ತಾಂತ್ರಿಕ ಜ್ಞಾನ, ಮುಂದಾಲೋಚನೆವಿಲ್ಲದ ನಾಯಕತ್ವ:

ತಾಂತ್ರಿಕ ಜ್ಞಾನ, ಮುಂದಾಲೋಚನೆವಿಲ್ಲದ ನಾಯಕತ್ವ: ಕೆಲವು ವರ್ಷಗಳಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣವಾಯ್ತು, ಬಿದರಲ್ಲಾಯ್ತು, ವಿಜಯಪುರಲ್ಲಿ ಇನ್ನು ಹಾವು ಏಣಿ ಆಟ ನಡೀತಿದೆ, ಬಾಗಲಕೋಟೆಗೆ ಒಂದು ಬೇಕು ಹೀಗೆ ತಮ್ಮ ತಮ್ಮ ಸ್ವಾರ್ಥಕ್ಕೆ ತಕ್ಕ ಹಾಗೆ ತಾವು ಬೇಕಂದಾಗೆ ನಮ್ಮ ನಾಯಕರು, ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ವಾಸ್ತವಿಕವಾಗಿ ನೋಡುವುದಾದರೆ ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಒಂದೊಂದು ವಿಮಾನ ನಿಲ್ದಾಣದ ಅವಶ್ಯಕತೆಯೇ ಇಲ್ಲ. ಪ್ರತಿಯೊಂದು ಜಿಲ್ಲೆಗೂ ಬೇರೆ ಬೇರೆ ವಿಮಾನ ನಿಲ್ದಾಣ ಮಾಡಿ ಸುಮ್ಮನೆ ರೈತರ ಜಮೀನು ಅಥವಾ ಕೈಗಾರಿಕೆ ಭೂಮಿಯನ್ನು ವಿನಾಕಾರಣ ಹಾಳು ಮಾಡುವುದಕ್ಕಿಂತ ನೆರೆಯ ಜಿಲ್ಲೆಗಳನ್ನು ಒಂದುಗೂಡಿಸಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಒಳಿತು. ಉದಾಹರಣೆಗೆ ವಿಜಯಪುರ, ಕಲಬುರ್ಗಿ, ಯಾದಗಿರಿ ಹಾಗೂ ಬಾಗಲಕೋಟೆ ನೆರೆಯ ಜಿಲ್ಲೆಗಳಾದ ಕಾರಣ ನಾಲ್ಕು ಜಿಲ್ಲೆಗೆ ಹತ್ತಿರದ ಜಾಗದಲ್ಲಿ ನಿರ್ಮಾಣವಾದರೆ ಆರ್ಥಿಕವಾಗಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳು ಒಗ್ಗಟ್ಟಿನಿಂದ ಮುನ್ನೆಡೆಯಲು ಮುನ್ನಡಿಯಾಗುವುದು.  ಒಂದು ವಿಮಾನ ನಿಲ್ದಾಣಕ್ಕೆ ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ, ಭೌಗೋಳಿಕವಾಗಿ ಎಲ್ಲಾ ರೀತಿಯ ಪರಿಶೀಲನೆ ಮಾಡಿ, ರೈತರಿಂದ ಅಥವಾ ಕೈಗಾರಿಕಾ ಪ್ರದೇಶವನ್ನು ಒತ್ತುವರಿ ಮಾಡಿ ವಿಮಾನ ನಿಲ್ದಾಣ ಮಾಡಬೇಕು. ಆಮೇಲೆ ನಿಲ್ದಾಣದ ಪರೀಕ್ಷೆ, ಎಲ್ಲಾ ಇಲಾಖೆಗಳಿಂದ ಅನುಮತಿ, ಆರ್ಥಿಕ ಕೃಡಿಕರಣ ಹೀಗೆ ಹಲವು ಮಜಲುಗಳನ್ನು ದಾಟಿದಾಗ ಮಾತ್ರ ಪ್ರಾದೇಶಿಕ ವಿಮಾನ ನಿಲ್ದಾಣ ಸಿಗುವುದು. ಒಂದು ವಿಮಾನ ನಿಲ್ದಾಣ ಮಾಡಲು ಇಷ್ಟು ಕಷ್ಟವಾದರೆ ಹೀಗೆ ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ವಿಮಾನ ನಿಲ್ದಾಣ ನಿರ್ಮಿಸುವುದು ಒಂದು ಶತದಡ್ಡ ತೀರ್ಮಾನ ಅನಿಸುತ್ತೆ. ಇದರ ಬದಲು ಅವಳಿ ಜಿಲ್ಲೆಗಳಿಗೆ ಮಧ್ಯದಲ್ಲಿರುವ ಒಂದು ಪ್ರದೇಶವನ್ನು ಗುರುತಿಸಿ ಅಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರೆ ಆ ಪ್ರದೇಶಗಳಿಗೆ ಬಹುದೊಡ್ಡ ಕೊಡುಗೆ ಕೊಟ್ಟಂತಾಗುತ್ತೆ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಈ ಕಡೆ ಮುಖ ಮಾಡಲು ಸಹಕಾರಿಯಾಗಬಹುದು. ನಮ್ಮ ನಾಯಕರುಗಳು, ಅಧಿಕಾರಿಗಳು ಸ್ವಾರ್ಥಕ್ಕೋಸ್ಕರ್ ಲಾಜಿಕ್ ಇಲ್ಲದ ಹಾಗೆ ಇವತ್ತು ಪ್ರತಿ ಜಿಲ್ಲೆಗೊಂದು ಕೇಳ್ತಾರೆ ನಾಳೆ ಪ್ರತಿ ತಾಲೂಕಿಗೊಂದು ಅಂತೇ ಹೇಳಿ ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಾರೆ ಆದರೆ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟಿ ಜೀವನ ನಡಿಸುವವರ ಮುಖವನ್ನು ನೋಡಿ, ದುಂದು ವೆಚ್ಚಕ್ಕೆ ಕಡಿವಾಣವಾಕಬೇಕಿದೆ. ಭಾರತವು ಸಾರ್ವಭೌಮತ್ವ ಸಾದಿಸಬೇಕಾದರೆ ಪ್ರತಿಯೊಬ್ಬರು ತಮ್ಮ ಸ್ವಾರ್ಥವನ್ನು ತ್ಯಾಗ ಮಾಡಿ ಒಂದೊಂದು ರೂಪಾಯಿಯನ್ನು ಜಾಣ್ಮೆಯಿಂದ ವ್ಯಹಿಸಬೇಕು ಮತ್ತು ಅದು ತಾಂತ್ರಿಕವಾಗಿಯೂ ಉತ್ತಮವಾಗಿರಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍