ಆ ದಿನ

ಅಂದು ಜನವರಿ 02/2011 ಬೆಂಗಳೂರಿನ ಮೆಜೆಸ್ಟಿಕ್ ಅಲ್ಲಿ ಕೆಂಪು ಬಸ್ ಇಂದ ಇಳಿದೆ, ನನ್ನ ಜೀವನದಲ್ಲಿ ಮೊದಲ ಬಾರಿಗೆ ಏನೊ ಅಷ್ಟೂ ಬೃಹತ್ ಆಕಾರದ ಕಟ್ಟಡಗಳನ್ನು ಮತ್ತು ಇರುವೆಯ ಸಾಲಿನಂತೆ ಟ್ರಾಫಿಕ್ ಅಲ್ಲಿ ನಿಂತಿರುವ/ಚಲಿಸುತ್ತಿರುವ ವಾಹನಗಳನ್ನು ನೋಡಿದ್ದು. ಕಾಲೇಜು ಗೆಳೆಯರೆಲ್ಲಾ ಪುಣೆಯಲ್ಲಿ ಕೆಲಸಕ್ಕೆ ಸೇರಿದ್ದರು, ನನಗೂ ಅವ್ರೆಲ್ಲಾ ಸೇರಿ ಒಂದು ಕೆಲಸ ಕೊಡಿಸ್ತಾರೆ ಅನ್ನೊ ಹುಚ್ಚು ಧೈರ್ಯದಲ್ಲಿ ನಾನಿದ್ದೆ ಆದರೆ "ನಾನೊಂದು ಬಗೆದರೆ ದೈವವಂದು ಬಗೆದಿತ್ತು" ಅನ್ನೊ ಹಾಗೆ ಆ ಗೆಳೆಯನ ಮಾತು ನನ್ನ ಮನಸಲ್ಲಿ ನೂರಾರು ಪ್ರಶ್ನೆಗೆ ದಾರಿಮಾಡಿಕೊಟ್ಟಿತು. ಒಂದು ದಿನ ಗೆಳೆಯರ ಜೊತೆ ವಾಯು ವಿಹಾರಕ್ಕೆ ಹೊರಟೆನು, ಅವರೆಲ್ಲಾ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಬಾಗದವರಾಗಿದ್ದರಿಂದ ಕನ್ನಡ, ಮರಾಠಿ & ಹಿಂದಿ ಅಚ್ಚುಕಟ್ಟಾಗಿ ಮಾತನಾಡುತ್ತಿದ್ದರು. ನನಗೆ ಮಾತ್ರ ಹಿಂದಿ ನೂರಕ್ಕೆ ನೂರರಷ್ಟು ತಿಳಿದರು ಮಾತನಾಡುವುದು ಬರುತ್ತಿರಲಿಲ್ಲ ಆದರೆ ಪುಣೆಗೆ ಹೋದಮೇಲೆ ಕೆಲವೆ ದಿನಗಳಲ್ಲಿ ಕಲಿಯುತ್ತೇನೆ ಎನ್ನುವ ದೈರ್ಯವಂತು ನನ್ನಲ್ಲಿ ಇತ್ತು. ಹಾಗೆ ಅವರೊಂದಿಗೆ ಮಾತನಾಡುತ್ತಾ ನಾನು ನಿಮ್ಮೊಂದಿಗೆ ಬರುತ್ತೇನೆ ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ ಎಂದು ಕೇಳಿದೆ, ತಕ್ಷಣ ಅವರೆಲ್ಲ ನಗೇಚಟಾಕಿ ಮಾಡುತ್ತಾ ನಿನಗೆ ಹಿಂದಿ ಬರಲ್ಲ ಮರಾಠಿ ಅಂತೂ ಗೊತ್ತೆ ಇಲ್ಲ ನಿನ್ನನ್ನು ಕರೆದುಕೊಂಡು ಹೋದರು ಯಾರು ಕೆಲಸ ಕೊಡಲ್ಲಾ ಅಂತೆ ಹೇಳುತ್ತಾ ವ್ಯಂಗ್ಯ ಮಾಡಿದರು. ಅವರನ್ನೇ ನಂಬಿದ್ದ ನಾನು ಸ್ವಲ್ಪ ಸಮಯ ದಿಗ್ಭ್ರಮೆಗೋಳಗಾದೆ, ಯಾವ ದಾರಿಯು ತೋಚದೆ ನಮ್ಮ ಪೋಷಕರನ್ನು ಮನದಲ್ಲೆ ನಿಂದಿಸುತ್ತಾ ಕುಳಿತೇನು, ಕಾರಣವಿಷ್ಟೇ ನಮ್ಮದು ತುಂಬಾ ಬಡತನ ಕುಟುಂಬವಾಗಿದ್ದರಿಂದ ನನಗೆ ಮುಂದಿನ ಅಭ್ಯಾಸ ಮಾಡಲು ಆಗುತ್ತಿಲ್ಲ ಹಾಗೂ ಕೆಲಸವು ಸಿಗುತ್ತಿಲ್ಲ ಅನ್ನೋ ವಿಚಾರ ಮನದಲ್ಲೆ ಮನೆಮಾಡಿತು. ಕೊನೆಗೆ ಕೆಲಸವು ಇಲ್ಲ ಮುಂದಿನ ಅಭ್ಯಾಸ ಮಾಡಲು ಶಕ್ತಿನು ಇಲ್ಲದೆ ನಮ್ಮೂರಿಗೆ ಹೋದೆ, ಹಾಗೆ ನಮ್ಮ ಸಂಬಂಧಿಕರ ಮತ್ತು ಗೆಳೆಯರ ಜಮೀನಲ್ಲಿ ಸಿಕ್ಕ ಚಿಕ್ಕ ಪುಟ್ಟ ಕೂಲಿ ಕೆಲಸ ಮಾಡುತ್ತಾ ಸ್ವಲ್ಪ ದಿನ ಕಳೆದೆ ಹಾಗೂ ಗೆಳೆಯರ ಜೊತೆ ತುಂಟಾಟ ಮಾಡುತ್ತಾ ದಿನ ಕಳೆಯುತ್ತಿದ್ದಿದ್ದೆ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಗೆಳೆಯನ ಮದುವೆ ಇತ್ತು ಅದೆ ದಿನ ಚುನಾವಣೆಯ ಪ್ರಚಾರಕ್ಕೆ ಕೊನೆಯ ದಿನವಾದ್ದರಿಂದ ಗೆಳೆಯರಿಗೆಲ್ಲ ಹಬ್ಬವೋ ಹಬ್ಬ, ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಗೆಳೆಯನ ಮನೆಯಲ್ಲಿ ತೀರ್ಥ ಮತ್ತು ಸಂಜೆ ಚುನಾವಣೆ ಪ್ರಚಾರದಲ್ಲಿ ಕೊಟ್ಟ ತೀರ್ಥವನ್ನು ತೆಗೆದುಕೊಂಡು ಗೆಳೆಯನ ಜಮೀನಿನಲ್ಲಿ ನಡೆಯುತ್ತಿದ್ದ ತೊಗರಿಬೇಳೆ ರಾಶಿಯನ್ನು ಕಾಯಲು ಹೊರಟೆವು. ನಾನು ಮತ್ತು ಮೂರು ಜನ ಗೆಳೆಯರೆಲ್ಲಾ ಸೇರಿ ಸ್ವಲ್ಪ ನೀರು ಮತ್ತು ಊಟ ತೆಗೆದುಕೊಂಡು ಹೋದೆವು, ಅವರೆಲ್ಲಾ ಬೆಳಿಗ್ಗೆಯಿಂದ ಕುಡಿದಿದ್ದರು ನನಗೇನು ಅವರಲ್ಲಿ ಅಂತ ಬದಲಾವಣೆ ಕಾಣಿಸಲಿಲ್ಲ ಆದರೆ ಸ್ವಲ್ಪ ಸಮಯದಲ್ಲಿ ಮತ್ತೆ ಕುಡಿಯಲು ಪ್ರಾರಂಭಿಸುತ್ತಿದ್ದಂತೆ ಅವರ ಮಾತು, ಎಲ್ಲವೂ ಬದಲಾಯಿತು, ಒಬ್ಬನು ಅಂತೂ ಅಲ್ಲೇ ಸತ್ತವರಹಾಗೆ ಮಲಗಿಬಿಟ್ಟ, ಇನ್ನು ಇಬ್ಬರು ಮಾತನಾಡುತ್ತಾ, ಜೋರಾಗಿ ನಗುತ್ತಾ ಹುಚ್ಚರಂತೆ ವರ್ತಿಸ ತೊಡಗಿದರು. ನಾನಂತು ಗಾಬರಿಯಲ್ಲಿ ಏನು ಮಾಡಲು ದೋಚದೆ ಹಾಗೆ ಅವರನ್ನು ನೋಡುತ್ತಾ ಕುಳಿತಿದ್ದೆ, ಒಬ್ಬ ಗೆಳೆಯ ಮಾತನಾಡುತ್ತಾ ನಿನ್ನೊಬ್ಬ ಗೆಳೆಯನ ಪ್ರೀತಿಯ ವಿಚಾರವನ್ನು ಪ್ರಸ್ತಾಪಿಸಿದ್ದೆ ತಡ, ಬೆಟ್ಟ ಬಂದು ಮೈಮೇಲೆ ಬಿದ್ದವರ ಹಾಗೆ ವರ್ತಿಸುತ್ತಾ ಅವ್ನ ಕೈಮೇಲೆ ಹಾಕಿಸಿಕೊಂಡಿದ್ದ ಹಚ್ಚೆಯನ್ನು ಸುಟ್ಟುಕೊಂಡು ನಾನು ಸಾಯುತ್ತೇನೆಂದು ಪಕ್ಕದಲ್ಲೇ ಇದ್ದ ತೊಗರಿ ಕಟ್ಟಿಗೆಯ ಮೇಲೆ ಕುಳಿಸು ಬೆಂಕಿಯನ್ನು ಹಚ್ಚೇಬಿಟ್ಟ. ಅಯ್ಯೋ ದೇವರೆ ಮೊದಲೇ ತೊಗರಿ ಕಟ್ಟಿಗೆಗೆ ಸ್ವಲ್ಪ ಬೆಂಕಿ ಬಿದ್ದರು ಸಾಕು ಎಲ್ಲ ಕಡೆ ಆವರಿಸುತ್ತೆ, ಇನ್ನು ಆರಿಸುವುದು ಕಷ್ಟ ಎಂದು ಅಲ್ಲೇ ಇದ್ದ ನೀರು ಮತ್ತು ಮಣ್ಣನ್ನು ಹಾಕಿ ಕಷ್ಟ ಪಟ್ಟು ಆರಿಸಿದೆ. ತಡಮಾಡದೆ ಒಬ್ಬನನ್ನು ಊರ ಹೊರಗಿದ್ದ ನಮ್ಮ ಮನೆಗೆ ಕರೆದುಕೊಂಡು ಹೋಗಿ ಮಲಗಿಸಿದೆ, ಮತ್ತೆ ಬಂದು ಇನ್ನೊಬ್ಬ ಗೆಳೆಯನನ್ನು ಒಂದು ದೇವಸ್ಥಾನ ಹತ್ತಿರ ಮಲಗಿಸಿದೆ, ಹಾಗೆ ಓಡುತ್ತಾ ಇನ್ನೊಬ್ಬ ಗೆಳೆಯನನ್ನು ಕರೆತರುವಷ್ಟರಲ್ಲಿ ದೇವಸ್ಥಾನದ ಹತ್ತಿರ ಮಲಗಿದ್ದ ಗೆಳೆಯ ಎದ್ದು ಹೋಗಿ ಆ ಮದುವೆ ಮನೆಯಲ್ಲಿ ನಂಗೆ ಹೊಟ್ಟೆ ತುಂಬಾ ಹಸಿದಿದೆ ಊಟಕ್ಕೆ ಕೊಡಿ ಅಂತೇ ಆ ಮದ್ಯ ರಾತ್ರಿಯಲ್ಲಿ ಜಗಳಕ್ಕೆ ಇಳಿದಿದ್ದ, ಇನ್ನೊಬ್ಬನು ನಮ್ಮ ಮನೆಯಲ್ಲಿ ಕಕ್ಕಿ ಸುವಾಸನೆಗೆ ತಳ್ಳಿದ್ದ. ಚಿಕ್ಕ ಹಳ್ಳಿಯಾದ ನಮ್ಮೂರು ಏನೇ ನಡೆದರು ಊರಿನ ಪ್ರತಿವ್ಯಕ್ತಿಗೆ ಗೊತ್ತಾಗುತ್ತಿತ್ತು . ಬೆಳಗಾಗುದರೊಳಗೆ ಪ್ರತಿಯೊಬ್ಬರ ಬಾಯಲ್ಲೂ ಒಂದೇ ಮಾತು ಅದು ಮಾಡೋಕೆ ಕೆಲ್ಸವಂತು ಇಲ್ಲ ಸುಮ್ನೆ ತಿಂದುಕೊಂಡು ಇರೋದು ಬಿಟ್ಟು ಯಾಕೆ ಬಿಟ್ಟಿ ದಾಂಧಲೆ ಮಾಡುತ್ತಾ ಎಲ್ಲರಿಗೂ ಬೇಜಾರು ಮಾಡುತ್ತೀರಿ ಅಂತೇ ಬುದ್ಧಿವಾದ ಹೇಳತೊಡಗಿದರು. ಏನು ತಪ್ಪು ಮಾಡದ ನಾನು ಬೇರೆ ದಾರಿ ತೋಚದೆ ಅವತ್ತೇ ರಾತ್ರಿ ಆ ಕೆಂಪು ಬಸ್ ಹತ್ತಿ ಬೆಂಗಳೂರು ಕಡೆ ಹೊರಟೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍