ಕೊರೊನಾಗೆ ತಂತ್ರಜ್ಞಾನದ ಮಂತ್ರ
-:ಕೊರೊನಾಗೆ ತಂತ್ರಜ್ಞಾನದ ಮಂತ್ರ:-
COVID-19, ಭಾರತಕ್ಕೆ ಇದು COVID-20 ಅಂದ್ರೆ ತಪ್ಪಾಗಲಾರದು!, ಯಾಕಂದ್ರೆ ಕೊರೊನಾ ಸೋಂಕು 2019ರಲ್ಲಿ ಚೀನಾ ದೇಶದಿಂದ ಹರಡಿದರು, ಭಾರತಕ್ಕೆ ಕಾಲಿಟ್ಟಿದ್ದು 2020ರಲ್ಲಿ ಅನಿಸುತ್ತೆ(ನನಗೂ ಸರಿಯಾದ ಮಾಹಿತಿಯಿಲ್ಲ). ಸುಮಾರು 160+ ರಾಷ್ಟ್ರಗಳಲ್ಲಿನ ಜನರ ಜೀವನ ಅಸ್ತವ್ಯಸ್ತ ಆಗಿರುವುದು ಒಂದು ದುರದೃಷ್ಟಕರ ವಿಷಯ.
ಊರಿಗೆ ಬೆಂಕಿ ಬಿದ್ದಾಗ ಭಾವಿ ತೊಡುವ ಹಾಗೆ ಇವಾಗ ನಮ್ಮ ಸರ್ಕಾರಗಳು ಕೆಲವೊಂದು ನಿರ್ದಾರಗಳನ್ನು ತೊಗೊಳ್ಳುತ್ತಿದ್ದಾರೆ ಆದರೆ ನಾನು ಇಲ್ಲಿ ಯಾವುದೇ ಸರ್ಕಾರದ ಅಥವಾ ಯಾವುದೇ ರಾಜಕೀಯ ಪಕ್ಷದ ಬಗ್ಗೆ ಬರಿಯುವದಕ್ಕಿಂತ ಕೊರೊನಾ ವೈರಸ್ ತಡೆಗಟ್ಟಲು ನಮ್ಮ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತಿದೆ, ತಂತ್ರಜ್ಞಾನದ ಮೂಲಕ ಹೇಗೆ ನಾವು ಕೊರೊನಾ ವೈರಸ್ ಯಿಂದ ದೂರವಾಗಬಹುದು ಅನ್ನೋದನ್ನು ಸ್ವಲ್ಪ ಸಂಕ್ಷಿಪ್ತವಾಗಿ ವಿವರಿಸಲು ಇಷ್ಟಪಡುತ್ತೇನೆ.
ಸಾಮಾನ್ಯವಾಗಿ ಕೊರೊನಾ ಸೋಂಕು ಹರಡುವುದು 'ಸೋಂಕಿತ ವ್ಯಕ್ತಿಯು ಯಾವುದೇ ಮಾಸ್ಕ್ ದರಿಸದೇ ಕೆಮ್ಮುವುದು ಮತ್ತು ಸೀನುವುದು ಮಾಡುವಾಗ ಆ ಸೋಂಕು ಪಕ್ಕದಲ್ಲಿರುವ ವಸ್ತುವಿನ ಮೇಲೋ ಅಥವಾ ಪಕ್ಕದಲ್ಲಿ ಯಾರಾದ್ರೂ ವ್ಯಕ್ತಿಗಳಿದ್ದರೆ ಅವರಲ್ಲಿ ಸೇರುವ ಸಾಧ್ಯತೆಗಳಿವೆ, ವ್ಯದ್ಯರು ಹೇಳುವ ಪ್ರಕಾರ ಸೋಂಕು ಒಂದು ವಸ್ತುವಿನ ಮೇಲೆ ಸುಮಾರು ~8 ರಿಂದ ~12 ಘಂಟೆಗಳ ಕಾಲ ಬದುಕುತ್ತಂತೆ. ಆ ಸಮಯದಲ್ಲಿ ಆ ವಸ್ತುವನ್ನು ನಾವು ಮುಟ್ಟಿದರೆ ನಮ್ಮ ದೇಹದಲ್ಲಿ ಸೇರಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಇಂತ ಸಮಯದಲ್ಲಿ ಹೇಗೆ ನಾವು ಇಂತ ಸನ್ನಿವೇಶವನ್ನು ಅವೈಡ್ ಮಾಡಬೇಕು? ಆಸ್ಪತ್ರೆಯಲ್ಲಿ ಇಕ್ಯೂಫ್ಮೆಂಟಗಳಿಂದ ಸೋಂಕಿತ ವ್ಯಕ್ತಿಯನ್ನು ಹೇಗೆ ಸ್ಪರ್ಶಿಸಬೇಕು? ಮನೆಯಲ್ಲಿ ಡೋರ ಓಪನ್/ಕ್ಲೋಸ್ ಮಾಡುವುದು ಹೇಗೆ? ನಲ್ಲಿಯನ್ನು ಆನ್ ಮಾಡುವುದು ಹೀಗೆ ಹಲವಾರು ಪ್ರಶ್ನೆಗಳಿಗೆ ಒಂದೇ ಉತ್ತರ ತಂತ್ರಜ್ಞಾನ.
ಹೌದು ನಮ್ಮ ತಂತ್ರಜ್ಞಾನ ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ತುಂಬಾ ಸಹಾಯ ಮಾಡುತ್ತಿದೆ. ಇಂದು "ಸೆನ್ಸಾರ್" ತಂತ್ರಜ್ಞಾನ ಎಷ್ಟು ಮುಂದಿದೆ ಅಂದ್ರೆ, ನಿಮ್ಮ ದೇಹವನ್ನು ಮುಟ್ಟದೆ ನಿಮ್ಮ ಟೆಂಪರೆಚರ ನಿಖರವಾಗಿ ತಿಳುಸುತ್ತೆ, ನೀವು ನಿಮ್ಮ ಆಫೀಸ್, ದೇವಸ್ಥಾನ/ಚರ್ಚ್/ಮಸೀದಿಗಳ ಡೊರ ತಳ್ಳಿ ಒಪೆನ್ ಮಾಡುವ ಅವಶ್ಯಕತೆಗಳಿಲ್ಲ, ನಲ್ಲಿಯನ್ನು ತಿರುವ ಹಾಗೆ ಇಲ್ಲ, ಎಲ್ಲವೂ ಸೆನ್ಸಾರ್ ಅನ್ನುವ ತಂತ್ರಜ್ಞಾನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.
ಸೆನ್ಸಾರ್, ಆರ್ಟಿಫಿಸಿಯಲ್ ಇಂಟೀಲಿಜಂಟ, ಐಓಟಿ, ಸೆಮಿಕಂಡಕ್ಟರ್/ಎಲೆಕ್ಟ್ರಾನಿಕ್, ಸಾಫ್ಟ್ವೇರ್ ಮೇಕಾನಿಕಲ್ ಇಂಜಿನಿಯರಗಳಿಗೆ ಒಂದು ದೊಡ್ಡ ನಮಸ್ಕಾರ ಮಾಡುತ್ತಾ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಗೆಳೆಯರೇ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ