ಸಮಾಜಕ್ಕೆ ಯುವಜನತೆಯೆ ಮುಳ್ಳಾಗುತ್ತಿದ್ದಾರಾ...?

ಸಮಾಜಕ್ಕೆ ಯುವಜನತೆಯೆ ಮುಳ್ಳಾಗುತ್ತಿದ್ದಾರಾ...? ಮೊದಲನೆಯದಾಗಿ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಕೊರೊನಾ ಪಿಡುಗುವಿರುವ ಕಾರಣ ವಿಜೃಂಭಣೆಯಿಂದ ಆಚರಣೆ ಮಾಡಲಾಗಲಿಲ್ಲ ಆದರೆ ಜನರ ದೇಶಭಕ್ತಿ ಏನು ಕಡಿಮೆಯಿಲ್ಲ ಅಂತೇ ಮನದಟ್ಟಾಗುವ ರೀತಿ ತಮ್ಮ ತಮ್ಮ ಮನೆಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಹಲವು ಕಡೆ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಾಡುತ್ತಾ ಆಚರಣೆ ಮಾಡಿದೇವು. ಆದರೆ ಆ ಒಂದು ಸ್ವಾತಂತ್ರ್ಯ ನಮ್ಮ ಯುವಜನತೆಯ ಮೇಲೆ ಹೇಗೆ ಪರಿಣಾಮ ಬೀರಿದೆ? ಯುವಜನತೆ ಹೇಗೆ ಸ್ವಾತಂತ್ರ್ಯ ಸ್ವೀಕರಿಸಿದರು ಅಂತೇ ಸ್ವಲ್ಪ ವಿಶ್ಲೇಷಣೆ ಮಾಡುವ ಸಮಯ! ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯ ಪ್ರಕಾರ ಕೊರೊನಾ ಸೋಂಕು ಹರಡುವಿಕೆಗೆ ಯುವಜನತೆಯೇ ಒಂದು ಪ್ರಮುಖ ವಾಹಕ ಎಂದು ಪ್ರಕಟಿಸುತ್ತಾರೆ, ಹೌದು! ವಿಶ್ಲೇಷಣೆ ಮಾಡಿದಾಗ ನೂರಕ್ಕೆ ನೂರು ಸತ್ಯ. ಲಾಕ್ಡೌನ್ ಸ್ವಲ್ಪ ಸಡಿಲಿಸುತ್ತಿದ್ದಂತೆ ಏನೋ ಒಂದು ಮಹಾ ಪ್ರಸಾದ್ ಸಿಕ್ಕ ಹಾಗೆ ಎಲ್ಲಿ ಬೇಕಂದರಲ್ಲಿ ಸುತ್ತಲೂ ಶುರು ಮಾಡಿದರು, ಹಾಗೆಯೇ ತಾವು ಸೋಂಕಿತರಾಗದೆ ತಮ್ಮ ಮನೆಯವರಿಗೆಲ್ಲ ಸೋಂಕನ್ನು ಹರಡಿಸುವ ಮೂಲಕ ಸಮಾಜಕ್ಕೆ ಮಾರಕವಾಗತೊಡಗಿದರು. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ, ಅವರಿಗೆ ಏನು ಹಾಗದೆ ಇರಬಹುದು ಆದರೆ ಅವರ ಮನೆಯಲ್ಲಿಯುವ ತಂದೆ ತಾಯಿ, ಅಜ್ಜ ಅಜ್ಜಿ ಯುವಕರಲ್ಲ ಅನ್ನೋವುದನ್ನು ಮರೆತು ಮಹಾಮಾರಿಯನ್ನು ಮನೆಗೆ ತರುತ್ತಿರುವುದು ಒಂದು ಕಳಕಳಿಯ ವಿಷಯ. ಸೋಂಕು ನಿವಾರಣೆಯಲ್ಲಿ ಒಂದು ಕಡೆ ಸರ್ಕಾರಗಳು ಶತ ಪ್ರಯತ್ನ ಮಾಡುತ್ತಿದ್ದಾರೆ, ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿಗಳು ಹಗಳಿರುವ ಶ್ರಮಿಸುತ್ತಿದ್ದಾರೆ ಆದರೆ ಕೆಲವು ಯುವಜನತೆ ಮಾತ್ರ, ಟೀ, ಕಾಫಿ ಅಂತೇ ಊರೆಲ್ಲ ಸುತ್ತೋದು, ಹುಟ್ಟು ಹಬ್ಬ ಅಂತೇ ಸುಮ್ಮರು ಜನ ಸೇರಿಸಿ ಮಜಾ ಮಸ್ತಿ ಮಾಡುವುದು, ಫೋಟೋಗೋಸ್ಕರ್ ನೂರಾರು ಮೈಲು ದೂರ ಹೋಗಿ ನದಿಗಳ ಹತ್ತಿರ ಜನದಂಗುಳಿ ಮಾಡುವುದು ಏಷ್ಟು ಸರಿ ಏಷ್ಟು ತಪ್ಪು ತಿಳಿಯುತ್ತಿಲ್ಲ. ಎಷ್ಟೋ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಕೊಟ್ಟರು ಅದನ್ನು ದುರುಪಯೋಗ ಪಡಿಸಿ ಊರೆಲ್ಲ ಸುತ್ತುವ ಜನಕ್ಕೆ ಏನೆಂದು ಹೇಳಬೇಕು? ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಹಾಗೆಯೇ ಕೆಲವು ಅಜ್ಞಾನಿ ಯುವಕರು ಮಾತ್ರ ರೋಗವನ್ನು ಹರಡುತ್ತಿರುವುದು ಶೋಚನೀಯ ವಿಚಾರ. ಇನ್ನು ಎರಡನೇ ವಿಚಾರ ಜಗತ್ತೇ ಕೋರೂನಾದಿಂದ ತತ್ತರಿಸಿ ಹೋಗುತ್ತಿರುವಾಗ ನಮ್ಮ ಯುವಜನತೆ ಮಾತ್ರ ಜಾತಿ, ಮತ, ಧರ್ಮ ಅಂತೇ ಹೊಡೆದಾಡುವುದನ್ನು ಬಿಡುತ್ತಿಲ್ಲ. ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ಘಟನೆಗಳನ್ನು ನೋಡಿದರೆ ಏನು ಮಾಡುತ್ತಿದ್ದಾರೆ ನಮ್ಮ ಯುವಜರು ಅಂತೇ ದಿಗ್ಭ್ರಮೆಯಾಗುತ್ತೆ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಮನೆಗೆ ಒಳ್ಳೆಯ ಮಗ, ಸಮಾಜಕ್ಕೆ ಒಳ್ಳೆಯ ನಾಗರಿಕನಾಗುವ ಯೋಚನೆಯೆ ಕಾಣುತ್ತಿಲ್ಲ, ಬಾರಿ ಕ್ಷಣೀಕ ಸಮಾದಾನಕ್ಕೋಸ್ಕರ್ ತಮ್ಮ ಅತ್ಯಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರಗಳು, ನಾಯಕರುಗಳು ಮತ್ತು ಇನ್ನು ಹಲವು ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಶೋಚನಿಯ. ಯಾಕೆ ಬೇಕು ಜಗಳ, ಪ್ರತಿಭಟನೆ, ಕೂಗು ಈ ಸಮಯದಲ್ಲಿ? ಎಲ್ಲರೂ ಸೇರಿ ಮೊದಲು ಮಹಾ ಮಾರಿಯನ್ನು ತೋಲಗಿಸಬೇಕೆ ವಿನಃ ಸುಮ್ಮನೆ ಗುಂಪು ಕಟ್ಟುವುದು ಒಳ್ಳೆಯದಲ್ಲ. ಇನ್ನು ಕೆಲವು ಯುವಕರು ಬೇಗ ದುಡ್ಡು ಮಾಡುವ ಭರದಲ್ಲಿ ಅನ್ಯಮಾರ್ಗವಿಡಿದಿರುವುದು ದುರಂತ, ಇಂದು ಸಮಾಜದಲ್ಲಿ ನಡೆಯುತ್ತಿರುವ ಎಷ್ಟೋ ಕೃತ್ಯಗಳಲ್ಲಿ ಯುವಜನತೆಯ ಪ್ರಮಾಣ ಏರಿಕೆಯಾಗುತ್ತಿರುವುದು ಮತ್ತೊಂದು ಶೋಚನೀಯ. ಅತ್ಯಾಚಾರ, ಕೊಲೆ, ಕಳ್ಳ ವ್ಯಾಪಾರ, ಕಳ್ಳ ಸಾಗಾಣಿಕೆ ಹೀಗೆ ಹಲವು ಕೃತ್ಯಗಳ ಜೊತೆಗೆ ತಮ್ಮ ಮನೆಯ ಹಿರಿಯ ನಾಗರಿಕರ ಒತ್ತಡಕ್ಕೆ ಮಣಿದು ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ ಹೀಗೆ ಹಲವು ದರಿದ್ರಗಳ ಹಿಂದೇ ಓಡುತ್ತಿರುವುದು ಏಷ್ಟು ಒಳಿತು? ಯುವಜನತೆ ಅನ್ಯಮಾರ್ಗವಿಡಿಯುತ್ತಿರುವದಕ್ಕೆ ಕಾರಣಗಳಾದರು ಏನು? ಯಾಕೆ ಕೆಲವು ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ? ಹೀಗೆ ಹಲವು ವಿಷಯದ ಬಗ್ಗೆ ಸರ್ಕಾರ ಒಂದು ಕಠಿಣ ನಿಯಮವನ್ನು ಜಾರಿಮಾಡಿದರೆ ಈ ಸಮಾಜಕ್ಕೆ ಹಾಗುವ ಏಷ್ಟೋ ಕೆಟ್ಟ ಪರಿಣಾಮವನ್ನು ಮೊದಲೇ ತಡೆಯುವುದು. ಅಷ್ಟಕ್ಕೂ ಎಲ್ಲಾ ಯುವಕರು ಹಾಗೆಯೇ ಅಂತೇ ಯಾವತ್ತೂ ಹೇಳಲು ಹಾಗುವುದಿಲ್ಲ ಆದರೆ ಒಂದು ಕೆಟ್ಟ ಹುಳು ಸಮಾಜವನ್ನೇ ಹಾಳು ಮಾಡುವುದರಲ್ಲಿ ಸಂಶಯವಿಲ್ಲ. ಸರ್ಕಾರಗಳು, ಸಂಘ ಸಂಸ್ಥೆಗಳು, ಕುಟುಂಬ ವರ್ಗ ಎಲ್ಲರೂ ಕೈ ಜೋಡಿಸಿದರೆ ನಮ್ಮ ಯುವಜನತೆಗೆ ಒಂದು ಒಳ್ಳೆಯ ಮಾರ್ಗ ಸಿಗಬಹುದೇನೋ! ನಮಗೆ ಸ್ವಾತಂತ್ರ್ಯ ಕೊಡಿಸಿದ ಹೋರಾಟಗಾರರು ಸ್ಪೂರ್ತಿಯಾಗಬೇಕೆ ಒರತು ಯಾರೋ ಕಳ್ಳರು, ಖದೀಮರು ಅಲ್ಲ. ಅರ್ಥ ಮಾಡಿಕೊಂಡು ಜೀವನ್ ನಡಿಸಿದರೆ ಸ್ವರ್ಗ ಇಲ್ಲವಾದರೆ ನರಕ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍