ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೊರೊನಾದ ಬಗ್ಗೆ - ಬಾಗ ೧

(a+b)² ಗೆ ಉತ್ತರ ಯಾರಿಗೂ ಕೇಳಿದ್ರು ಹೇಳ್ತಾರೆ, ಹಾಗೆಯೇ ಇವತ್ತು ಕೊರೊನಾ ಬಗ್ಗೆ ನೀವು ಚಿಕ್ಕ ಮಕ್ಕಳಲ್ಲಿ ಕೇಳಿದ್ರು a to z ವರೆಗೆ ಉತ್ತರ ಸಿಗುವುದು ಆದರೆ ನಾನೇಕೆ ಬರೆಯುತ್ತಿದ್ದೇನೆ? ಏನಾದ್ರು ವಿಶೇಷತೆಗಳು ಬರಿಯುತ್ತಿದ್ದಿನಾ? ಇಲ್ಲ ವಿಶೇಷತೆಗಳನ್ನು ಬರೆಯಲು ನಾನು ವಿಜ್ಞಾನಿಯು ಅಲ್ಲ, ವ್ಯದ್ಯರು ಅಲ್ಲ. ನಾನೇಕೆ ಅಂದರೆ 'ಇಲ್ಲಿಯವರೆಗೂ ಕೊರೊನಾದ ಬಗ್ಗೆ ಏನು ಬರೆಯಲು ಅಸಕ್ತಿವಿರಲಿಲ್ಲ ಕೆಲವೊದು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಾಫ್ಟ್ವೇರ್ ತಂತ್ರಜ್ಞಾನ ಹೇಗೆ ಕೊರೊನಾ ವಿರುದ್ಧ ಹೋರಾಡಲು ಸಹಾಯಕವಾಗಿವೆ! ಅಂತೇ ಸಂಕ್ಷಿಪ್ತವಾಗಿ ವಿವರಿಸಿದ ನೆನಪು ಮಾತ್ರ, ಅದಕ್ಕೆ ಸ್ವಲ್ಪ ನನಗೆ ತಿಳಿದ ಮಟ್ಟಿಗೆ ಬರಿಯೋಣ ಅನಿಸಿತು. ಇಲ್ಲಿ ನಾನು ಸರಕಾರದ ಆಡಳಿತಾತ್ಮಕ ವಿಷಯದ ಬಗ್ಗೆ ಬರೆಯಲು ಇಚ್ಛಿಸುವುದಿಲ್ಲ. ಮೊದಲ ಬಾರಿಗೆ ಕೊರೊನಾ ವೈರಾಣು ಕಾಣಿಸಿಕೊಂಡದ್ದು 14ನೇ ನವೆಂಬರ್ 19 ಚೈನಾದ ವುಹಾನ್ ಪ್ರಾಂತ್ಯದಲ್ಲಿ ಅಂತೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೈನಾ ಜಗತ್ತಿಗೆ ಹೇಳಿಕೊಂಡಿದ್ದಾರೆ ಆದರೆ ಕೆಲವೊಂದು ದೇಶಗಳು/ಸಂಸ್ಥೆಗಳು ನಡೆಸಿದ ಸಮಿಕ್ಷೇಗಳ ಪ್ರಕಾರ ನವೆಂಬರಗಿಂತ ಮೊದಲೇ ಚೀನಾದಲ್ಲಿ ಈ ವೈರಾಣು ಕಾಣಿಸಿಕೊಂಡಿತ್ತು ಆದರೆ ಇದನ್ನು ಬಹಿರಂಗ ಪಡಿಸಿಲ್ಲ ಅಂತೇ ವಾದಿಸುತ್ತವೇ, ಇದರ ಬಗ್ಗೆ ಇನ್ನೂ ವೈಜ್ಞಾನಿಕವಾಗಿ ಸಾಬೀತು ಪಡಿಸಬೇಕು ಅಷ್ಟೇ. ನವೆಂಬರ್ ಅಲ್ಲಿ ಶುರುವಾದ ಈ ಪಿಡುಗನ್ನು ಎಲ್ಲಿಂದ ಬಂತು? ಹೇಗೆ ಬಂತು? ಅಂತೇ ಅದರ ಮೂ...

ತಾಂತ್ರಿಕ ಜ್ಞಾನ, ಮುಂದಾಲೋಚನೆವಿಲ್ಲದ ನಾಯಕತ್ವ:

ತಾಂತ್ರಿಕ ಜ್ಞಾನ, ಮುಂದಾಲೋಚನೆವಿಲ್ಲದ ನಾಯಕತ್ವ: ಕೆಲವು ವರ್ಷಗಳಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣವಾಯ್ತು, ಬಿದರಲ್ಲಾಯ್ತು, ವಿಜಯಪುರಲ್ಲಿ ಇನ್ನು ಹಾವು ಏಣಿ ಆಟ ನಡೀತಿದೆ, ಬಾಗಲಕೋಟೆಗೆ ಒಂದು ಬೇಕು ಹೀಗೆ ತಮ್ಮ ತಮ್ಮ ಸ್ವಾರ್ಥಕ್ಕೆ ತಕ್ಕ ಹಾಗೆ ತಾವು ಬೇಕಂದಾಗೆ ನಮ್ಮ ನಾಯಕರು, ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ವಾಸ್ತವಿಕವಾಗಿ ನೋಡುವುದಾದರೆ ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಒಂದೊಂದು ವಿಮಾನ ನಿಲ್ದಾಣದ ಅವಶ್ಯಕತೆಯೇ ಇಲ್ಲ. ಪ್ರತಿಯೊಂದು ಜಿಲ್ಲೆಗೂ ಬೇರೆ ಬೇರೆ ವಿಮಾನ ನಿಲ್ದಾಣ ಮಾಡಿ ಸುಮ್ಮನೆ ರೈತರ ಜಮೀನು ಅಥವಾ ಕೈಗಾರಿಕೆ ಭೂಮಿಯನ್ನು ವಿನಾಕಾರಣ ಹಾಳು ಮಾಡುವುದಕ್ಕಿಂತ ನೆರೆಯ ಜಿಲ್ಲೆಗಳನ್ನು ಒಂದುಗೂಡಿಸಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಒಳಿತು. ಉದಾಹರಣೆಗೆ ವಿಜಯಪುರ, ಕಲಬುರ್ಗಿ, ಯಾದಗಿರಿ ಹಾಗೂ ಬಾಗಲಕೋಟೆ ನೆರೆಯ ಜಿಲ್ಲೆಗಳಾದ ಕಾರಣ ನಾಲ್ಕು ಜಿಲ್ಲೆಗೆ ಹತ್ತಿರದ ಜಾಗದಲ್ಲಿ ನಿರ್ಮಾಣವಾದರೆ ಆರ್ಥಿಕವಾಗಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳು ಒಗ್ಗಟ್ಟಿನಿಂದ ಮುನ್ನೆಡೆಯಲು ಮುನ್ನಡಿಯಾಗುವುದು.  ಒಂದು ವಿಮಾನ ನಿಲ್ದಾಣಕ್ಕೆ ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ, ಭೌಗೋಳಿಕವಾಗಿ ಎಲ್ಲಾ ರೀತಿಯ ಪರಿಶೀಲನೆ ಮಾಡಿ, ರೈತರಿಂದ ಅಥವಾ ಕೈಗಾರಿಕಾ ಪ್ರದೇಶವನ್ನು ಒತ್ತುವರಿ ಮಾಡಿ ವಿಮಾನ ನಿಲ್ದಾಣ ಮಾಡಬೇಕು. ಆ...