SHREE MANJUNATHA - SHARANU - ಶರಣು

ಶ್ರೀ ಮಂಜುನಾಥ, ಶಿವನವತಾರ್, ಕುಲಕೋಟಿ
ಭಕ್ತರನ್ನು ಕಾಪಾಡುವ ಶ್ರೀಕಂಠ.....ನಿಗೇ ಒಂದು ಭಕ್ತಿಪೂರಕ ಕವನ 

ಭೂಲೋಕದ ಚಿರ ಒಡೆಯ
ಮಲೆನಾಡಿನ ಮಹಾ ಕುವರ
ಧರ್ಮಸ್ಥಳದಲ್ಲಿ ನೆಲೆಸಿರುವ | ಮಂಜುನಾಥ್ 
ಸ್ವಾಮಿಯೇ, ಕಾದಿರುವೆನು ನಿನಗಾಗಿ
ನಿನ್ನ ದರುಷನವ ಪಡೆಯಲು.. 
ಕಾದಿರುವೆನು ನಿನಗಾಗಿ
ನಿನ್ನ ದರುಷನವ ಪಡೆಯಲು..
        Sharanu ಶರಣು

ಗಿರಿ ಶಿಖರದಿ ನೆಲೆಸಿವನೇ
ವಿಷವನ್ನು ಕುಡಿದವನೇ
ಗಂಗೆಯನ್ನು ಶಿರದಲ್ಲಿಟ್ಟು ಜಗವ ಕಾಯಲೆಂದು 
ಗಂಗೆಯನ್ನು ಶಿರದಲ್ಲಿಟ್ಟು ಜಗವ ಕಾಯಲೆಂದು
ಧರ್ಮಸ್ಥಳ ಕ್ಷೇತ್ರದಲ್ಲಿ ನಿನ್ನ ದರುಷನವ ನೀಡಿರುವೆ
ಕೊಡು ನನಗೂ ಒಂದು ಅವಕಾಶ
ನಿನ್ನ ದರುಷನವ ಪಡೆಯಲು...
        Sharanu ಶರಣು

ಬೇಸಿಗೆಯ ಬಿಸಿಲಲ್ಲಿ ನಿನ್ನ ನೋಡಲು ಬಿಡಲಿಲ್ಲ
ಬೇಸಿಗೆಯ ಬಿಸಿಲಲ್ಲಿ ನಿನ್ನ ನೋಡಲು ಬಿಡಲಿಲ್ಲ
ಮಳೆಗಾಲದಿ ಮಳೆ ಸುರಿದು
ಎಲ್ಲ ದಾರಿಯ ಕೆಡಿಸಿರುವೇ
ನಿನ್ನ ದರುಷನವ ಪಡೆಯಲು, ತುದಿಗಾಲಲ್ಲಿ ನಿಂತಿರುವೆ
ನಿನ್ನ ದರುಷನವ ಪಡೆಯಲು, ತುದಿಗಾಲಲ್ಲಿ ನಿಂತಿರುವೆ
ಕರುಣಿಸು ಸಹಕರಿಸಿ ದರುಷನವ ಕೊಡು
ಶಿವನೇ, ನಿನ್ನ ನೋಡಿದ ಮೇಲೇನೆ
ನನ್ನ ಜೀವನ ಪಾವನವು | ಓಹ್ ಶಿವನೇ
ಕೊಡು ನನಗೂ ಒಂದು ಅವಕಾಶ
ನಿನ್ನ ದರುಷನವ ಪಡೆಯಲು...


                                       Sharanu ಶರಣು                      
                               

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍