜಗಳದಲ್ಲಿ ಸಿಕ್ಕ ರಕ್ತವಿದು ಎಂದಾಗ ನನ್ನ ಮೈ ಜುಂಮೆಂದಿತು. ಮೊಟ್ಟೆ ಮತ್ತು ಬಟ್ಟೆಗೆ ಇನ್ನಾರೂ ಗೆಳೆಯರು ಸಿಗುತ್ತಾರೋ ಕಾದು ನೋಡೋಣ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍