ಅಪರೂಪದ ಅಜ್ಜಿ
ಅಪರೂಪದ ಅಜ್ಜಿ (Downloaded👆photo from Google) ಈ ಕ್ವಾರಂಟೈನ್, ಕೊರೊನಾ, ಪಿಸಿಕಲ್ ಡಿಸ್ಟನ್ಸಿಂಗ್ ಎಷ್ಟು ಪಾಠಗಳನ್ನು ಮಾನವಿನಿಗೆ ಕಲಿಸುತ್ತೆ ಅಂದ್ರೆ, ಕನ್ನಡದಲ್ಲಿ ಚಾಟ್ ಮಾಡಲು ಹಿಂಜರಿಯುವರು ಇವತ್ತು "Hi" ಅಂದ್ರೆ ಸಾಕು ಪುಟಗಟ್ಟಲೆ ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ. ಒಂದು ಉತ್ತಮ ಬೆಳವಣಿಗೆ. 2008ರ ಸುಮಾರಿಗೆ ನಮ್ಮ ಅಜ್ಜಿ ತೀರಿಹೋದರು, ಆಗಿನ್ನೂ ನಾನು ಸ್ವಲ್ಪ ಚಿಕ್ಕ ಹುಡುಗ. ಮಾನವೀಯ ವ್ಯಾಲ್ಯೂಗಿಂತ ಕ್ರಿಕೆಟ್, ಕಾಡುಗಿಡು ಸುತ್ತುವುದು, ಈಜುವುದು ಹೀಗೆ ಆಟ ಪಾಠದಲ್ಲೇ ಬ್ಯುಸಿ ಇರ್ತೀದ್ದ್ವಿ. ಅಂದು ನಾನು ಕಾಲೇಜ್ ಹೋಗಿ ಎಕ್ಸಾಮ್ ಫೀಸ್ ತುಂಬಿ ಬರುವಷ್ಟರಲ್ಲಿ ನಮ್ಮ ಅಜ್ಜಿ ತೀರಿವೊಗಿದ್ದರು ಮತ್ತು ನಾನು ಬರುವುದು ಲೇಟ್ ಆದ ಕಾರಣ ಅಂತ್ಯಸಂಸ್ಕಾರ ಕಾರ್ಯಕ್ರಮ ಮುಗಿದುಹೋಗಿತ್ತು. ಹಾಗಿನ್ನೂ ನನ್ನಲ್ಲಿ ಮೊಬೈಲ್ ಇರ್ಲಿಲ್ಲ, ನಂಗೆ ಕೊನೆಯ ಬಾರಿಗೆ ಅವರನ್ನು ನೋಡುವ ಅದೃಷ್ಟವೂ ಸಿಗಲಿಲ್ಲ. ಮೊನ್ನೆ ನಮ್ಮ ಅಪಾರ್ಟ್ಮೆಂಟ್ ಮೇಲೆ ವಾಲ್ಕ್ ಮಾಡುತ್ತಿರುವಾಗ ಒಬ್ಬ ಗೆಳೆಯ ಸಿಕ್ಕ, ನಿಜವೇಳಬೇಕಂದ್ರೆ ಅವನು ನಮ್ಮ ಬಿಲ್ಡಿಂಗ್ ಓನರ್ ಮಗ. ಬಿಲ್ಡಿಂಗ್ ಮೇಲೆ ಪಾರಿವಾಳದ ಮನೆ ...