ಜನರಾ? ಜನನಾಯಕರಾ?
ಕುವೆಂಪುರವರು "ಮೊದಲು ಮಾನವನಾಗು" ವೆಂದು ಬರೆದ ಮೇಲೆ ಕೆಲವು ಆಲೋಚನೆಗಳಿಗೆ ದಾರಿಯಾಯಿತು. ಆದರೆ ಇಲ್ಲಿ ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಮತ್ತು ಅದು ಸೂಕ್ತವೂ ಅಲ್ಲ. ಇತ್ತೀಚೆಗೆ ತೀವ್ರ ಪರಿಣಾಮ ಬಿರುತ್ತಿರುವ ಕೊರೊನಾ ರೋಗದ ಬಗ್ಗೆನೂ ಅಲ್ಲ ಆದರೆ ಕೊರೊನಾ ಕಾಲದಲ್ಲಿ ಜನರು ಮತ್ತು ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿರುವದು, ನಡೆ ನುಡಿಗಳು, ಪ್ರತಿಕ್ರಿಯೆಗಳು ಇಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ಪಕ್ಷ ಅಧಿಕಾರದ ಬದಲಾವಣೆ ಬಯಸಿದರೆ, ಆಡಳಿತದಲ್ಲಿಲ್ಲದ ಮುಂದಿನ ನಡೆಯ ಬಗ್ಗೆ ಚರ್ಚಿಸುತ್ತಿವೆ, ಇನ್ನು ನಮ್ಮ ಜನರು ಅವರ ಪಾಡಿಗೆ ಏನು ಮಾಡಬೇಕೋ ಅದು ಮಾಡ್ತಿದ್ದಾರೆ. ಪಕ್ಕದ ಮನೆಯಲ್ಲಿ ಬಾಲವಿವಾಹ ನಡಿಯುತ್ತಿದ್ದರು ಪ್ರಧಾನಿ, ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ಬಗ್ಗೆ ಮಾತನಾಡುವ ಜನರು ಇದ್ದಾರೆ. ರೋಗಿಗಳಿಗೆ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಚರ್ಚಿಸದ ಜನನಾಯಕ ಜನಗಳೇ ಸರಿ ಇಲ್ಲ ಅಂತೆ ಹೇಳುವುದನ್ನು ಕೇಳಿದ್ದೇವೆ. ಮತ್ತೇ ಏನು ನಡಿಯುತ್ತಿದೆ, ತಪ್ಪುಗಳು ಏನು, ಹೇಗೆ ತಪ್ಪುಗಳನ್ನು ತಿದ್ದುವುದೂ? ಮೋಡಗಳು ಆಕಾಶವನ್ನು ಆವರಿಸಿದ ಹಾಗೆ ಜನರು ಮತ್ತು ಜನನಾಯಕರಿಗೆ ಒಬ್ಬರ ಮೇಲೆ ಒಬ್ಬರು ಹಾಕಿ ವ್ಯರಾಣುವಿಗೆ ಪೊಷ್ಠಿಕಾಂಶ ಕೊಟ್ಟು ಹಲವಾರು ತಳಿಗಳಿಗೆ ಜೀವದಾತರಾಗಿರುವು ಒಂದು ಶೋಚನೀಯ ವಿಚಾರ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಒಂದು ವಿಚಾರ ಹಚ್ಚಿಕೊಳ್ಳುತ್ತೆ ಅದೇನೆಂದರೆ ಮುಂದಿನ ಆರು ತಿಂಗಳು ಎಲ್ಲರೂ ಕೊರೊನಾ ಶಿಷ್ಟಾಚಾರವನ್ನು ಸರಿಯಾಗಿ ಪಾಲಿಸಿ ಲಸಿಕೆಯನ್ನು ಎಲ್ಲರಿಗೂ ವಿತರಿಸಿದರೆ ಕೊರೊನಾ ಹಾವಳಿಯಿಂದ ಪಾರಾಗಬಹುದು ಅಂತೆ ಸಂದೇಶವನ್ನು ರವಾನಿಸುತ್ತಾರೆ. ಇಲ್ಲಿ ಪ್ರಶ್ನೆ ಬಂದಿರುವುದು ವಿಶ್ವ ಆರೋಗ್ಯ ಸಂಸ್ಥೆ ಸಂಶೋಧಕರು ಹೇಳಿದ ಮಾತಿನಲ್ಲಿ ಅಲ್ಲ ಬದಲಾಗಿ ನಮ್ಮ ಜನ ಮತ್ತು ಜನನಾಯಕರು ಆ ಒಂದು ಮಾತನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಅನ್ನುವುದರ ಮೇಲೆ. ಹೌದು, ಇತ್ತೀಚಿಗೆ ಒಂದು ಸಮಾರಂಭದಲ್ಲಿ ಭಾಗವಹಿಸಿದ ಗೆಳೆಯ ಒಂದು ರೋಚಕ ಕಥೆ ವಿವರಿಸಿದ ಅದನ್ನು ಕೇಳಿ ನಗಬೇಕೋ ಅಥವಾ ಗಂಭೀರವಾಗಿ ಪರಿಗಣಿಸಬೇಕೋ ಅರ್ಥವಾಗುತ್ತಿಲ್ಲ. ವೃತ್ತಿಯಲ್ಲಿ ಉದ್ಯಮಿಯಾದ ಗೆಳೆಯ ಒಂದು ಮದುವೆಗೆ ಹೋಗುತ್ತಾನೆ, ಸರ್ಕಾರದ ನಿಯಮದ ಪ್ರಕಾರ ನೂರು ಜನವಿರಬಹುದೆಂದು ತಿಳಿದಿದ್ದ ಅವನು ಆ ಮದುವೆ ಸಮಾರಂಭ ನೋಡಿ ಗಾಬರಿಯಿಂದ ದೂರ ನಿಲ್ಲುತ್ತಾನೆ. ನೋಡಿ ಸರ್ಕಾರಗಳು ಸ್ಪಷ್ಟವಾಗಿ ತಿಳಿಸಿದರು ಈ ರೀತಿಯ ಸಮಾರಂಭ ನಡೆಸಿ ಜನರನ್ನು ಸೇರಿಸುವುದು ಏಷ್ಟು ಸರಿ? ಹಾಗೆಯೇ ಮದುವೆಯಲ್ಲಿರುವ ಸುಮಾರು 90% ಜನರಲ್ಲಿ ಮಾಸ್ಕ್ ಇಲ್ಲವೇ ಇಲ್ಲವಂತೆ, ಸ್ವಲ್ಪ ಸಮಯದ ನಂತರ ಪೊಲೀಸ್ ಅಧಿಕಾರಿಗಳು ಬರುವದನ್ನು ನೋಡಿ ತಮ್ಮ ಸೀರೆಯನ್ನೇ ಮಾಸ್ಕಗಳಾಗಿ ಮಾರ್ಪಡಿಸಿದರಂತೆ ಅದು ಹೇಗೆಂದರೆ ಮೊದಲು ಮಹಿಳೆಯರು ಹೇಗೆ ಸತ್ತ ಮನೆಯಲ್ಲಿ ಮೂಗಿಗೆ ಸೀರೆ ಮುಚ್ಚಿ ನಿಲ್ಲತ್ತಿದ್ದರೋ ಹಾಗೆ!, ಇದನ್ನು ನೋಡಿ ಪಾಪ ಅವನಿಗೆ ನಗಬೇಕೋ ಅಥವಾ ಗಂಭೀರವಾಗಿ ಪರಿಗಣಿಸಬೇಕೋ ಅರ್ಥವಾಗದೆ ಮನೆಗೆ ಬಂದನೆಂತೆ. ಇದರ ಅರ್ಥ ಎಷ್ಟೋ ಜನರಿಗೆ ಇನ್ನು ಈ ವ್ಯರಾಣುವಿನ ಹರಿವೆ ಇಲ್ಲ ಮತ್ತು ನಮ್ಮ ಜನನಾಯಕರೆಲ್ಲ ಜನರಲ್ಲಿ ಹರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಕೊಳ್ಳಬಹುದು.
ಇನ್ನು ಜನನಾಯಕರೇನು ಕಮ್ಮಿ ಇಲ್ಲ, ಬೇಡವಿಲ್ಲದ ಕಾರಣಗಳಿಗೆ ಜನಗುಡಿಸುವುದು, ರ್ಯಾಲಿ ಇನ್ನಿತರೆ ಕಾರ್ಯಕ್ರಮ ನಡೆಸುವುದು, ದೊಡ್ಡ ದೊಡ್ಡ ವಿಚಾರಗಳನ್ನು ಪ್ರಸ್ತಾಪಿಸಿ ಜನರಲ್ಲಿ ನಂಬಿಕೆ ಕಳೆಯುವ ಹಾಗೆ ಮಾಡುವುದು ಹೀಗೆ ಹಲವಾರು ರೀತಿಯ ಶಿಷ್ಟಾಚಾರ ಉಲ್ಲಂಘನೆ ಮಾಡುವುದರಿಂದ ಹೇಗೆ ತಾನೆ ಜನರಲ್ಲಿ ಜಾಗೃತಿ ಮೂಡಿಸುವುದು? ಬೇಲಿಯೇ ಹೊಲವನ್ನು ಮೆಯ್ದರೆ ಇನ್ನೇನು ಬೇಲಿಯ ಉಪಯೋಗ? ನಮ್ಮ ಜನನಾಯಕರು ತಾವೇ ಪ್ರಶ್ನೆಗಳನ್ನು ಹಾಕಿಕೊಂಡು ತಾವೇ ಉತ್ತರವನ್ನು ಹುಡುಕುವುದು ಉತ್ತಮ. ಇತ್ತೀಚಿಗೆ ಮಂತ್ರಿ ಸ್ಥಾನದಿಂದ ಹೊರಬಂದ ಒಬ್ಬ ಮಾಜಿ ಸಚಿವರು ಒಂದು ದಿನ facebook ಅಲ್ಲಿ ಜನಾಭಿಪ್ರಾಯ ಕೇಳಿದ್ದರು, ಹೇಗೆ ಕೊರೊನಾ ನಾವು ನಿಯಂತ್ರಿಸಬೇಕು ಅಂತೆ ಸಲಹೆ ಕೊಡಿ ಎಂದು. ಅದಕ್ಕೆ ನಾನು ಒಂದು ವಿಚಾರ ಹಂಚಕೊಂಡಿದ್ದೆ, ಅದು ಅವರಿಗೆ ಏಷ್ಟು ಮಟ್ಟಿಗೆ ತಲುಪಿತೊ ಗೊತ್ತಿಲ್ಲ ಆದರೆ ಇಲ್ಲಿ ಆ ವಿಷವನ್ನು ನಿಮ್ಮ ಮುಂದಿಡಲು ಇಷ್ಟ ಪಡುತ್ತೇನೆ.
ನಮಗೆ ಸರಿಯಾಗಿ ಗೊತ್ತು, ಜನಸಂದಣಿ ನಿಯಂತ್ರಿಸಿದರೆ ವ್ಯರಾಣುವಿನ ಚಲನವನ್ನು ಕಡಿಮೆಮಾಡಬಹುದು ಅಂತೇ ಹಾಗೆಯೇ ನಾವು *ದೇಶದ ಮುಂದಿನ ಭವಿಷ್ಯವಾಗಿರುವ ಮಕ್ಕಳನ್ನು ಮನೆಯಲ್ಲಿ ಕುಡಾಕಿ, ಮನೆಯೊಂದಲೇ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ, ಹಾಗೆಯೇ ಎಲ್ಲ ರಾಜಕೀಯ ಜನನಾಯಕರು ಏಕೆ ಮನೆಯಿಂದಲೇ ಕೆಲಸ ಮಾಡಬಾರದು? ದೇವಸ್ಥಾನದಲ್ಲಿ(ಎಲ್ಲ ಧರ್ಮದ) ಪೂಜೆ ಪುರಸ್ಕಾರಗಳೆಲ್ಲ ಯಾಕೆ online ಅಲ್ಲೇ ಮಾಡಬಾರದು? ಜಾತ್ರೆ, ಸಮಾರಂಭವನ್ನೇಕೆ online ಮಾಡಬಾರದು? sensor ಗಳಂತ ತಂತ್ರಜ್ಞಾನಕ್ಕೆ ಪ್ರೋತ್ಸಾಹ ಕೊಟ್ಟು ಜನಗಳ ಮದ್ಯ ಸಂಪರ್ಕ ಕಲ್ಪಿಸುವದನ್ನು ಯಾಕೆ ಕಡಿಮೆ ಮಾಡುತ್ತಿಲ್ಲ? ಹೀಗೆ ಪ್ರಶ್ನೆ ಉತ್ತರ ನಮ್ಮ ಹತ್ತಿರ ಇರುವಾಗ, ಒಂದು ದಿನದ ಸಂತೋಷಕ್ಕೆ ಎಲ್ಲರ ಜೀವನ ನಾಲ್ಕು ಗೋಡೆಗಳ ಮದ್ಯ ಕಳೆಯುವ ಹಾಗೆ ಮಾಡುವುದು ಒಳ್ಳೆಯ ವಿಚಾರವಲ್ಲ.
ಎಲ್ಲರೂ ಸೇರಿ ಒಂದಾಗಿ ಶಿಷ್ಟಾಚಾರ ಪಾಲಿಸಿದರೆ, ನಮಗೆ ಕೊರೊನಾ ವಿರುದ್ಧ ಜಯ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ