ಅಪರೂಪದ ಅಜ್ಜಿ

                   
                   ಅಪರೂಪದ ಅಜ್ಜಿ

               (Downloaded👆photo from Google)



ಈ ಕ್ವಾರಂಟೈನ್, ಕೊರೊನಾ, ಪಿಸಿಕಲ್ ಡಿಸ್ಟನ್ಸಿಂಗ್ ಎಷ್ಟು ಪಾಠಗಳನ್ನು ಮಾನವಿನಿಗೆ ಕಲಿಸುತ್ತೆ ಅಂದ್ರೆ, ಕನ್ನಡದಲ್ಲಿ ಚಾಟ್ ಮಾಡಲು ಹಿಂಜರಿಯುವರು ಇವತ್ತು "Hi" ಅಂದ್ರೆ ಸಾಕು ಪುಟಗಟ್ಟಲೆ ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ. ಒಂದು ಉತ್ತಮ ಬೆಳವಣಿಗೆ.

2008ರ ಸುಮಾರಿಗೆ ನಮ್ಮ ಅಜ್ಜಿ ತೀರಿಹೋದರು, ಆಗಿನ್ನೂ ನಾನು ಸ್ವಲ್ಪ ಚಿಕ್ಕ ಹುಡುಗ. ಮಾನವೀಯ ವ್ಯಾಲ್ಯೂಗಿಂತ ಕ್ರಿಕೆಟ್, ಕಾಡುಗಿಡು ಸುತ್ತುವುದು, ಈಜುವುದು ಹೀಗೆ ಆಟ ಪಾಠದಲ್ಲೇ ಬ್ಯುಸಿ ಇರ್ತೀದ್ದ್ವಿ. ಅಂದು ನಾನು ಕಾಲೇಜ್ ಹೋಗಿ ಎಕ್ಸಾಮ್ ಫೀಸ್ ತುಂಬಿ ಬರುವಷ್ಟರಲ್ಲಿ ನಮ್ಮ ಅಜ್ಜಿ ತೀರಿವೊಗಿದ್ದರು ಮತ್ತು ನಾನು ಬರುವುದು ಲೇಟ್ ಆದ ಕಾರಣ ಅಂತ್ಯಸಂಸ್ಕಾರ ಕಾರ್ಯಕ್ರಮ ಮುಗಿದುಹೋಗಿತ್ತು. ಹಾಗಿನ್ನೂ ನನ್ನಲ್ಲಿ ಮೊಬೈಲ್ ಇರ್ಲಿಲ್ಲ, ನಂಗೆ ಕೊನೆಯ ಬಾರಿಗೆ ಅವರನ್ನು ನೋಡುವ ಅದೃಷ್ಟವೂ ಸಿಗಲಿಲ್ಲ. 

ಮೊನ್ನೆ ನಮ್ಮ ಅಪಾರ್ಟ್ಮೆಂಟ್ ಮೇಲೆ ವಾಲ್ಕ್ ಮಾಡುತ್ತಿರುವಾಗ ಒಬ್ಬ ಗೆಳೆಯ ಸಿಕ್ಕ, ನಿಜವೇಳಬೇಕಂದ್ರೆ ಅವನು ನಮ್ಮ ಬಿಲ್ಡಿಂಗ್ ಓನರ್ ಮಗ. ಬಿಲ್ಡಿಂಗ್ ಮೇಲೆ ಪಾರಿವಾಳದ ಮನೆ ಮಾಡಿ ನೂರಾರು ಪಾರಿವಾಳಗಳನ್ನು ಸಾಕುತ್ತಿದ್ದಾನೆ. ಹಾಗೆ ಮಾತನಾಡುತ್ತಾ, ಕೆಳಗಡೆ ಒಂದು ಮನೆಯ ಅಜ್ಜಿ ಬಗ್ಗೆ ಮಾಹಿತಿ ತಿಳಿಸಿದ, ಅದು ವಿಚಿತ್ರ ಅನಿಸಬಹುದು ಆದರೆ ಸತ್ಯ ಅಂತೇ ಇವತ್ತೇ ಗೊತ್ತಾಗಿದ್ದು.

ಕೆಳಗೆ ಕಾಣುತ್ತಲ್ಲ ಅದು ನಮ್ಮ ಮನೆ ಆ ಮನೆಲ್ಲಿ ಒಬ್ಬ ಅಜ್ಜಿ ಇದ್ದಾರೆ, ಅವರು ಸಿಕ್ಕಾಪಟ್ಟೆ ಅಡುಗೆ ಮಾಡ್ತಾರೆ, ಅಂತೇ ಹೇಳಿದ. ಏನಿದು ವಿಚಿತ್ರ! ಅಜ್ಜಿ ಸಿಕ್ಕಾಪಟ್ಟೆ ಅಡುಗೆನಾ? ಅವರದೇನು ಹೋಟೆಲ್ ಇದೇನಾ? ಒಬ್ಬರೇ ಇದ್ದಾರೆ ಅಂತೀರಾ, ಅವರೇಗೆ ಆ ಹೋಟೆಲ್ ಮೆಂಟೇನ್ ಮಾಡ್ತಾರೆ? ಅಷ್ಟಕ್ಕೂ ಆ ಅಜ್ಜಿ ಏಕೆ ಈ ವಯಸ್ಸಲ್ಲಿ ಇಷ್ಟು ಕಷ್ಟ ಪಡಬೇಕು? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದೆ. ಅಷ್ಟರಲ್ಲಿ ಅವನು " ಹೋಟೆಲಾ? ಅವರೇಕೆ ಹೋಟೆಲ್ ಮಾಡ್ತಾರೆ ಅದು ಅವರ ಮಕ್ಕಳಿಗೆ ಕಳಿಸೋದು, ಕೆಲವು ಬಾರಿ ಅವರೆಲ್ಲ ಇಲ್ಲಿಗೆ ಬರ್ತಾರೆ, ಸಿಕ್ಕಾಪಟ್ಟೆ ಅಡುಗೆ ಇವ್ರೆ ನಿಂತು ಮಾಡೋದು. ಅವರೆಲ್ಲ ಊಟ ಮಾಡಿ ಸ್ವಲ್ಪ ಸಮಯ ಇಲ್ಲೇ ಕಳೆದು ವಾಪಸ್ ಹೋಗ್ತಾರೆ. ಸಿಟಿ ಓಳಗೆ ಅವರೆಲ್ಲರಿಗೂ ಸ್ವಂತ ಮನೆಯಿದೆ ಆದರೂ ಅಜ್ಜಿ ಇಲ್ಲೇ ಇರೋದು" ಅಂತೇ ಅಂತೇ ಹೇಳಿದ. ನನಗೆ ಆಶ್ಚರ್ಯವಾಯಿತು, ಅಷ್ಟು ಶ್ರೀಮಂತರಿದ್ದಾರೆ ಅಜ್ಜಿ ಯಾಕೆ ನಿಮ್ಮ ಮನೆಯಲ್ಲಿ ಬಾಡಿಗೆ ಇರೋದು? ಅಂತೇ ಮತ್ತೆ ಪ್ರಶ್ನಿಸಿದೆ. ಏನೋ ಗೋತ್ತೋಲ್ಲ ಮನೆಯಲ್ಲಿ ಪ್ರಾಬ್ಲಮ್ ಇರಬಹುದು!, ಬರುತ್ತಿನಿ ಅಂತೇ ಹೇಳಿದ್ರು ಮನೆ ಹೆಂಗೂ ಖಾಲಿ ಇತ್ತು, ಬಾ ಅಂತೇ ಹೇಳಿದ್ವಿ ಅಂತೇ ಹೇಳಿ ಪಾರಿವಾಳಗಳನ್ನು ನೋಡಲು ಮತ್ತೆ ಒಳಗೆ ಹೋದ. 

ತೊಂದರೆಗಳು ನೂರಾರು ಇರಬಹುದು! ಆ ಅಜ್ಜಿ ತನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲರಿಂದ ದೂರವಿದ್ದರು ಅವರೆಲ್ಲರ ಸಂತೋಷ್ ಬಯಸುವುದು, ಅವರೆಲ್ಲರ ಜೊತೆ ಅನ್ಯೋನ್ಯವಾಗಿರುವುದು, ಅವ್ರಿಗೆ ಇಲ್ಲಿಂದ ಅಡುಗೆ ಮಾಡಿ ಕಳಿಸುವುದು, ಅವರನ್ನು ನೋಡಲು ಎಲ್ಲರೂ ಬರುವುದು ನೋಡಿದ್ರೆ ವಿಚಿತ್ರ ಅನಿಸುತ್ತೆ. ಸ್ವಲ್ಪ ಜೋರು ಮಾತಾಡಿದ್ರೆ ಸಾಕು ಸಹವಾಸ ಬೇಡವೆಂದು ದೂರಾಗುವ ಈಗಿನ ಕಾಲದಲ್ಲಿ ಮಕ್ಕಳಿಂದ ದೂರವಿದ್ದರು ದೂರದಿಂದಲೇ ಹತ್ತಿರವಾಗುತ್ತಿರುವ ಅಜ್ಜಿಯನ್ನು ನೋಡಿ ಅಪರೂಪವನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍