ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೂಕ್ಕಜ್ಜಿಯ ಕನಸುಗಳು - ಶರಣು ಕಂಡಂತೆ!

ಮೂಕ್ಕಜ್ಜಿಯ ಕನಸುಗಳು - ಶರಣು ಕಂಡಂತೆ! ಕೆಲವು ದಿನಗಳ ಹಿಂದೆ, ಗೆಳೆಯ ಡಾ. ಕೆ ಶಿವರಾಮ ಕಾರಂತರ ಮೂಕ್ಕಜ್ಜಿಯ ಕನಸುಗಳು ಕಾದಂಬರಿಯ ಬಗ್ಗೆ ವರ್ಣಿಸುತ್ತಾ, ತನ್ನ ಬಳಿ ಇದ್ದ ಆ ಪುಸ್ತಕವನ್ನು ಓದು ಅಂತೇ ಕೊಟ್ಟರು. ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಕಾದಂಬರಿ ಇಷ್ಟು ವರ್ಷಗಳಾದರೂ ಓದದೆ ಇದ್ದದ್ದು ನನಗೆ ಮುಜುಗರ ಉಂಟುಮಾಡಿತಾದರು ಆ ಪುಸ್ತಕವನ್ನು ಪಡೆದು ಮನೆಯಲ್ಲಿ ಹಾಗೆ ಇಟ್ಟಿದ್ದೆ. ಮೊನ್ನೆ ಅವರ ಪುಣ್ಯಸ್ಮರಣೆಯ ದಿನ ಓದಲು ಶುರುಮಾಡಿದೆ. ಓದುವುದರಲ್ಲಿ ನಾನು ತುಂಬಾ ಹಿಂದೆ! ಒಂದು ನಿದ್ದೆಗೆ ಜಾರುವುದು ಅಥವಾ ಮೊಬೈಲ್ ಕಡೆ ಗಮನ ಹರಿಸುದು ರೂಢಿ, ಹಾಗಾಗಿ ಇನ್ನು ಮೊದಲ ಪುಟಗಳಲ್ಲಿ ಇರುವಾಗ ಒಂದು ಸ್ವಾರಶ್ಯಕರ ವಿಷಯ ನೋಡಿದೆ, ಅದುವೇ ಮೂಕಿಯ ಮದುವೆ! ನಾನು ಇನ್ನು ಪೂರ್ತಿ ಒದದಿದ್ದರು ಅಂತಹ ಸನ್ನಿವೇಶವನ್ನು ನಿಜಜೀವನದಲ್ಲೂ ಕೇಳಿದ ನೆನಪು. ತಂದೆ ತಾಯಿ... ತಾಯಿ ಮೂಕಾಂಬಿಕೆ ಹೆಸರನ್ನಿಟ್ಟರು, ಜನ ಮೂಕಿ ಅಂತೇ ಕರೆದರು! ಹತ್ತನೇ ವಯಸ್ಸಲ್ಲಿ ಮದುವೆ ಮಾಡಿದರು, ಮೂರೇ ತಿಂಗಳಲ್ಲಿ ಗಂಡ ತೀರಿಕೊಂಡನು. ಮುಂದೆ ಅವರ ಜೀವನ ನಿಜವಾಗಲು ಮೂಕತನಕ್ಕೆ ಶರಣಾಯಿತು. ಕಾದಂಬರಿ ನಿಜಜೀವನದಲ್ಲಿ ನಡೆದದ್ದಿರುತ್ತದೋ ಅಥವಾ ಕಲ್ಪನಾ ಲೋಕದ್ದಿರುತ್ತದೋ ಗೊತ್ತಿಲ್ಲ ಆದರೆ ನಿಜಜೀವನಕ್ಕೆ ಏಷ್ಟು ಹತ್ತಿರ ಗೊತ್ತೇ ಹಾಗಲ್ಲ. ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿ, ಏನೋ ನನ್ನ ಪಾಡಿಗೆ ನಾನು ಕೆಲಸದಲ್ಲಿ ನಿರತನಾದಾಗ ನಮ್ಮ ತಾಯಿಯವರಿಗೆ ಒಂ...