ಕೊರೊನಾದ ಬಗ್ಗೆ - ಬಾಗ ೧
(a+b)² ಗೆ ಉತ್ತರ ಯಾರಿಗೂ ಕೇಳಿದ್ರು ಹೇಳ್ತಾರೆ, ಹಾಗೆಯೇ ಇವತ್ತು ಕೊರೊನಾ ಬಗ್ಗೆ ನೀವು ಚಿಕ್ಕ ಮಕ್ಕಳಲ್ಲಿ ಕೇಳಿದ್ರು a to z ವರೆಗೆ ಉತ್ತರ ಸಿಗುವುದು ಆದರೆ ನಾನೇಕೆ ಬರೆಯುತ್ತಿದ್ದೇನೆ? ಏನಾದ್ರು ವಿಶೇಷತೆಗಳು ಬರಿಯುತ್ತಿದ್ದಿನಾ? ಇಲ್ಲ ವಿಶೇಷತೆಗಳನ್ನು ಬರೆಯಲು ನಾನು ವಿಜ್ಞಾನಿಯು ಅಲ್ಲ, ವ್ಯದ್ಯರು ಅಲ್ಲ. ನಾನೇಕೆ ಅಂದರೆ 'ಇಲ್ಲಿಯವರೆಗೂ ಕೊರೊನಾದ ಬಗ್ಗೆ ಏನು ಬರೆಯಲು ಅಸಕ್ತಿವಿರಲಿಲ್ಲ ಕೆಲವೊದು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಾಫ್ಟ್ವೇರ್ ತಂತ್ರಜ್ಞಾನ ಹೇಗೆ ಕೊರೊನಾ ವಿರುದ್ಧ ಹೋರಾಡಲು ಸಹಾಯಕವಾಗಿವೆ! ಅಂತೇ ಸಂಕ್ಷಿಪ್ತವಾಗಿ ವಿವರಿಸಿದ ನೆನಪು ಮಾತ್ರ, ಅದಕ್ಕೆ ಸ್ವಲ್ಪ ನನಗೆ ತಿಳಿದ ಮಟ್ಟಿಗೆ ಬರಿಯೋಣ ಅನಿಸಿತು. ಇಲ್ಲಿ ನಾನು ಸರಕಾರದ ಆಡಳಿತಾತ್ಮಕ ವಿಷಯದ ಬಗ್ಗೆ ಬರೆಯಲು ಇಚ್ಛಿಸುವುದಿಲ್ಲ.
ಮೊದಲ ಬಾರಿಗೆ ಕೊರೊನಾ ವೈರಾಣು ಕಾಣಿಸಿಕೊಂಡದ್ದು 14ನೇ ನವೆಂಬರ್ 19 ಚೈನಾದ ವುಹಾನ್ ಪ್ರಾಂತ್ಯದಲ್ಲಿ ಅಂತೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೈನಾ ಜಗತ್ತಿಗೆ ಹೇಳಿಕೊಂಡಿದ್ದಾರೆ ಆದರೆ ಕೆಲವೊಂದು ದೇಶಗಳು/ಸಂಸ್ಥೆಗಳು ನಡೆಸಿದ ಸಮಿಕ್ಷೇಗಳ ಪ್ರಕಾರ ನವೆಂಬರಗಿಂತ ಮೊದಲೇ ಚೀನಾದಲ್ಲಿ ಈ ವೈರಾಣು ಕಾಣಿಸಿಕೊಂಡಿತ್ತು ಆದರೆ ಇದನ್ನು ಬಹಿರಂಗ ಪಡಿಸಿಲ್ಲ ಅಂತೇ ವಾದಿಸುತ್ತವೇ, ಇದರ ಬಗ್ಗೆ ಇನ್ನೂ ವೈಜ್ಞಾನಿಕವಾಗಿ ಸಾಬೀತು ಪಡಿಸಬೇಕು ಅಷ್ಟೇ. ನವೆಂಬರ್ ಅಲ್ಲಿ ಶುರುವಾದ ಈ ಪಿಡುಗನ್ನು ಎಲ್ಲಿಂದ ಬಂತು? ಹೇಗೆ ಬಂತು? ಅಂತೇ ಅದರ ಮೂಲ ಕಂಡುಹಿಡಿಯಲು ವಿಶ್ವ ಆರೋಗ್ಯ ಸಂಸ್ಥೆ ಸುಮಾರು ಆರು ತಿಂಗಳು ಮೌನ ತಾಳಿ ಕೊನೆಗೆ ಒಂದು ಸಮಿತಿಯನ್ನು ರಚಿಸಿ ಇತ್ತೀಚಿಗೆ ಚೀನಾಗೆ ಕಳುಹಿಸಿದೆ, ನೋಡಬೇಕು ಏನು ಬರುತ್ತೆ ಅಂತೇ. ಅಮೆರಿಕಾ ದೇಶವು "ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ರೋಗದ ಮೂಲವನ್ನು ಕಂಡುಹಿಡಿಯಲು ಮತ್ತು ಸರಿಯಾದ ಸಮಯಕ್ಕೆ ಮಾಹಿತಿ ನೀಡಲು" ವಿಫಲವಾಗಿದೆ ಅಂತೇ ತಾನು ನೀಡುತ್ತಿದ್ದ ದೇಣಿಗೆಯನ್ನು ನಿಲ್ಲಿಸಿದ್ದು ಇವಾಗ ನೆನಪಿಸಿಕೊಳ್ಳಬಹುದು.
ಪ್ರಾರಂಭದಲ್ಲಿ ಈ ವೈರಾಣು ಗಾಳಿಯಲ್ಲಿ ಇರುವುದಿಲ್ಲ ಅಂತೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೆಲವೊಂದು ವೈಜ್ಞಾನಿಕ ಸಂಸ್ಥೆಗಳು ವರದಿ ಮಾಡಿದ್ದರು ಆದರೆ ಇತ್ತೀಚಿನ ವರದಿಗಳ ಪ್ರಕಾರ ಈ ವೈರಾಣು ಒಳಾಂಗಣ ಪ್ರದೇಶದಲ್ಲಿ ನಿಗದಿತ ಸಮಯದವರೆಗೆ ಗಾಳಿಯಲ್ಲಿ ಬದುಕಬಹುದು ಮತ್ತು ಹರಡಬಹುದು ಅಂತೇ ಹೇಳಿದೆ. ಪ್ರಾರಂಭದಲ್ಲಿ ಕೆಮ್ಮು, ನೆಗಡಿ, ಗಂಟಲು ಮತ್ತು ಜ್ವರ ಈ ರೋಗದ ಲಕ್ಷಣಗಳು ಅಂತೇ ಹೇಳಿದ್ದರು ಆದರೆ ಇತ್ತೀಚಿನ ವರದಿಗಳ ಪ್ರಕಾರ ತುರುಚುವಿಕೆ, ಬಾಯಿ ಸಪ್ಪೆ ಸಪ್ಪೆ ಹೀಗೆ ಹಲವಾರು ರೋಗಲಕ್ಷಣಗಳು ಇದೆ ಅಂತೇ ಮತ್ತು ಸುಮಾರು ಅರ್ಧದಷ್ಟು ಜನರಲ್ಲಿ ರೋಗದ ಯಾವುದು ಲಕ್ಷಣಗಳು ಇಲ್ಲದ್ದಿದ್ದರು ಪಾಜಿಟಿವ್ ಬಂದ ಉದಾಹರಣೆಗಳಿವೆ. ಪ್ರಾರಂಭದಲ್ಲಿ... ನಮ್ಮ ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವ HCQ ಮಾತ್ರೆಗಳು ರಾಮಬಾಣವಾಗಿತ್ತು ಆದರೆ ಅದರಿಂದ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬರುತ್ತಿಲ್ಲ ಅಂತೇ ಅದನ್ನು ವಿಶ್ವ ಆರೋಗ್ಯ ಸಂಸ್ಥೆ ನಿಲ್ಲಿಸಿತು.
ಭಾರತದಲ್ಲಿ ಲಾಕ್ಡೌನ್ ಇರುವವರೆಗೂ ತನ್ನ ಕಂಟ್ರೋಲ್ ಅಲ್ಲಿ ಇದ್ದ ವೈರಾಣು ಎಲ್ಲವೂ ಓಪನ್ ಮಾಡುತ್ತಿದ್ದ ಹಾಗೆ ತನ್ನ ಮೃಗರೂಪವನ್ನು ತೋರಿಸುತ್ತಿದೆ. ಇಂದು ವಿಶ್ವದಲ್ಲೇ 3ನೇ ಅತಿಹೆಚ್ಚು ಸೋಂಕಿತ ರಾಷ್ಟ್ರ ಅಂತೇ ಕೆಟ್ಟ ಹೆಸರಿಗೆ ಪಾತ್ರವಾಗಿದೆ ಮತ್ತು ಭಾರತದಲ್ಲೇ ಅತಿ ವೇಗವಾಗಿ ಸೋಂಕು ಹರಡುತ್ತಿರುವ ನಗರಗಳಲ್ಲಿ ನಮ್ಮ ಬೆಂಗಳೂರು ಮೊದಲ ಸ್ಥಾನದಲ್ಲಿ ಇರುವುದು ಒಂದು ಬೇಸರದ ಮತ್ತು ಭಯದ ಸಂಗತಿ. ಆ ದೇವರ ದಯೆಯಿಂದ ಮತ್ತೆ ಕಂಟ್ರೋಲ್ ಗೆ ಬದರೆ ಸಾಕು.
ಕೊರೊನಾ ಲಸಿಕೆಯನ್ನು ಕಂಡು ಹಿಡಿಯುವ ಸ್ಪರ್ದೆಯಲ್ಲೂ ನಾವೇನು ಕಡಿಮೆ ಇಲ್ಲ, ಹೈದರಾಬಾದ್ ಮೂಲದ ಭಾರತ ಬಯೋಟೆಕ್, ಐಸಿಎಂಆರ್ ಮತ್ತು ವೈರಾಲಾಜಿ ಸೆಂಟರ್ ಪುಣೆ ಸೇರಿ ಕವಾಕ್ಸಿನ್ ಕಂಡುಹಿಡಿದರು ಅದರ ಬೆನ್ನಲ್ಲೇ ZYDUS CADIL ಕಂಪನಿ ಮತ್ತೊಂದು ಲಸಿಕೆ ಕಂಡು ಹಿಡಿದು ಮನುಷ್ಯನ ಮೇಲೆ ಪ್ರಯೋಗಕ್ಕೆ ಅನುಮತಿ ಪಡೆದಿದೆ. ಈ ಎರಡು ಲಸಿಕೆಗಳು ಈಗಾಗಲೇ ಕೆಲವೊಂದು ಕಡೆ ತನ್ನ ಪ್ರಯೋಗವನ್ನು ಪ್ರಾರಂಭಿಸಿದ್ದಾವೆ ಅಂತೇ ಮೂಲಗಳಿಂದ ತಿಳಿದು ಬಂದಿದೆ. ಇಂದು ರಷ್ಯಾ ತನ್ನ ಲಸಿಕೆಯನ್ನು ಮುಂದಿನ ತಿಂಗಳು ಮಾರುಕಟ್ಟೆಗೆ ಪರಿಚಯಿಸುತ್ತೆ ಅಂತೇ ಹೇಳಿಕೊಂಡಿದೆ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ತ್ರಾಝೆನಿಕ ಜಂಟಿಯಾಗಿ ನಡೆಸುತ್ತಿರುವ ಮತ್ತೊಂದು ಲಸಿಕೆ ಮೂರನೇ ಹಂತದ ಪರೀಕ್ಷೆಯಲ್ಲಿ ಇದೆ. ಮತ್ತು ಸುಮಾರು 135ಕ್ಕೂ ಹೆಚ್ಚು ಲಸಿಕೆಗಳು ಪರೀಕ್ಷೆಯ ಹಂತದಲ್ಲಿದ್ದಾವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ