ಶರಣರ ನಾಡಿನ ನದಿಗಳ ಅಂತರ್ಜಲದ ಕಳವಳಿ
ಇತ್ತೀಚೆಗೆ ನಮಗೆ ದಿನಬೆಳಗಾದರೆ ಕಾಡುವ ಸಮಸ್ಯೆ ಎಂದರೆ ಅದು ನೀರಿನ ಸಮಸ್ಯೆ, ಅದು ಬೆಂಗಳೂರಿನಂಥ ಮಹಾನಗರವಿರಲಿ ಅಥವಾ ಪುಟ್ಟ ಪಟ್ಟಣವಿರಲಿ ಕುಡಿಯುವ ನೀರಿನ ಅಭಾವ ತಡೆಯಲು ಹರಸಾಹಸ ನಡೆಯುತ್ತಿರುವುದು ನಮಗೆಲ್ಲ ಗೊತ್ತಿದೆ. ಇದಕ್ಕೆ ಸಾಕ್ಷಿ ಒಂದೆ ವಾರದಲ್ಲಿ ಎರಡು ಬಂದ್ ಗಳನ್ನು ಕನ್ನಡಿಗರು ನೋಡಿದ್ದು/ಮಾಡಿದ್ದು ಆದರೆ ನಮ್ಮ ಕೆಲವೋಂದು ನಿರ್ದಾರಗಳೆ ಅದಕ್ಕೆ ಕಾರಣಗಳು ಅಂತೆ ತಿಳಿದರು ತಿಳಿಯದ ಹಾಗೆ ಇರುವ ಪರಿಸ್ತಿತಿ ಬಂದಿದೆ, ಬನ್ನಿ ಅದರ ಬಗ್ಗೆ ಸ್ವಲ್ಪ ಚರ್ಚಿಸೋಣ: ಅರಣ್ಯ ನಾಶ: ಇತ್ತೀಚೆಗೆ ಬಂದ ಯುಎನ್‌ಎಫ್ ಸಿಸಿಸಿ ವರದಿಯ ಪ್ರಕಾರ ಜಾಗತಿಕ ಅರಣ್ಯನಾಶಕ್ಕೆ ಕೃಷಿಯು 80% ( ಜೀವನಾಧಾರ & ವಾಣಿಜ್ಯ ಕೃಷಿಯು) ಕಾರಣವಾಗಿದೆ. ಉಳಿದವು ಇತರ ಚಟುವಟಿಕೆಗಳಿಂದ ಹಾಳಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಕಾರಣವೆಂದರೆ ಹವಾಮಾನ ಬದಲಾವಣೆ & ಕಾಳ್ಗಿಚ್ಚುಗಳು ಅರಣ್ಯ ನಾಶದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಸ್ವಾರ್ಥ ಅಥವಾ ಇನ್ನಿತರ ಕಾರಣದಿಂದ ನಡೆಯುವ ಈ ಚಟುವಟಿಕೆಗಳು ವ್ಯತಿರಿಕ್ತ ಪರಿಣಾಮ ಬಿರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ನಮ್ಮ ರೈತರು ಕೊನೆಯ ಪಕ್ಷ ಬಹುವಾರ್ಷಿಕ ಬೆಳೆಗಳು ಬೆಳೆದರೆ ಸ್ವಲ್ಪ ಮಟ್ಟಿಗೆ ಮರಗಳ ಸಂಖ್ಯೆ ಜಾಸ್ತಿಯಾಗಬಹುದೆನೊ, ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕು. ಗಣಿಗಾರಿಕೆ (ಅಕ್ರಮ / ಸಕ್ರಮ): ಯಾವುದೇ ...