ನಾನು ಮತ್ತು ನಮ್ಮೂರು

ಸುತ್ತಲೂ ದೊಡ್ದ ದೊಡ್ಡ ಕೋಟೆಯನ್ನು ಕಟ್ಟಿಕೊಂಡು ನನ್ನದೆಯಾದ ಜೀವನದಲ್ಲಿ ನನಗೆ ಇಷ್ಟ ಇದ್ದಹಾಗೆ ಮನದಲ್ಲೇ ಹಾರಾಡುತ, ನಲೆದಾಡುತ್ತಾ ಯಾರನ್ನು ಅಷ್ಟೊಂದು ಅಚ್ಚಿಕೊಳ್ಳದೆ ಆರಾಮಾಗಿ ಇದ್ದೆ, ನಾನು ಮತ್ತು ನನ್ನ ಪ್ರಪಂಚ ಎಂಬ ನಂಬಿಕೆಯಲ್ಲಿ ಮಗ್ನನಾಗಿ ಇರುವಾಗಲೇ ಒಬ್ಬರ ಆಗಮನ ಮರೆಯಲಾಗದ ಅನುಬಂಧ ಉಂಟುಮಾಡುತ್ತಿದೆ.ನೋಡಿದಾಗಲೆಲ್ಲ ಏನೋ ಒಂದು ಖುಷಿ, ಮುದ್ದಾಡುವ ತವಕ, ನಾನು ಇಷ್ಟು ಮೃದುನಾ ಅನಿಸಲು ಶುರುವಾಗತೊಡಗಿತು. ಸುಮಾರು ಮೂರು ತಿಂಗಳ ಹಿಂದೆ ಊರಿಗೆ ಬಂದಾಗ ತುಂಬಾ ಮಳೆ, ರಾತ್ರಿಯಾದರೆ ಸೊಳ್ಳೆಗಳ ಕಾಟ, ಸಿಕ್ಕಾಪಟ್ಟೆ ಬಿಸಿಲು ಇದೆಲ್ಲದರ ಮದ್ಯ ನೇಟ್ವರ್ಕ್, ಕರೆಂಟ್ ಸಮಸ್ಯೆ. ಹಗಲಲ್ಲಿ ಹೆಂಗೋ ಜೀವನ್ ಕಳೆಯಬಹುದು ಆದರೆ ರಾತ್ರಿಯಾದ ತಕ್ಷಣ ಏನಪ್ಪಾ ಇದು ಜೀವನ ಅನ್ನುವಷ್ಟರಷ್ಟು ಸೊಳ್ಳೆಗಳು ಕಾಟ ಕೊಡುತ್ತಿದ್ದವು. ಒಂದು ದಿನ ಸುಮಾರು 12 ಗಂಟೆ, ಎಲ್ಲರೂ ನಿದ್ದೆಯಲ್ಲಿ ಮಗ್ನರಾಗಿದ್ದರು, ನಾನಂತು ಯಾವುದೋ ಕನಸಲ್ಲಿ ತೇಲುತ್ತಾ ಆರಾಮಾಗಿ ನಿದ್ದೆ ಮಾಡುತ್ತಿದ್ದೆ, ಪುಟ್ಟ ಗ್ರಾಮವಾದ ನಮ್ಮೂರಲ್ಲಿ ಸುಮಾರು 9 ಗಂಟೆಗೆ ಎಲ್ಲರೂ ನಿದ್ದೆಗೆ ಜಾರುವ ರೂಡಿ. ಆ 12 ಗಂಟೆಗೆ ಒಂದು ಪುಟ್ಟ ಶಬ್ದ ಕಿವಿಯಲ್ಲಿ ಬರತೊಡಗಿತು..... ಏನಾಯಿತು? ಅಂತೇ ಎದ್ದು ನೋಡುವಷ್ಟರಲ್ಲಿ ಅಮ್ಮ ಇದ್ದರು, ಹಾಗೆ ಸ್ವಲ್ಪ ಹೊರಗೆ ಬಂದು ನೋಡಿದ್ರೆ ಎರಡು ಪುಟ್ಟ ಕಂದಮ್ಮಗಳು. ಹೌದು! ನಮ್ಮ ಆಡು ಎರಡು ಪುಟ್ಟ ಕಂದಮ್ಮಗಳಿಗೆ ಮರಿ ಹಾಕಿದ ಸುವರ್ಣ ಗಳಿಗೆ, ಖುಷಿಯೋ ಖುಷಿ. ಅದರಲ್ಲಿ ಮೊದಲ ಬಾರಿಗೆ ಒಂದು ಹೆಣ್ಣು ಮರಿಗೆ ಜನ್ಮ ಕೊಟ್ಟಿತು, ಅದರ ಜೊತೆಗೆ ಒಂದು ಗಂಡು ಮರಿ. ಎರಡು ಮುದ್ದು ಮುದ್ದಾಗಿ ಕಣ್ಣು ಬಿಡುವುದು, ಎದ್ದು ನಿಲ್ಲಲು ಪ್ರಯತ್ನಿಸುವ ಸಾಹಸ, ಹೀಗೆ ನೋಡುತ್ತಾ ನೋಡುತ್ತಾ, ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ನನಗೆ ಗೊತ್ತಿಲ್ಲದ ಹಾಗೆ ನನ್ನಲ್ಲಿ ಆವರಿಸಿಕೊಂಡು ಬಿಟ್ಟವು. ಅವುಗಳಿಗೆ ಕೂಡಲು ಕುರ್ಚಿಗಳೆ ಬೇಕು, ಮನಗಳು ಒಳ್ಳೆ ಜಾಗವೇ ಬೇಕು, ಕಟ್ಟಿ ಹಾಕಿದರೆ ಸುಮ್ಮನಿರದೆ ಏನಾದ್ರು ಕಿತಾಪತಿ ಮಾಡಿ ಬಿಡಿಸಿಕೊಳ್ಳುವವು. ಆಡುಗಳಲ್ಲಿ ನಾನು ಕಂಡ ಇನ್ನೊಂದು ವಿಚಿತ್ರ ಸ್ವಭಾವವೆಂದರೆ ಸಂದಿಯಲ್ಲಿ ಅಥವಾ ಎತ್ತರದ ಪ್ರದೇಶದಲ್ಲಿ ಹೋಗಿ ಕಣ್ಣುಗಳನ್ನು ತೆರೆದು ನಿದ್ದೆ ಮಾಡುವುದು. ಜೋರಾಗಿ ಏನಾದ್ರು ಶಬ್ದ ಬಂದರೆ ಭಯ ಬಿದ್ದು ಜಿಂಕೆಯ ತರ ಕೈಗೆ ಸಿಗದೆ ಹೊಡಿ ಹೋಗುವುದು. ನಾಯಿಗಳು ಬಂದರೆ ಅದನ್ನೇ ನೋಡುತ್ತಾ ಅದರ ಆಗುಹೋಗುಗಳನ್ನು ಗಮನಿಸಿ ಅದೇನಾದ್ರು ಕದಿಯಲು ಬಂದರೆ ಹೊಡಿ ಹೋಗುವುದು ಮತ್ತು ಅದೇನಾದ್ರು ಸಂಬಾಯಿತ್ ಇದ್ದರೆ ಅದಕ್ಕೆ ಗುದ್ದಲು ಹೋಗುವುದು ಹೀಗೆ ಭಯ ಮತ್ತು ಹಲವು ವಿಚಿತ್ರ ಸ್ವಭಾವವನ್ನು ಹೊಂದಿವೆ. ಇನ್ನು ಹೆಣ್ಣು ಮರಿಗಳಾದ್ರೆ ಅದಕ್ಕೆ ಆಯಸ್ಸು ಜಾಸ್ತಿ ಆದರೆ ಅದೇ ಗಂಡು ಮರಿಗಳಾದರೆ ಒಂದು ಅಥವಾ ಎರಡು ವರ್ಷ ಮಾತ್ರ ಅದರ ಆಯಸ್ಸು. ಹೌದು! ಗಂಡು ಮರಿಗಳನ್ನು ಒಂದು ಅಥವಾ ಎರಡು ವರುಷದಲ್ಲಿ ಮಾರುತ್ತಾರೆ, ಮಟನ್ ತಿನ್ನುವ ಭರದಲ್ಲಿ ಒಂದು ಪುಟ್ಟ ಜೀವಿಯ ಜೀವನ ಕೋನೆಗೊಳಿಸುವುದು ಯಾವ ನ್ಯಾಯವೋ. ವಿಪರ್ಯಾಸ ಅಂದರೆ ಮನುಷ್ಯ ಹೆಣ್ಣು ಮಗುವಿಗೆ ಜನ್ಮವಿಟ್ಟರೆ ಆ ಮಗುವನ್ನು ಸಾಯಿಸುವ ಕಾಲವಿತ್ತು, ಆದರೆ ಈ ಆಡುಗಳಿಗೆ ತದ್ವಿರುದ್ಧ. ಹೆಣ್ಣು ಆದರೆ ಮುಪ್ಪಾಗುವರೆಗೆ ಬದುಕಬಹುದು, ಗಂಡಾದರೆ ಬರಿ ಒಂದೋ ಎರಡೋ ವರುಷಗಳು. ... Continue.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍