ಜನರಾ? ಜನನಾಯಕರಾ?
ಕುವೆಂಪುರವರು "ಮೊದಲು ಮಾನವನಾಗು" ವೆಂದು ಬರೆದ ಮೇಲೆ ಕೆಲವು ಆಲೋಚನೆಗಳಿಗೆ ದಾರಿಯಾಯಿತು. ಆದರೆ ಇಲ್ಲಿ ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಮತ್ತು ಅದು ಸೂಕ್ತವೂ ಅಲ್ಲ. ಇತ್ತೀಚೆಗೆ ತೀವ್ರ ಪರಿಣಾಮ ಬಿರುತ್ತಿರುವ ಕೊರೊನಾ ರೋಗದ ಬಗ್ಗೆನೂ ಅಲ್ಲ ಆದರೆ ಕೊರೊನಾ ಕಾಲದಲ್ಲಿ ಜನರು ಮತ್ತು ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿರುವದು, ನಡೆ ನುಡಿಗಳು, ಪ್ರತಿಕ್ರಿಯೆಗಳು ಇಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ಪಕ್ಷ ಅಧಿಕಾರದ ಬದಲಾವಣೆ ಬಯಸಿದರೆ, ಆಡಳಿತದಲ್ಲಿಲ್ಲದ ಮುಂದಿನ ನಡೆಯ ಬಗ್ಗೆ ಚರ್ಚಿಸುತ್ತಿವೆ, ಇನ್ನು ನಮ್ಮ ಜನರು ಅವರ ಪಾಡಿಗೆ ಏನು ಮಾಡಬೇಕೋ ಅದು ಮಾಡ್ತಿದ್ದಾರೆ. ಪಕ್ಕದ ಮನೆಯಲ್ಲಿ ಬಾಲವಿವಾಹ ನಡಿಯುತ್ತಿದ್ದರು ಪ್ರಧಾನಿ, ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ಬಗ್ಗೆ ಮಾತನಾಡುವ ಜನರು ಇದ್ದಾರೆ. ರೋಗಿಗಳಿಗೆ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಚರ್ಚಿಸದ ಜನನಾಯಕ ಜನಗಳೇ ಸರಿ ಇಲ್ಲ ಅಂತೆ ಹೇಳುವುದನ್ನು ಕೇಳಿದ್ದೇವೆ. ಮತ್ತೇ ಏನು ನಡಿಯುತ್ತಿದೆ, ತಪ್ಪುಗಳು ಏನು, ಹೇಗೆ ತಪ್ಪುಗಳನ್ನು ತಿದ್ದುವುದೂ? ಮೋಡಗಳು ಆಕಾಶವನ್ನು ಆವರಿಸಿದ ಹಾಗೆ ಜನರು ಮತ್ತು ಜನನಾಯಕರಿಗೆ ಒಬ್ಬರ ಮೇಲೆ ಒಬ್ಬರು ಹಾಕಿ ವ್ಯರಾಣುವಿಗೆ ಪೊಷ್ಠಿಕಾಂಶ ಕೊಟ್ಟು ಹಲವಾರು ತಳಿಗಳಿಗೆ ಜೀವದಾತರಾಗಿರುವು ಒಂದು ಶೋಚನೀಯ ವಿಚಾರ. ಇತ್ತೀಚೆಗೆ ವಿಶ್ವ ಆರೋಗ...