ಮಾತು ಮಾತು ಮಾತು, ಏನು ಗುರು ಏನೇನೋ "ಮಾತು ಮಾತು" ಅಂತ ಕೋರಿತಾನೆ ಅನ್ಕೋಬೇಡಿ. ಒಂದಿನ ದೊಡ್ಡ ಮನಸಿನ ವ್ಯಕ್ತಿಯ ಮಾತು ಕೇಳ್ಕೊಂದು ಕುಂತಿದ್ದೆ. ತಾಳಿಕೋಟಿ ದಾಟಿ ಒಂದೆರಡು ಕಿಲೋಮೀಟರ್ ಮುಂದೆ ಹೋಗಿ ಯೂಟ್ಯೂಬನ್ಯಾಗ್ ನೋಡಕತ್ತಿದೆ. ಹೆಂಗಿದ್ರು2GB ಇತ್ತು, ಇನ್ನೇನು ಒಳ್ಳೆ 1080p ಕ್ವಾಲಿಟಿನ ಇಟ್ಟು ನೋಡಕತ್ತಿದೆ. ಬೆಂಕಿ🔥 Sennheiser headset🎧, ಬೆನಿಗಿಡದ ನೆಳ್ಳು ಒಟ್ನಲ್ಲಿ ಬಾರಿ ಇತ್ತು. "AI Generated image using OpenAI's DALL•E" ನೀವು ಒಬ್ಬ ಮಹಾನ್ ವ್ಯಕ್ತಿ! ನೀವು ಆ ನಾಯಿ🐕 ಮಾಡಿದ್ದು ತಪ್ಪು ಎಂದು ತಿಳಿದು ಸುಮ್ಮನೇ ಅದನ್ನು ನೋಡುತ್ತಾ ಕುಳಿತಿದ್ದಿರಲ್ಲ ಬೇಜಾರಾಗುವದಿಲ್ವಾ? ಕೇಳಿದ ಪ್ರಶ್ನೆಗೆ ಒಂದು ಕ್ಷಣವೂ ವಿಚಲಿತನಾಗದೆ, ನೋಡಿ ಸ್ವಾಮಿ, ನೀವು ತಪ್ಪು ತಿಳಿದಿದ್ದೀರಾ ಆ ನಮ್ಮ ನಾಯಿಯು ಒಂದು ಮಹಾನ ಅರ್ಥಶಾಸ್ತ್ರ ಪರಿಣಿತೆ, ನಮ್ಮ ದೇಶದ ಆರ್ಥಿಕ ಬೆಳವಣಿಗೆ ಅಪಾರ ಕೊಡುಗೆ ಕೊಟ್ಟಿದೆ, ಇದರಿಂದ ನಾವು ಖುಷಿ ಪಡಬೇಕು ವಿನಃ ಬೇಜಾರು ಮಾಡಿಕೊಳ್ಳುವ ಪ್ರಸಂಗವೇ ಬರುವದಿಲ್ಲ ಎಂದು ಮೈಕ್ ಕೆಳಗಿಳಿಸಿದ. ಆ ನಿರೂಪಕ ವಿಚಲಿತನಾಗಿ, ಅಲ್ಲ ಸರ್ ಆ ನಾಯಿ ಮನೆಯ ಹೊರಗಡೆ ನಿಲ್ಲಿಸಿದ ಆ ಬೈಕ್ ಸೀಟ್ ಅರಿದು ಹಾಕಿದೆ, ಮನೆಯ ಮುಂದೆಯಲ್ಲ ಕಸ ಹಾಕಿದೆ ಮತ್ತೆ ಇನ್ನೇನೋ ಅನಾಹುತ ಮಾಡಿದೆ ನೀವು ನೋಡಿದರೆ ಆ ನಾಯಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಅಂತಿರಲ್ಲ ಸ್ವಲ್ಪ ಬಿಡಿಸಿ ಹೇ...