Happy Birthday Challenging Star Darshan Sir
ಅಂದು 30/Sep/2011 ದರ್ಶನ ಅವರ ಸಾರಥಿ ಚಿತ್ರ ರಿಲಿಜ್ ಆಗಿತ್ತು, ಆ ಕಡೆ ದರ್ಶನ ಅವ್ರು ಕುಟುಂಬ ಸಮಸ್ಯೆಗಳ ಮದ್ಯ ಬ್ಯುಝಿ ಆಗಿದ್ದರು..
ಅದೇ ಹೊಸದಾಗಿ ಬೆಂಗಳೂರಿಗೆ ಬಂದಿದ್ದ ನಾವು, ತುಂಬಾ ಖುಷಿಯಿಂದ ಮೊದಲ ಷೋ ನೋಡಲೇಬೇಕೆಂದು ತೀರ್ಮಾನಿಸಿದೆವು ಆದರೆ ಕೆಲಸದ ಒತ್ತಡ ಮತ್ತು ದುಡ್ಡಿನ ಅಭಾವದಿಂದ ಮೊದಲ ಷೋ ನೋಡಲು ಹಾಗಲಿಲ್ಲ. ಸಂಡೇ ಬೆಳಿಗ್ಗೆ ಒಬ್ಬ ಗೆಳೆಯನಿಗೆ ಕಾಲ್ ಮಾಡಿ ನರ್ತಕಿ ಥಿಯೇಟರ್ ಅಲ್ಲಿ ಟಿಕೆಟ್ ರೇಟು ಕೇಳಿ, 100 ರೂಪಾಯಿ ಪಾಕೆಟಲ್ಲಿ ಇಟ್ಟಕೊಂಡು ಒಬ್ಬನೇ ಬಿಎಂಟಿಸಿ ಬಸ್ ಹತ್ತಿದೆ.
ದೈತ್ಯ ಪ್ರತಿಭೆ, ಮೇರು ನಟ, ಹಿರಿಯ ಕಲಾವಿದರಾದ ತೂಗುದೀಪ ಶ್ರೀನಿವಾಸ್ ಅವರ ಹೆಸರು ಕೇಳಿದ್ದೆ ಮತ್ತು ಅಲ್ಮೊಸ್ಟ್ ಎಲ್ಲ ಅವರ ಚಿತ್ರಗಳನ್ನು ನೋಡಿದ್ದೆ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಅಂತೇ ನಂಗೆ ಗೊತ್ತಾಗಿದ್ದು ಬೆಂಗಳೂರಿಗೆ ಬಂದ ಮೇಲೆ!, ನಾನು ಮೂಲತಃ ಉತ್ತರ ಕರ್ನಾಟಕದ ಭಾಗದವನಾದರಿಂದ ಸಾಮಾನ್ಯವಾಗಿ ದರ್ಶನ ಸರ್ ದೊಡ್ಡ ಅಭಿಮಾನಿ. ಅವರ ಗಜ ಮೂವಿ ಗುಲ್ಬರ್ಗದಲ್ಲಿ ನೋಡಿದ ನೆನಪು ಇನ್ನು ಕಣ್ಣ ಮುಂದೆ ಬರ್ತಿದೆ. ಆ ನೂಕು ನುಗ್ಗಾಟ, ಗೆಳೆಯರ ಜೊತೆ ಹರಟೆ ಒಂದು ಅದ್ಭುತ ನೆನಪು.
ಸುಮಾರು 1 ಗಂಟೆಯ ನಂತರ ಮೆಜೆಸ್ಟಿಕ್ ತಲುಪಿದೆ, ಅಂಡರ್ ಗ್ರೌಂಡ್ ಮುಖಾಂತರ ನರ್ತಕಿ ಥಿಯೇಟರ್ ಹತ್ತಿರ ಬಂದೆ. ಮೊದಲು ಸಂತೋಷ್ ಥಿಯೇಟರ್ ಸಿಗುತ್ತೆ, ಸ್ವಲ್ಪ ಒಳಗಡೆ ಹೋದರೆ ನರ್ತಕಿ ಥಿಯೇಟರ್ ಇದೆ. ಸಂತೋಷ್ ಥಿಯೇಟರ್ ಅಲ್ಲಿ ಪುನಿತ್ ರಾಜ್ ಕುಮಾರ್ ಸರ್ ಚಿತ್ರವಿತ್ತು, ಮುಂದೆ ನರ್ತಕಿಯಲ್ಲಿ ದರ್ಶನ ಸರ್ ಚಿತ್ರ. ಕೇಳಬೇಕೆ!! ಕನ್ನಡ ಚಿತ್ರರಂಗದ ಟಾಪ್ ನಂತರ ಚಿತ್ರಗಳು ಒಂದೇ ಕಡೆ ಸಿಕ್ಕರೆ ನಮ್ಮ ಕನ್ನಡಿಗರಿಗೆ ಖುಷಿಯೋ ಖುಷಿ. ಆ ಜನಸಂದಣಿಯಲ್ಲಿ ಟಿಕೆಟ್ ತೊಗೊಳೋಣ ಅಂತೇ ಹೋದರೆ, ಟಿಕೆಟ್ ಸೋಲ್ಡ್ ಔಟ್!!! ಅಯ್ಯೋ ಒಂದು ಗಂಟೆ ಮೊದ್ಲೇ ಬಂದ್ರು ಒಂದು ಟಿಕೆಟ್ ಸಿಗಲಿಲ್ಲ ಅಂತೇ ತುಂಬಾ ಬೇಜಾರಲ್ಲಿ ಸ್ವಲ್ಪ ಹಿಂದೆ ಬಂದು ಯೋಚಿಸುತ್ತ ನಿಂತೆ!
ಯೋಚಿಸುತ್ತಿರುವಾಗ, ಒಬ್ಬ ತುಂಬಾ ವಯಸ್ಸಾದ ಮತ್ತು ಎರಡು ಕೈಯಲ್ಲಿ ಸ್ಟಿಕ್ ಇಡ್ಕೊಂಡಿರುವ ಒಬ್ಬ ವ್ಯಕ್ತಿ ನನ್ನ ಬಳಿ ಬಂದು ಟಿಕೆಟ್ ಬೇಕಾ? ಅಂತೇ ಕೇಳಿದ. ನಂಗೆ ಖುಷಿಯಿಂದ ಹೌದು ಅನ್ನೋವಷ್ಟರಲ್ಲಿ 500 ರೂಪಾಯಿ ಕೊಡು ಅಂತ ಹೇಳಿ ಬಿಟ್ಟ. ನಂಗೆ ದಿಭ್ರಮೆ, ₹500!! ಯಾಕೆ ಅಷ್ಟು? ಟಿಕೆಟ್ ರೇಟು ₹70 ನೀವೇಕೆ ಅಷ್ಟೊಂದು ಜಾಸ್ತಿ ಕೇಳ್ತಿದ್ದೀರಾ? ಅಂತೇ ಪ್ರಶ್ನಿಸಿದೆ. ಅವನು: ನೋಡಪ್ಪ ಇದು ಬ್ಲಾಕ್ ಟಿಕೆಟ್, ನಿಂಗೆ ಟಿಕೆಟ್ ಬೇಕು ಅಂದ್ರೆ ತೊಗೋ ಇಲ್ಲ ಅಂದ್ರೆ 100 ದಿನ ಆದ್ಮೇಲೆ ಬಾ! ಅಂತೇ ಹೇಳಿ ಹೊರಟೆ ಬಿಟ್ಟ.
ನನ್ನ ಹತ್ತಿರ ಇರುವುದು ₹100, ಅದ್ರಲ್ಲೇ ₹15 ಬಸ್ ಟಿಕೆಟಗೆ ಖಾಲಿ ಮಾಡಿದ್ದೀನಿ, ಇವನಿಗೆ ಎಲ್ಲಿಂದ ತರಲಪ್ಪಾ ₹500 ಅಂತೇ ಚಿಂತಿಸುವದ್ರಲ್ಲಿ ಮತ್ತೆ ನನ್ನ ಮುಂದೆ ಪ್ರತ್ಯಕ್ಷನಾದ, ನೋಡು ಪುಟ್ಟ ಇವಾಗ ಆಲ್ರೆಡಿ ಮೂವಿ ಸ್ಟಾರ್ಟ್ ಆಗ್ತಿದೆ ನನಗೆ ಗೊತ್ತಿರೋ ಒಬ್ಬರಲ್ಲಿ ಇನ್ನು ಟಿಕೆಟ್ ಖಾಲಿ ಇದೆ. ₹100 ಕೊಟ್ರೆ ಕೊಡಿಸ್ತೀನಿ ಅಂತೇ ಹೇಳಿದ, ನಾನು ಅಸಹಾಯಕತೆಯಿಂದ ನೋಡಿ ಸರ್, ನನ್ನ ಬಳಿ ₹85 ಇದೆ, ಅದ್ರಲ್ಲೇ ವಾಪಸ ಹೋಗಬೇಕು. ₹70 ಅಲ್ಲೇ ಟಿಕೆಟ್ ಕೊಟ್ರೆ ಕೊಡಿ, ಇಲ್ಲ ಅಂದ್ರೆ ಬೇಡ ಅಂತೇ ಹೇಳಿದೆ. ಸ್ವಲ್ಪ ಯೋಚನೆ ಮಾಡಿ, ಆಯ್ತು ದುಡ್ಡು ಕೊಡು, ಅಲ್ಲಿ ಹೋಗಿ ತೊಗೊಂಡು ಬರ್ತೀನಿ ಅಂತೇ ಹೇಳಿದ.
ನಂಗೆ ಒಂದೇ ಸಾರಿ ಭಯ ಆಯಿತು, ದುಡ್ಡು ಕೊಟ್ರೆ ವಾಪಸ ಬರುತ್ತಾನಾ? ಇವನೇನು ಪುಣ್ಯಕೋಟಿನಾ? ಯೋಚಿಸುತ್ತಾ.... ನೋಡಿ ಸರ್ ನಾನು ನಿಮ್ಮ ಜೊತೆ ಬರುತ್ತೇನೆ, ಅವರ ಕೈಯಲ್ಲೇ ದುಡ್ಡು ಕೊಡ್ತೀನಿ ಅಂತೇ ಹೇಳಿದೆ. ಇಷ್ಟು ಹೇಳ್ತಿದ್ದಾಗೆ "ಅಲ್ಲಯ್ಯ ಏನೋ ದರ್ಶನ್ ಸರ್ ಅಭಿಮಾನಿ ಸ್ವಲ್ಪ ಸಹಾಯ ಮಾಡೋಣ ಅನ್ಕೊಂದ್ರೆ ನಿಂಗೆ ನಂಬಿಕೆನೆ ಇಲ್ಲ" ಆಯ್ತು ಹೋಗು ಮನೆಗೆ ಅಂತೇ ಹೇಳಿ ಹೊರಟೆ ಬಿಟ್ಟ. ನಂಗೆ ಏನು ತೋಚದೆ ನಿಲ್ಲಿ ಸರ್, ತೊಗೊಳ್ಳಿ ₹70 ಅಂತೇ ಕೊಟ್ಟೆ. ಖುಷಿಯಿಂದ ಸಂತೋಷ್ ಥಿಯೇಟರ್ ಹಿಂದೆ ಯಾರೋ ಇದ್ದರೆ ಅಂತೇ ಹೋದ. 5 ನಿಮಿಷ, 10ನಿಮಿಷ ಆಯ್ರು ಬರಲೇ ಇಲ್ಲ, ನಾನೇ ಹೋಗಿ ನೋಡೋಣ ಅನ್ಕೊಂಡು ಹೋದ್ರೆ ಅಲ್ಲಿ ಯಾರು ಇಲ್ಲ! ಅಲ್ಲಿ ಇದ್ದ ಯಾರೋ ಒಬ್ಬ ವ್ಯಕ್ತಿಗೆ ಕೇಳಿದೆ, ಅಯ್ಯೋ ನೀನೊಬ್ಬ ಹುಚ್ಚು ಅಭಿಮಾನಿ, ನಿಂಗೆ ಸರಿಯಾಗಿ ಮೋಸ ಮಾಡಿದ್ದಾನೆ, ಇವಾಗ ಎಲ್ಲೋ ಕುಡ್ಕೊಂಡು ಬಿದ್ದಿರ್ತಾನೆ ಅಂತೇ ಹೇಳಿದ....ನಂಗೆ ಸಕತ್ತ ಬೇಜಾರಾಗಿ, ಮೋಸದ ಮುಂದೆ ಅಭಿಮಾನಕ್ಕೆ ಸೋಲಾಯಿತು ಅನ್ಕೊಂಡು, ಹಾಗೆ ವಾಪಸ ಮನೆಗೆ ಬಂದೆ...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ