ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಗೆ ಸುಮ್ಮನೆ

ದೊಡ್ಡ ಗೂಡು, ಅದರ ಸುತ್ತಲೂ ಜೈಲಿನಂತ ಬೇಲಿ ಅಮ್ಮನ ಮಡಿಲಲ್ಲಿ ಬೆಚ್ಚನೆ ಮಲಗಿದ್ದ ನನಗೆ ಒಂದು ವಿಷ್ಮಯ ಕಾದಿತ್ತು. ಐದು ಬೆರಳುಗಳು, ನನ್ನನ್ನು ಗಟ್ಟಿಯಾಗಿ ಹಿಡಿದು ತಾಯಿಯ ಮಡಿಲಿಂದ ಹೊರ ತೆಗೆಯಿತು. ನಾನು ಏಷ್ಟು ಚಿರಾಡಿದರು, ಕೂಗಾಡಿದರು ಆ ಐದು ಬೆರಳಿನ ಕೈಗೆ ಕೇಳಲಿಲ್ಲ, ನನ್ನ ತಾಯಿ ಆ ಕೈಗಳಿಗೆ ತನ್ನ ಬಾಯಿಂದ ಕುಕ್ಕಿದರು ಅಂಜದೆ ನನ್ನನ್ನು ಹೊರತೆಗೆದರು. ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ನನಗೆ ಈಗ ಹೊಸ ಪ್ರಪಂಚದ ಪರಿಚಯ ಶುರುವಾಯಿತು. ಗಿಜಿಬಿಜಿ ಸದ್ದು, ನನ್ನನ್ನೆ ಓಲುವ ಪ್ಲಾಸ್ಟಿಕ್ ಡಬ್ಬ, ಬಿಸಿಲು, ಗಾಳಿ ಎಲ್ಲವೂ ಹೊಸತು. ಆ ಕೈಗಳು ನನ್ನನ್ನು ಪುಟ್ಟ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಮುಚ್ಚಿತು. ಮತ್ತೆ ಸ್ವಲ್ಪ ಸಮಯದ ನಂತರ ಹೊರ ತೆಗೆದು, ಬಿಸಿ ಬಿಸಿ ನೀರಿನಲ್ಲಿ ಮುಳುಗಿಸಿ ಕುದಿಸಲು ಶುರು ಮಾಡಿದರು. ಆ ಸುಡು ನೀರಿನ ನೋವು ತಾಳಲಾಗದೆ ಏಷ್ಟು ಕೂಗಿದರು ಯಾರಿಗೂ ಕೇಳಲಿಲ್ಲ, ಸ್ವಲ್ಪ ಸಮಯದ ನಂತರ ನನ್ನ ಚರ್ಮವನ್ನು ತೆಗೆದು ಒಂದು ದೊಡ್ಡ ಡಬ್ಬದಲ್ಲಿ ಹಾಕಿದರು. ನೋಡಿದರೆ ನನ್ನ ಹಾಗೆ ನೂರಾರು! ಆಶ್ಚರ್ಯವಾಹಿತು, ಎಲ್ಲರನ್ನು ನೀರಲ್ಲಿ ಕುದಿಸಿ, ಚರ್ಮ ತೆಗೆದು ಹಾಕಿದ್ದರು. ಆ ದೊಡ್ಡ ಡಬ್ಬವನ್ನು ತೆಗೆದಾಗ ಒಂದು ಸುಂದರ ಶಾಲೆ, ಪುಟ್ಟ ಪುಟ್ಟ ಮಕ್ಕಳು, ಹಸಿರು ತುಂಬಿದ ಮೈದಾನ. ಆ ಪುಟ್ಟ ಮಕ್ಕಳನ್ನು ನೋಡಿ ನನ್ನ ಬಾಲ್ಯದ ನೆನಪುಗಳೆಲ್ಲ ಕಣ್ಣ ಮುಂದೆ ಬಂದಂತಾಗಿ, ಕನಸಲ್ಲಿ ಮಗ್ನನಾದೆ. ಒಂದೇ ಸಮನೆ ದೊಡ್...