ಮಂಗನ ಮದುವೆ!
ಮಂಗನ ಮದುವೆ!
ವಿಧಾನಸಭಾ ಅಧಿವೇಶನ ಇನ್ನು ಕೆಲವೇ ದಿನಗಳಲ್ಲಿ ಶುರುವಾಗುತ್ತಿದ್ದಂಗೆ ನಮ್ಮ ದೇಶದ ರಾಜಕೀಯ ನಾಯಕರಲ್ಲಿ ಒಂದು ಸಂಚಲನ ಹುಟ್ಟುತ್ತದೆ, ಮಾಡಿದ ಪಾಪಗಳು ಅವರಿಂದನೆ ಹೊರಗಡೆ ಬರುತ್ತೆ ಅಂತೇ ಭಯದಿಂದನೋ ಅಥವಾ ಅಭಿವೃದ್ಧಿ ಬಗ್ಗೆ ಮಾತನಾಡಲು ಮಾತುಗಳೇ ಬರುವದಿಲ್ಲವೇನೋ ಗೊತ್ತಿಲ್ಲ, ಮಂಗನ ಮದುವೆಯಲ್ಲಿ ಉಂಡವನೆ ಜಾಣ ಅನ್ನೋಹಾಗೇ ಜನಗಳ ಮನಸನ್ನು, ವಿಚಾರಗಳನ್ನು, ಪ್ರಶ್ನೆಗಳನ್ನು ಬೇರೆಕಡೆಗೆ ವಾಲಿಸಿ ತಮಾಸೆ ನೋಡುವ ನಮ್ಮ ರಾಜಕೀಯ ನಾಯಕರುಗಳಿಗೆ ಸಮಾಜದ ಸರ್ವಾಂಗೀಣ ಬೆಳವಣಿಗೆಗಿಂತ ತಮ್ಮ ಜೇಬನ್ನು ತುಂಬಿಸಿ ಕೊಳ್ಳುವುದರಲ್ಲಿ ಮಾಡುವ ನಾಟಕ ಒಂದಲ್ಲ ನೂರಾರು.
ಇದರಲ್ಲಿ ಆಡಳಿತ ಪಕ್ಷ ವಿರೋಧಿ ಪಕ್ಷ ಅಂತೇ ಏನು ಇಲ್ಲ, ಎಲ್ಲ ಪಕ್ಷಗಳು ಸೇರಿ ತಮಗೆ ಬೇಕಾದ ಹಾಗೆ ಬೇಹಿಸಿಕೊಳ್ಳುತ್ತಾರೆ, ಉದಾಹರಣೆಗೆ ಇವಾಗ ನಡಿಯುತ್ತಿರುವ ಕರ್ನಾಟಕ ರಾಜ್ಯದ ವಿಧಾನಸಭಾ ಕಲಾಪವೇ ಕಾರಣ.
ಕಲಾಪಕ್ಕೆ ಪತ್ರಿಕೆ/ಟಿವಿ ಚಾನೆಲ್ ಗಳ ನಿರ್ಬಂಧನೆ (ಖಾಸಗಿ) ಒಂದು ಕಾಕತಾಳೀಯ ಬೆಳವಣಿಗೆ ಅಂದರೆ ತಪ್ಪಾಗಲಾರದು, ಅಧಿವೇಶನದಲ್ಲಿ ನಡೆಯುವ ಚರ್ಚೆ, ವಿಷಯಗಳನ್ನು ಜನರಿಗೆ ತೋರಿಸುವುದರ ಜೊತೆಗೆ ನಮ್ಮ ನಾಯಕರು ಮಾಡುವ ತಪ್ಪುಗಳನ್ನು, ನೋಡುವ ಸರಸ ಸಲ್ಲಾಪಗಳನ್ನು, ಸಮಯ ವ್ಯರ್ಥ, ಜಗಳ ಮತ್ತು ಇತರ ಎಲ್ಲಾ ರೀತಿಯ ಮಾಹಿತಿಗಳ ಸಮೇತ ಖುಲ್ಲಂಖುಶವಾಗಿ ತೋರಿಸುವದನ್ನು ನಮ್ಮ ನಾಯಕರುಗಳಿಗೆ ತಡೆದುಕೊಳ್ಳಲು ಹಾಗಲಿಲ್ಲವೇನೋ ಅನಿಸುತ್ತೆ. ತಮ್ಮ ಸದಸ್ಯರಿಗೆ ನೀತಿ ಪಾಠ ಮಾಡುವುದು ಬಿಟ್ಟು, ಈ ರೀತಿಯ ನಿರ್ಬಂಧ ಹೇರುವುದು ಒಂದು ಪತ್ರಿಕೋದ್ಯಮಕ್ಕೆ ಒಂದು ಅಪಮಾನ ಮತ್ತು ನಮ್ಮ ದೇಶದ ದುರಂತ ಅಂದರೆ ತಪ್ಪಾಗಲಾರದು.
ಇನ್ನು ಏನೋ ಒಂದು ಕಲಾಪ ಮಾಡಬೇಕಲ್ಲ! ಅಭಿವೃದ್ಧಿ, ಒಳ್ಳೆಯ ಆಡಳಿತದ ಬಗ್ಗೆ ಹೇಗೆ ಮಾತನಾಡುವುದು? ತಮ್ಮ ತಮ್ಮ ಪಾಪವನ್ನು ಮುಚ್ಚಿಕೊಳ್ಳಲು ತಾವೇ ಒಂದು ಕಾಂಟರ್ವರ್ಶಿ ಸೃಷ್ಟಿಸಿ ಕಲಾಪವನ್ನು ಹಾಳುಮಾಡುವದನ್ನು ಕಣ್ಣಾರೆ ನೋಡಿ ಏನು ಮಾಡಲಾಗದೆ ಕೈಕಟ್ಟಿ ಕುಳಿತು ಕೊಳ್ಳುವಂತಾ ಪರಿಸ್ಥಿತಿ ಉಂಟಾಗಿದೆ. ಕಲಾಪದ ಸಮಯದಲ್ಲೇ ಯಾವುದೋ CD ಬಿಡುಗಡೆ ಮಾಡುವುದು, ಸ್ವಾತಂತ್ರ್ಯ ಹೋರಾಟಗಾರನು ಹೀನಾಯವಾಗಿ ಬೈಯುವುದು, ಮುಗ್ದ ರೈತರನ್ನು ರೋಚ್ಚಿಗೆಳಿಸುವುದು, ಭಾಷೆ ಸಂಸ್ಕೃತಿಯನ್ನು ಹಿಯಾಳಿಸಿ ಜನರಲ್ಲಿ ದ್ವೇಷವನ್ನು ಹುಟ್ಟಿಸುವುದು, ಧರ್ಮ/ಜಾತಿಗಳ ಮದ್ಯೆ ಜಗಳ ಹಚ್ಚುವುದು ಮತ್ತು ಮುಂತಾದ ಅನ್ನ್ವಾಂಟೆಡ್ ಸೃಷ್ಟಿಸಿ ಎಲ್ಲವನ್ನು ಮರೆಮಾಚುವುದು ಸರ್ವೇ ಸಾಮಾನ್ಯವಾಗಿದೆ.
ಇನ್ನು ಶೋಚನೀಯ ಸಂಗತಿ ಅಂದರೆ, ಸಂವಿಧಾನವನ್ನು/ಸ್ವಾತಂತ್ರ್ಯ ಹೋರಾಟಗಾರನ್ನು ಬೈದವನೆ ಮತ್ತೆ ಸಂವಿಧಾನದ ಬಗ್ಗೆ ಮಾತನಾಡುವುದು.
ಮೈತುಂಬಾ ಅರಣ್ಯ ನಾಶ ಮಾಡುವ ಕೇಸುಗಳು ಇದ್ದವರೆ ಅರಣ್ಯ ಸಚಿವರು, ಈರುಳ್ಳಿಯಂತ ದಿನ ಪದಾರ್ಥಗಳ ಬಗ್ಗೆ ಸಾಮಾನ್ಯ ಪರಿಕಲ್ಪನೆ ಇಲ್ಲದವರು ಹಣಕಾಸು ಮಂತ್ರಿ, ಶಾಲೆಗೆ ಹೋಗದಿರುವವರು ಶಿಕ್ಷಣ ಮಂತ್ರಿ, ಕ್ರಿಮಿನಲ್ ಕೇಸ್ ಇರುವವರು ಹೋಮ್ ಮಿನಿಸ್ಟರ್ ಹೀಗೆ ನಾನಾ ಬಗೆಯ ಆಟಗಳಿಗೆ ಅಂತ್ಯ ಯಾವಾಗ ಅನ್ನುವದಕ್ಕೆ ಉತ್ತರವೇ ಇಲ್ಲ.
ಇನ್ನು ಉತ್ತಮ ಅಧಿಕಾರಿಗಳ ವರ್ಗಾವಣೆ, ತಮ್ಮ ಹಕ್ಕಿಗಾಗಿ ಹೋರಾಡುವ ಜಾಗವನ್ನು ನಿಷೇಶಿಸುವುದು, ಕೆಟ್ಟ ಭಾಷಣಕ್ಕೆ ಪ್ರೋತ್ಸಾಹಿಸುವ, ದೇಶದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ದ್ವೇಷ, ಅಸೂಹೆ ಇವೆಲ್ಲವನ್ನು ಬಿಟ್ಟು ಬರಿ iii(Improvement, Innovation, Implement) ಜೊತೆಗೆ RRR (Research, Resolve(Issues), Resolution) ಕಡೆ ಗಮನ ಹರಿಸಬೇಕು ಅನ್ನುವುದು ನಮ್ಮೆಲ್ಲರ ಕಳಕಳಿ
ಇದು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಲ್ಲ ನಮ್ಮ ದೇಶದ/ಸಮಾಜದ ಹಿತದೃಷ್ಟಿಯಿಂದ, ಸರ್ವರೂ ಗೌರವಿಸುವ ನಮ್ಮ ಕಲಾಪವನ್ನು ಸರಿಯಾಗಿ ಉಪಯೋಗಿಸಿ ಅನ್ನುವುದೇ ನಮ್ಮ ಬಯಕೆ. ಏನಾದ್ರು ತಪ್ಪುಗಳಿದ್ದರೆ ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸುವುದನ್ನು ಮರೆಯಬೇಡಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ