ಮೂಕ್ಕಜ್ಜಿಯ ಕನಸುಗಳು - ಶರಣು ಕಂಡಂತೆ!
ಮೂಕ್ಕಜ್ಜಿಯ ಕನಸುಗಳು - ಶರಣು ಕಂಡಂತೆ!
ಕೆಲವು ದಿನಗಳ ಹಿಂದೆ, ಗೆಳೆಯ ಡಾ. ಕೆ ಶಿವರಾಮ ಕಾರಂತರ ಮೂಕ್ಕಜ್ಜಿಯ ಕನಸುಗಳು ಕಾದಂಬರಿಯ ಬಗ್ಗೆ ವರ್ಣಿಸುತ್ತಾ, ತನ್ನ ಬಳಿ ಇದ್ದ ಆ ಪುಸ್ತಕವನ್ನು ಓದು ಅಂತೇ ಕೊಟ್ಟರು. ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಕಾದಂಬರಿ ಇಷ್ಟು ವರ್ಷಗಳಾದರೂ ಓದದೆ ಇದ್ದದ್ದು ನನಗೆ ಮುಜುಗರ ಉಂಟುಮಾಡಿತಾದರು ಆ ಪುಸ್ತಕವನ್ನು ಪಡೆದು ಮನೆಯಲ್ಲಿ ಹಾಗೆ ಇಟ್ಟಿದ್ದೆ. ಮೊನ್ನೆ ಅವರ ಪುಣ್ಯಸ್ಮರಣೆಯ ದಿನ ಓದಲು ಶುರುಮಾಡಿದೆ. ಓದುವುದರಲ್ಲಿ ನಾನು ತುಂಬಾ ಹಿಂದೆ! ಒಂದು ನಿದ್ದೆಗೆ ಜಾರುವುದು ಅಥವಾ ಮೊಬೈಲ್ ಕಡೆ ಗಮನ ಹರಿಸುದು ರೂಢಿ, ಹಾಗಾಗಿ ಇನ್ನು ಮೊದಲ ಪುಟಗಳಲ್ಲಿ ಇರುವಾಗ ಒಂದು ಸ್ವಾರಶ್ಯಕರ ವಿಷಯ ನೋಡಿದೆ, ಅದುವೇ ಮೂಕಿಯ ಮದುವೆ! ನಾನು ಇನ್ನು ಪೂರ್ತಿ ಒದದಿದ್ದರು ಅಂತಹ ಸನ್ನಿವೇಶವನ್ನು ನಿಜಜೀವನದಲ್ಲೂ ಕೇಳಿದ ನೆನಪು.
ತಂದೆ ತಾಯಿ... ತಾಯಿ ಮೂಕಾಂಬಿಕೆ ಹೆಸರನ್ನಿಟ್ಟರು, ಜನ ಮೂಕಿ ಅಂತೇ ಕರೆದರು! ಹತ್ತನೇ ವಯಸ್ಸಲ್ಲಿ ಮದುವೆ ಮಾಡಿದರು, ಮೂರೇ ತಿಂಗಳಲ್ಲಿ ಗಂಡ ತೀರಿಕೊಂಡನು. ಮುಂದೆ ಅವರ ಜೀವನ ನಿಜವಾಗಲು ಮೂಕತನಕ್ಕೆ ಶರಣಾಯಿತು. ಕಾದಂಬರಿ ನಿಜಜೀವನದಲ್ಲಿ ನಡೆದದ್ದಿರುತ್ತದೋ ಅಥವಾ ಕಲ್ಪನಾ ಲೋಕದ್ದಿರುತ್ತದೋ ಗೊತ್ತಿಲ್ಲ ಆದರೆ ನಿಜಜೀವನಕ್ಕೆ ಏಷ್ಟು ಹತ್ತಿರ ಗೊತ್ತೇ ಹಾಗಲ್ಲ.
ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿ, ಏನೋ ನನ್ನ ಪಾಡಿಗೆ ನಾನು ಕೆಲಸದಲ್ಲಿ ನಿರತನಾದಾಗ ನಮ್ಮ ತಾಯಿಯವರಿಗೆ ಒಂದು ಸುದ್ದಿ ಬರುತ್ತದೆ. ಅದು ಸಾವಿನ ಸುದ್ದಿ! ನಮ್ಮ ತಾಯಿಯವರು ಗಾಬರಿಯಿಂದ ಹೆಂಗೆ ಸಾವು ಆಯಿತು? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳತೊಡಗಿದರು, ನಾನು ಆ ಕಡೆ ಜಾಸ್ತಿ ತಲೆಹಾಕದೆ ನನ್ನ ಕೆಲಸದಲ್ಲಿ ನಾನು ಮಗ್ನನಾದೆ. ಒಂದು ದಿನ ನಾನು ಊರಿಗೆ ಹೋಗಿ ಬರುತ್ತೇನೆ ಮನೆಕಡೆ ಜೋಪಾನ ಅಂತೇ ಹೇಳಿ ಸಂಬದಿಕರೆಲ್ಲ ಸೇರಿ ಹೊರಟರು. ನನಗೆ ಮನೆಯಲ್ಲಿ ಕೂಡುವುದು ಅಂದ್ರೆ ಹಾಗಲ್ಲ ಅಂತದ್ರಲ್ಲಿ ಮನೆಯಲ್ಲೇ ಇರು ಅಂತೇ ಹೇಳಿದಾಗ ಏನು ಮಾಡಬೇಕು ಗೊತ್ತಾಗದೆ *ಸುಮ್ನೆ ಯಾಕೆ ಇವಾಗ ಹೋಗುತ್ತಿದ್ದೀರಾ? ಎಲ್ಲ ಕಾರ್ಯಗಳು ಮುಗಿದರೂ ಇವಾಗ ಯಾಕೆ ಹೋಗುವುದು? ನಂಗೆ ಮನೆಯಲ್ಲಿ ಇರಲು ಹಾಗುವುದಿಲ್ಲ!* ಅಂತೇ ಪ್ರಶ್ನಿಸಿ ನನ್ನ ಸಿಟ್ಟನ್ನು ತೋರಿಸಿದೆ. ಮೊದಲೇ ತುಂಬಾ ಮೃದು ಸ್ವಭಾವದ ನನ್ನ ತಾಯಿ *ಅಯ್ಯೋ ಯಪ್ಪ! ಅಂಗನಬ್ಯಾಡ್, ಮಗು ಇವತ್ತು ಊರಿಗೆ ಬಂದಿದೆ. ಸ್ವಲ್ಪ ಮಾತನಾಡಿಸಿ ಬೇಗ ಬರುತ್ತೇವೆ* ಅಂತೇ ಹೇಳಿ ಹೊರಟರು. *ಮಗು* ಅನ್ನುವ ಪದ ತುಂಬಾ ಕಾಡಲು ಶುರುಮಾಡಿತು. ಯಾಕೆ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ? ಅಂತೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ತಲೆಯಲ್ಲಿ ಬರಲು ಶುರುವಾದವು. ಸಂಜೆ ಅಮ್ಮನಲ್ಲಿ ಆ ಪ್ರಶ್ನೆಯನ್ನು ಕೇಳಿದೆ, ಯಾಕೆ ಏನಾಯಿತು ಅವ್ರಿಗೆ? ಆವಾಗ ಅವರು ಹೇಳಿದ ಮಾತು ನನ್ನಿಂದ ಮಾತೇ ಹೊರಡದ ಹಾಗೆ ಮಾಡಿತು.
ಹಳ್ಳಿಗಳಲ್ಲಿ ಹೆಣ್ಣು ಮಗು ಅಂದರೆ ಭಾರವೊ? ಬಯವೋ? ಗೊತ್ತಿಲ್ಲ. ಆ ಮಗುವನ್ನು ಎಂಟು ಅಥವಾ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ಮದುವೆ ಮಾಡುತ್ತಾರೆ, ಹುಡುಗನು ಹತ್ತಿರದ ಸಂಬಂದಿ. ರೈತ. ಒಂದು ದಿನ ತನ್ನ ಜಮೀನಿನಲ್ಲಿ ಹತ್ತಿ ಬೆಳೆಗೆ ರಾಸಾಯನಿಕ ಸಿಂಪಡಿಸುವಾಗ ಏನೋ ಆಗಿ ಅಸ್ವಸ್ಥನಾಗುತ್ತಾನೆ, ಡಾಕ್ಟರ್ ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ತೊಗೊಳಲು ಹೇಳುತ್ತಾರೆ. ನಾಲ್ಕು ಐದು ದಿನಗಳಾದ ತಕ್ಷಣ ಮನೆಯಲ್ಲಿ ಬೇಜಾರಾಗಿ ಮತ್ತೆ ತಮ್ಮ ಜಮೀನಿಗೆ ಹೋಗುತ್ತಾನೆ. ಮೊದಲೇ ಉತ್ತರ ಕರ್ನಾಟಕದ ಬಿಸಿಲು ಜಾಸ್ತಿ, ಮತ್ತೆ ಅಸ್ವಸ್ಥನಾಗಿ ಮನೆಗೆ ಬರುವಾಗ ಬೈಕ್ ಮೇಲಿಂದ ಬಿದ್ದು ಪ್ರಾಣಬಿಡುತ್ತಾರೆ. ನೋಡಿ ಮದುವೆ ಆಗಿ ಕೆಲವೇ ತಿಂಗಳುಗಳು, ಚಿಕ್ಕ ವಯಸ್ಸು, ಪ್ರಪಂಚದ ಜ್ಞಾನವೇ ಇಲ್ಲದ ಆ ಹೆಣ್ಣು ಮಗು ಚಿಕ್ಕ ವಯಸ್ಸಿನಲ್ಲೇ *ವಿಧವೆ*.
ಕೇಳಲು ಮನಸ್ಸಿಗೆ ತುಂಬಾ ನೋವು. ಅವರನ್ನು ನಾನು ನೋಡಿಲ್ಲ ಆದರೆ ಹಳ್ಳಿಗಳಲ್ಲಿ ಸಂಬಂದ, ಭಯ, ಇನ್ನಿತರ ಕಾರಣಗಳಿಂದ ಇಂತ ಎಷ್ಟೋ ಹೆಣ್ಣು ಮಕ್ಕಳ ಜೀವನವನ್ನೇ ಹಾಳು ಮಾಡಿದ ನಿದರ್ಶನಗಳಿವೆ. ಗಂಡು ಮಗುವಾದರೆ ಇನ್ನೊಂದು ಮದುವೆ ಮಾಡಿ ಕೈ ತೊಳೆದುಕೊಂಡು ಬಿಡುತ್ತಾರೆ. ಆದರೆ ಹೆಣ್ಣು ಮಗುವಿನ ಭವಿಷ್ಯ, ಅವರ ಬಗ್ಗೆ ಯೋಚಿಸುವವರೆ ಇಲ್ಲ. ಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರು, ಇಂತ ಪದ್ದತಿ ಇನ್ನು ಮಾಯವಾಗಿಲ್ಲ ಅನ್ನೋದೇ ಬೇಜಾರು.
ಮೂಕ್ಕಜ್ಜಿಯ ಕನಸುಗಳು ಕಾದಂಬರಿಯ ಮೊದಲ ಪುಟಗಳಲ್ಲೇ ಸ್ವಾರಶ್ಯಕರ ಸಂಗತಿಯನ್ನು ನೋಡಿ ಬರಿಯಲು ಪ್ರೇರೇಪಿಸಿತು. ನಾನೊಬ್ಬ ಬರಹಗಾರನಲ್ಲ, ತಪ್ಪುಗಳಾದಲ್ಲಿ ಕ್ಷಮಿಸಿ. ಮುಕ್ಕಜ್ಜಿಯ ಕನಸುಗಳು ಬೇಗ ಓದಿ ಮುಗಿಸುವ ನಂಬಿಕೆಯಲ್ಲಿ ನಾನಿದ್ದೀನಿ.
Keyboard: GoogleIndica
Pls ignore if any mistakes🙏
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ