CAA SAMACHAR



Okay, ಸಿಎಎ ತುಂಬಾ ದಿನಗಳಿಂದ ಹಾಟ್ ಟಾಪಿಕ್, ಊರಲ್ಲಿ ಕೆಲಸವಿಲ್ಲದೇ ಕುಳಿತು ರಾಜಕೀಯವಾಗಿ ಮಾತನಾಡುವವರಿಂದ ಮೂರೋತ್ತು AC ರೂಮ್ನಲ್ಲಿ ಕುಳಿತ್ಕೊ ಮಹಾನುಭಾವವರೆಗೂ ಒಂದೇ ಮಾತು ನೀನು "ಪರ ಅಥವಾ ವಿರೋಧ'ನಾ? ಪರ ಅಂದರೆ ಒಂದು ಪಕ್ಷ,  ವಿರೋಧ ಅಂದ್ರೆ ಇನ್ನೊಂದು ಪಕ್ಷ. ಅದ್ಕೆ ತುಂಬಾ ಜನ ಉತ್ತರಿಸುವುದಕ್ಕೆ ಹಿಂಜರಿಯುತ್ತಾರೆ lol......

ಇದು ಬರೀ ರಾಜಕೀಯ ವಿಷಯವಾಗಿದ್ದರೆ ನಾನು ಬರಿತ್ತಿರ್ಲಿಲ್ಲ ಅನಿಸುತ್ತೆ, ಯಾಕಂದ್ರೆ ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ.

ಮೊನ್ನೆ ಒಬ್ಬ ಗೆಳೆಯನನ್ನು ತುಂಬಾ ದಿನಗಳ ನಂತರ ಭೇಟಿಯಾದೆ, ನಾನು ತ್ರಿವೇಣಿಯವರ ಒಂದು ಕಾದಂಬರಿ ಹುಡುಕುತ್ತಿರುವಾಗ "ಹೇಯ್ ಶರಣು" ಅಂತೇ ಕೇಳಿಸಿತು, ತಿರುಗಿ ನೋಡಿದ್ರೆ ಆಶ್ಚರ್ಯ!. ಅವ್ನು  ಸಿಎಎ ವಿಚಾರವಾಗಿ ಏನಾದ್ರು ಪುಸ್ತಕಗಳು ನೋಡಲು ಬಂದಿದ್ದೀನಿ ಅಂದಾಗ ನಂಗೆ ಆಶ್ಚರ್ಯವಾಯಿತು. ದಿನಾಲು ಬೆಳಿಗ್ಗೆಯಿಂದ ರಾತ್ರಿವರೆಗೂ ಟಿವಿಯಲ್ಲಿ, ನ್ಯೂಸ್ ಪೇಪರಗಳಲ್ಲಿ ನಾನ್ಸ್ಟಾಪ್ ಬರ್ತಿದೆ ಇಲ್ಲೆನಕ್ಕೆ ಹುಡುಕ್ತಿದ್ದಿಯಾ? ಅಂತೇ ಪ್ರಶ್ನಿಸಿದಾಗ ಬಂದ ಉತ್ತರ IAS/KAS ಪ್ರಿಪರೇಷನ್! ಹೌದು IAS/KAS ಪ್ರಿಪರೇಷನಲ್ಲಿರುವ ತುಂಬಾ ಯುವಕರಿಗೆ ಇದೊಂದು ಹಾಟ್ ಟಾಪಿಕ್. ಟಿವಿ/ನ್ಯೂಸ್ ಅವ್ರಿಗೆ ಆ ಕಡತವನ್ನು ತಿಳಿಸುವುದಕ್ಕಿಂತಾ, ಅರ್ದಂಬರ್ದ ಬರಿದು ಜನಗಳಲ್ಲಿ ಹಾಲ್ಫ್ ನಾಲೆಡ್ಜ್ ಕೊಡ್ತಾರೆ ಅದ್ಕೆ ಕಂಪ್ಲೀಟ್ ಡೀಟೈಲ್ಸ್ ಇರೋ ಬುಕ್ ಹುಡುಕ್ತಿದ್ದೀನಿ ಅಂತೇ ಹೇಳಿದ. ಅದು ಏನೋ ಸರಿ, ಇವಾಗಿನ ಪತ್ರಿಕೋದ್ಯಮ ಯಾರು ನಂಬುವ ಸ್ಥಿತಿಯಲ್ಲಿದೆ ಬಿಡು ಅಂತೇ ಸುಮ್ನೆ ಆದೇ.

ನಾನು ಸಿಎಎ ಒಂದು ಮಾನವೀಯತೆ ಮೆರೆಯುವ ಕಾಯಿದೆ ಆದರೆ ಈಗಿನ ನಿರುದ್ಯೋಗ, ಜನಸಂಖ್ಯೆ ಸ್ಫೋಟ, ಹಣದುಬ್ಬರಕ್ಕೆ ಸ್ವಲ್ಪ ಮಟ್ಟಿಗೆ ಹೊಡೆತ ಬೀಳಬಹುದು ಅನ್ಕೊಂಡಿದ್ದೆ ಆದರೆ ಶಾಪಿಂಗ್ ಮುಗಿಯಿಸಿ, ಹೊರಗೆ ಬಂದು ಅಲ್ಲೇ ಪಕ್ಕದಲ್ಲಿರುವ ಜ್ಯುಸ್ ಕುಡಿಯುತ್ತಿರುವಾಗ, ಸಿಎಎ ಬಗ್ಗೆ ಸಂಕ್ತಿಪ್ತವಾಗಿ ವಿವರಿಸಿದ:
ಹೌದು  ಸಿಎಎ ಒಂದು ಅತ್ಯುತ್ತಮ ಕಾಯಿದೆ, ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಒಂದು ಉತ್ತಮ ಬೆಳೆವಣಿಗೆ. ಒಂದು ರಾಷ್ಟ್ರದ ಭದ್ರತೆ ಕಾಪಾಡಲು ಜಗತ್ತಿನ ಎಲ್ಲಾ ರಾಷ್ಟ್ರದ ಸರ್ಕಾರಗಳು ಸಮರ್ಪಕ ಕಾಯಿದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ನಮ್ಮ ಸಿಎಎ ಒಂದು ಉತ್ತಮ ಉದಾಹರಣೆ. ಆದರೆ ನಮ್ಮ ಭಾರತದ ಪರಿಸ್ಥಿತಿಯನ್ನು ಪ್ರಾಕ್ಟಿಕಲಾಗಿ ಯೋಚಿಸಿದರೆ ತುಂಬಾ ವಿಚಿತ್ರವಾದ ವಿಚಾರಗಳು ನೆನಪಿಗೆ ಬರುತ್ತೆ. ಒಂದು ವೋಟರ್ id ಅಥವಾ ಆಧಾರ್ ಕಾರ್ಡ್ ಮಾಡಿಸಲು ಪರದಾಡಿದ ರೀತಿ ಮತ್ತು ಏನಾದ್ರು ತಿದ್ದುಪಡಿ ಇದ್ದರೆ ಕೆಲಸವನ್ನು ಬಿಟ್ಟು  ಕಚೇರಿಯಿಂದ ಕಚೇರಿಗೆ ತಿರುಗಿದ ಪರಿಯೊಂದು ಶೋಚನೀಯ! ಅದರಲ್ಲೂ ಈಗಿನ ಯುವಕರು ಬೆಂಗಳೂರಿನಂತ ದೂರದ ಊರಲ್ಲಿ ದುಡಿಯಲ್ಲೂ ಹೋಗಿದ್ದವರ ಪಾಡಂತೂ ದೇವರೆಗತಿ. ಬಸ್ ಚಾರ್ಜ್, ಲೀವ್ಸ್, ಬೇರೆ ಖರ್ಚು ಅಂತೇ ದುಡಿದದ್ದೆಲ್ಲ ಗೋವಿಂದ. ಆಮೇಲೆ ಆಧಾರ್ ಕಾರ್ಡ್ ಬ್ಯಾಂಕಗಳಿಗೆ ಲಿಂಕ್ ಮಾಡಲು ಪರದಾಡಿದ ರೀತಿ ಭಯಂಕರ. ಸೋ ಯಾವುದೋ ಕಾಯಿದೆ ತರಲಿ ಆದರೆ ಎಲ್ಲ ಅಧಿಕಾರಿಗಳು ಪಾರದರ್ಶಕವಾಗಿ ಇದ್ದರೆ ಯಶಶ್ವಿಯಾಗುತ್ತದೆ ಇಲ್ಲ ಅಂದ್ರೆ ಹಾಳಾಗಿ ಹೋಗುತ್ತದೆ ಅಂತೇ ಹೇಳಿ ಮಾತು ಮುಗಿಸಿದ.

ನಾನು ಒಂದು ಕ್ಷಣ ಯೋಚಿಸಿದೆ, ವೋಟರ್ ID, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಪರದಾಡಿದ ಪರಿ ತುಂಬಾ ಕಠೋರವಾಗಿತ್ತು. ಆದರಿಂದ ನಮ್ಮ ಸಿಎಎ ಕಾಯಿದೆಯನ್ನು ಇಂತ ಗೊಂದಲಗಳಿಂದ ಮುಕ್ತಗೊಳಿಸಿ ಜನಪರವಾಗಬೇಕೆಂದು ಆ ದೇವರಲ್ಲಿ ಕಳಕಳೆಯಿಂದ ಬೇಡಿಕೊಳ್ಳುತ್ತೇನೆ. 

ನಿಮ್ಮ ಅನಿಸಿಕೆಗಳು, ಸಲಹೆಗಳು, ನಿಮ್ಮ ಹಳೆಯ ನೆನಪುಗಳನ್ನು ಕಾಮೆಂಟ್ ಮೂಲಕ ತಿಳಿಸಬಹುದು ಆದರೆ ರಾಜಕೀಯ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಬೇಡಿ.
      

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೈಟಲ್ ನೀವೇ ಕೊಡಿ

ಮಗಳು

ಅವಳು ಮಗಳು😍