ಕ್ವಾರಂಟೈನ್ (Quarantine)

 ಕ್ವಾರಂಟೈನ್(Quarantine)

ಮೊನ್ನೆ ಕಾಲ್ಪನಿಕ ಕಾದಂಬರಿ "the immortals of meluha" ಓದಲು ಶುರುಮಾಡಿದೆ, ಕೆಲವು ಪುಟಗಳ ನಂತರ ನಂಗೆ ಒಂದು ಆಶ್ಚರ್ಯ ಕಾದಿತ್ತು. ನಿಜವಾದ ಕ್ರಿಯಾಶೀಲತೆ, ಅನುಭವ, ಜ್ಞಾನ, ಪದಗಳ ಜೋಡಣೆ ಎಲ್ಲವೂ ನೋಡಿ ಅಮೋಘವೆನಿಸಿತು. ಕೆಲವು ತಿಂಗಳಿಂದ ನಮ್ಮ ನಿಮ್ಮೆಲ್ಲರಿಗೂ ಚಿರಪರಿಚಿತ ಪದ "ಕ್ವಾರಂಟೈನ್" ಉಲ್ಲೇಖಿಸಿದ್ದು ನೋಡಿ ದಿಗ್ಭ್ರಮೆಗೋಳಗಾದೆ.

ಕ್ವಾರಂಟೈನ್ ಪದದ ಅರ್ಥ ಸರಿಯಾಗಿ ಗೊತ್ತಿಲ್ಲದ ಎಷ್ಟೋ ಸಚಿವರುಗಳು, ಶಾಸಕರುಗಳು, ಸಂಸದರು ಮತ್ತು ಸಮಾಜದ ಗಣ್ಯರನ್ನು ದಿನಾಲು ಟಿವಿಯಲ್ಲಿ ನೋಡುತ್ತಿದ್ದೇವೆ ಅಂತದರಲ್ಲಿ ನಮ್ಮ ಬರಹಗಾರರು ಅಷ್ಟು ಹಿಂದಿನ ಕಾಲದ ಕಥೆಯಲ್ಲಿ ಈ ಪದವನ್ನು ಉಲ್ಲೇಖಿಸಿ...ತಮ್ಮ ಬರವಣಿಗೆ, ಜ್ಞಾನ ಮತ್ತು ಅನುಭವವನ್ನು ಜಗತ್ತಿಗೆ ತೋರಿಸಿರುವುದು ಒಂದು ಖುಷಿಯ ವಿಚಾರ.

ಗುಣ ಪಂಗಡದ ಶಿವ ಮತ್ತು ಭದ್ರ ತಮ್ಮ ಸುತ್ತಮುತ್ತಲಿನ ವ್ಯರಿಗಳ ಕಾಟದಿಂದ ಬೇಸತ್ತು ನಂದಿಯ ಆಹ್ವಾನದ ಮೇರೆಗೆ ಮೇಲೂಹ ಸಾಮ್ರಾಜ್ಯದ ಕಡೆ ಪಯಣ ಬೆಳೆಸುತ್ತಾರೆ. ಶಿವನು ಮಹಾ ಶೂರನು, ಪರಾಕ್ರಮಿಯಾದರು ತನ್ನ ನಂಬಿದ ಜನರ ರಕ್ಷಿಣೆಗಾಗಿ ಈ ದೃಢ ನಿರ್ಧಾರ ಕೈಗೊಂಡು ದೂರದ ಊರಿನ ಗಡಿ ಮುಟ್ಟುತ್ತಲೇ ಅಲ್ಲಿನ ಸರ್ಕಾರ ಅವರನ್ನೆಲ್ಲ ಒಂದು ಅಥಿತಿ ಭವನದಲ್ಲಿ ಕ್ವಾರಂಟೈನ್ ಮಾಡುವರು. ಶಿವನಿಗೆ ಗಾಬರಿಯಾಗಿ ನಂದಿಯನ್ನು ಕೇಳಿದಾಗ ನಂದಿ " ನೋಡಿ ಮೇಲೂಹ ಜನರು ಆರೋಗ್ಯವಂತರು, ಶುಚಿತ್ವ, ಶಿಸ್ತುಬದ್ಧ ಪ್ರಜೆಗಳು, ಹೊರದೇಶದಿಂದ ಬಂದ unknow ರೋಗದಿಂದ ತಡೆಗಟ್ಟಲು ನಿಮ್ಮನ್ನು ಸ್ವಲ್ಪ ದಿನ ಈ ಅಥಿತಿ ಗೃಹದಲ್ಲಿ ಕ್ವಾರಂಟೈನ್ ಮಾಡುವೆವು. ಎಲ್ಲವೂ ಸರಿ ಆದಮೇಲೆ ನಗರದ ಒಳಗೆ ಬರಲು ಅನುಮತಿ ನೀಡುವೆವು" ಅಂತೇ ಹೇಳಿ ಶಿವನನ್ನು ಒಬ್ಬ ಹಿರಿಯ ವೈದ್ಯರ ಪರಿಚಯ ಮಾಡಿಸಿ ಹೊರಡುವನು.

ನೋಡಿ 2010ರಲ್ಲಿ ಮುದ್ರಿತವಾದ ಕಾದಂಬರಿಯಲ್ಲಿ ಕ್ವಾರಂಟೈನ್ ಉಲ್ಲೇಖಿಸಿರುವುದು ಖುಷಿಯ ಸಂಗತಿ ಆದರೆ ದುರಾದೃಷ್ಟ ನಮ್ಮ ಸರ್ಕಾರಗಳು economy ಅನ್ನುವ ಪದದ ಹಿಂದೆ ಬಿದ್ದು ಎಲ್ಲ ಪ್ರಜೆಗಳನ್ನು ಭಯದ ಕಡೆಗೆ ನುಗ್ಗಿಸುತ್ತಿರುವುದು ನೋಡಿ ತುಂಬಾ ಬೇಜಾರಾಯಿತು. ಅಷ್ಟಕು WHO ಹೇಳುವ ಪ್ರಕಾರ ಕೊರೊನಾ ವೈರಸ್ ನಿಯಂತ್ರಿಸಲು ತ್ವರಿತಗತಿಯಲ್ಲಿ ಲಾಕಡೌನ್,ಕ್ವಾರಂಟೈನ್, ಟೆಸ್ಟಿಂಗ್ ಮತ್ತು ಟ್ರಾಕ್ಕಿಂಗ್ ಮಾಡುಬೇಕು ಅಂತೇ... ಆದರೆ ನಮ್ಮಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಅಂತೇ ದೇವರಿಗೆ ಗೊತ್ತು. Economy develop ಮಾಡಲು ಸಾರಾಯಿ ಶುರುಮಾಡಿದವರು ಕ್ವಾರಂಟೈನ್/ಟ್ರಾಕ್ಕಿಂಗ್/ಟೆಸ್ಟಿಂಗ್ ಬಗ್ಗೆ ಚಿಂತಿಸುವ ಪ್ರಮೇಯ ಎಲ್ಲಿ ನೀವೇ ಹೇಳಿ.

ಹೋಗ್ಲಿ ಬಿಡಿ!, ನಂಗೆ ನಿಜವಾಗ್ಲೂ ಕ್ವಾರಂಟೈನ್ ಪದದ ಅರ್ಥ ಗೊತ್ತಾಗಿದ್ದು ನಮ್ಮ ಹಳೆಯ ಕಂಪನಿಯಲ್ಲಿ. ಏನಾದ್ರು issues ಬಂದರೆ ಟೆಸ್ಟಿಂಗ್ ಅಲ್ಲಿ ಇರುವ ಡಿವೈಸಗಳನ್ನು HOLD ಮಾಡಿ, live debug ಮಾಡಲು ಈ ಪದವನ್ನು ಉಪಯೋಗಿಸುತ್ತಿದ್ದರು. ಕ್ವಾರಂಟೈನ್ ಸಮಯದಲ್ಲಿ ಆ ಡಿವೈಸ್ ಬೇರೆ ಯಾವ ಟೆಸ್ಟ್ ನು ಮಾಡದೆ ತಟಸ್ಥವಾಗಿ ಇರುವುದು. Developers ಬೇಕಾದ ಎಲ್ಲ ಮಾಹಿತಿಯನ್ನು ಪಡೆದು ರಿಕ್ಲೈಮ್ ಮಾಡುವರು. 

ಒಂದೊಂದು ಕಡೆ ಒಂದೊಂದು ರೂಪದಲ್ಲಿ ಪ್ರತ್ಯೇಕ್ಷವಾಗುವ ಕ್ವಾರಂಟೈನ್ ಪದ ಜಗತ್ತಿನಲ್ಲಿ ಇಂದು ಸೂರ್ಯ ಮುಣುಗದ ರೀತಿಯಲ್ಲಿ ಉಪಯೋಗವಾಗುತ್ತಿದೆ. ನೀವು ಯಾವತ್ತಾದರೂ ಈ ಪದವನ್ನು ಉಪಯೋಗಿಸಿದ್ದರೆ ಕಮೆಂಟ್ ಅಲ್ಲಿ ತಿಳಿಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍