ಪೋಸ್ಟ್‌ಗಳು

ಮಾರ್ಚ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೊರೊನಾಗೆ ತಂತ್ರಜ್ಞಾನದ ಮಂತ್ರ

ಇಮೇಜ್
-:ಕೊರೊನಾಗೆ ತಂತ್ರಜ್ಞಾನದ ಮಂತ್ರ:- COVID-19, ಭಾರತಕ್ಕೆ ಇದು COVID-20 ಅಂದ್ರೆ ತಪ್ಪಾಗಲಾರದು!, ಯಾಕಂದ್ರೆ ಕೊರೊನಾ ಸೋಂಕು 2019ರಲ್ಲಿ ಚೀನಾ ದೇಶದಿಂದ ಹರಡಿದರು, ಭಾರತಕ್ಕೆ ಕಾಲಿಟ್ಟಿದ್ದು 2020ರಲ್ಲಿ ಅನಿಸುತ್ತೆ(ನನಗೂ ಸರಿಯಾದ ಮಾಹಿತಿಯಿಲ್ಲ). ಸುಮಾರು 160+ ರಾಷ್ಟ್ರಗಳಲ್ಲಿನ ಜನರ ಜೀವನ ಅಸ್ತವ್ಯಸ್ತ ಆಗಿರುವುದು ಒಂದು ದುರದೃಷ್ಟಕರ ವಿಷಯ.       ಊರಿಗೆ ಬೆಂಕಿ ಬಿದ್ದಾಗ ಭಾವಿ ತೊಡುವ ಹಾಗೆ ಇವಾಗ ನಮ್ಮ ಸರ್ಕಾರಗಳು ಕೆಲವೊಂದು ನಿರ್ದಾರಗಳನ್ನು ತೊಗೊಳ್ಳುತ್ತಿದ್ದಾರೆ ಆದರೆ ನಾನು ಇಲ್ಲಿ ಯಾವುದೇ ಸರ್ಕಾರದ ಅಥವಾ ಯಾವುದೇ ರಾಜಕೀಯ ಪಕ್ಷದ ಬಗ್ಗೆ ಬರಿಯುವದಕ್ಕಿಂತ ಕೊರೊನಾ ವೈರಸ್ ತಡೆಗಟ್ಟಲು ನಮ್ಮ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತಿದೆ, ತಂತ್ರಜ್ಞಾನದ ಮೂಲಕ ಹೇಗೆ ನಾವು ಕೊರೊನಾ ವೈರಸ್ ಯಿಂದ ದೂರವಾಗಬಹುದು ಅನ್ನೋದನ್ನು ಸ್ವಲ್ಪ ಸಂಕ್ಷಿಪ್ತವಾಗಿ ವಿವರಿಸಲು ಇಷ್ಟಪಡುತ್ತೇನೆ. ಸಾಮಾನ್ಯವಾಗಿ ಕೊರೊನಾ ಸೋಂಕು ಹರಡುವುದು 'ಸೋಂಕಿತ ವ್ಯಕ್ತಿಯು  ಯಾವುದೇ ಮಾಸ್ಕ್ ದರಿಸದೇ ಕೆಮ್ಮುವುದು ಮತ್ತು ಸೀನುವುದು ಮಾಡುವಾಗ ಆ ಸೋಂಕು ಪಕ್ಕದಲ್ಲಿರುವ ವಸ್ತುವಿನ ಮೇಲೋ ಅಥವಾ ಪಕ್ಕದಲ್ಲಿ ಯಾರಾದ್ರೂ ವ್ಯಕ್ತಿಗಳಿದ್ದರೆ ಅವರಲ್ಲಿ ಸೇರುವ ಸಾಧ್ಯತೆಗಳಿವೆ, ವ್ಯದ್ಯರು ಹೇಳುವ ಪ್ರಕಾರ ಸೋಂಕು ಒಂದು ವಸ್ತುವಿನ ಮೇಲೆ ಸುಮಾರು ~8 ರಿಂದ ~12 ಘಂಟೆಗಳ ಕಾಲ ಬದುಕುತ್ತಂತೆ. ಆ ಸಮಯದಲ್ಲಿ ಆ ವ...

ಮಂಗನ ಮದುವೆ!

ಇಮೇಜ್
ಮಂಗನ ಮದುವೆ! ವಿಧಾನಸಭಾ ಅಧಿವೇಶನ ಇನ್ನು ಕೆಲವೇ ದಿನಗಳಲ್ಲಿ ಶುರುವಾಗುತ್ತಿದ್ದಂಗೆ ನಮ್ಮ ದೇಶದ ರಾಜಕೀಯ ನಾಯಕರಲ್ಲಿ ಒಂದು ಸಂಚಲನ ಹುಟ್ಟುತ್ತದೆ, ಮಾಡಿದ ಪಾಪಗಳು ಅವರಿಂದನೆ ಹೊರಗಡೆ ಬರುತ್ತೆ ಅಂತೇ ಭಯದಿಂದನೋ ಅಥವಾ ಅಭಿವೃದ್ಧಿ ಬಗ್ಗೆ ಮಾತನಾಡಲು ಮಾತುಗಳೇ ಬರುವದಿಲ್ಲವೇನೋ ಗೊತ್ತಿಲ್ಲ, ಮಂಗನ ಮದುವೆಯಲ್ಲಿ ಉಂಡವನೆ ಜಾಣ ಅನ್ನೋಹಾಗೇ ಜನಗಳ ಮನಸನ್ನು, ವಿಚಾರಗಳನ್ನು, ಪ್ರಶ್ನೆಗಳನ್ನು ಬೇರೆಕಡೆಗೆ ವಾಲಿಸಿ ತಮಾಸೆ ನೋಡುವ ನಮ್ಮ ರಾಜಕೀಯ ನಾಯಕರುಗಳಿಗೆ ಸಮಾಜದ ಸರ್ವಾಂಗೀಣ ಬೆಳವಣಿಗೆಗಿಂತ ತಮ್ಮ ಜೇಬನ್ನು ತುಂಬಿಸಿ ಕೊಳ್ಳುವುದರಲ್ಲಿ ಮಾಡುವ ನಾಟಕ ಒಂದಲ್ಲ ನೂರಾರು. ಇದರಲ್ಲಿ ಆಡಳಿತ ಪಕ್ಷ ವಿರೋಧಿ ಪಕ್ಷ ಅಂತೇ ಏನು ಇಲ್ಲ, ಎಲ್ಲ ಪಕ್ಷಗಳು ಸೇರಿ ತಮಗೆ ಬೇಕಾದ ಹಾಗೆ ಬೇಹಿಸಿಕೊಳ್ಳುತ್ತಾರೆ, ಉದಾಹರಣೆಗೆ ಇವಾಗ ನಡಿಯುತ್ತಿರುವ ಕರ್ನಾಟಕ ರಾಜ್ಯದ ವಿಧಾನಸಭಾ ಕಲಾಪವೇ ಕಾರಣ. ಕಲಾಪಕ್ಕೆ ಪತ್ರಿಕೆ/ಟಿವಿ ಚಾನೆಲ್ ಗಳ ನಿರ್ಬಂಧನೆ (ಖಾಸಗಿ) ಒಂದು ಕಾಕತಾಳೀಯ ಬೆಳವಣಿಗೆ ಅಂದರೆ ತಪ್ಪಾಗಲಾರದು, ಅಧಿವೇಶನದಲ್ಲಿ ನಡೆಯುವ ಚರ್ಚೆ, ವಿಷಯಗಳನ್ನು ಜನರಿಗೆ ತೋರಿಸುವುದರ ಜೊತೆಗೆ ನಮ್ಮ ನಾಯಕರು ಮಾಡುವ ತಪ್ಪುಗಳನ್ನು, ನೋಡುವ ಸರಸ ಸಲ್ಲಾಪಗಳನ್ನು, ಸಮಯ ವ್ಯರ್ಥ, ಜಗಳ ಮತ್ತು ಇತರ ಎಲ್ಲಾ ರೀತಿಯ ಮಾಹಿತಿಗಳ ಸಮೇತ ಖುಲ್ಲಂಖುಶವಾಗಿ ತೋರಿಸುವದನ್ನು ನಮ್ಮ ನಾಯಕರುಗಳಿಗೆ ತಡೆದುಕೊಳ್ಳಲು ಹಾಗಲಿಲ್ಲವೇನೋ ಅನಿಸುತ್ತೆ. ತಮ್ಮ ಸದಸ್ಯರಿಗೆ ನೀತ...