ಸಮಾಜಕ್ಕೆ ಯುವಜನತೆಯೆ ಮುಳ್ಳಾಗುತ್ತಿದ್ದಾರಾ...?
ಸಮಾಜಕ್ಕೆ ಯುವಜನತೆಯೆ ಮುಳ್ಳಾಗುತ್ತಿದ್ದಾರಾ...? ಮೊದಲನೆಯದಾಗಿ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಕೊರೊನಾ ಪಿಡುಗುವಿರುವ ಕಾರಣ ವಿಜೃಂಭಣೆಯಿಂದ ಆಚರಣೆ ಮಾಡಲಾಗಲಿಲ್ಲ ಆದರೆ ಜನರ ದೇಶಭಕ್ತಿ ಏನು ಕಡಿಮೆಯಿಲ್ಲ ಅಂತೇ ಮನದಟ್ಟಾಗುವ ರೀತಿ ತಮ್ಮ ತಮ್ಮ ಮನೆಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಹಲವು ಕಡೆ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಾಡುತ್ತಾ ಆಚರಣೆ ಮಾಡಿದೇವು. ಆದರೆ ಆ ಒಂದು ಸ್ವಾತಂತ್ರ್ಯ ನಮ್ಮ ಯುವಜನತೆಯ ಮೇಲೆ ಹೇಗೆ ಪರಿಣಾಮ ಬೀರಿದೆ? ಯುವಜನತೆ ಹೇಗೆ ಸ್ವಾತಂತ್ರ್ಯ ಸ್ವೀಕರಿಸಿದರು ಅಂತೇ ಸ್ವಲ್ಪ ವಿಶ್ಲೇಷಣೆ ಮಾಡುವ ಸಮಯ! ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯ ಪ್ರಕಾರ ಕೊರೊನಾ ಸೋಂಕು ಹರಡುವಿಕೆಗೆ ಯುವಜನತೆಯೇ ಒಂದು ಪ್ರಮುಖ ವಾಹಕ ಎಂದು ಪ್ರಕಟಿಸುತ್ತಾರೆ, ಹೌದು! ವಿಶ್ಲೇಷಣೆ ಮಾಡಿದಾಗ ನೂರಕ್ಕೆ ನೂರು ಸತ್ಯ. ಲಾಕ್ಡೌನ್ ಸ್ವಲ್ಪ ಸಡಿಲಿಸುತ್ತಿದ್ದಂತೆ ಏನೋ ಒಂದು ಮಹಾ ಪ್ರಸಾದ್ ಸಿಕ್ಕ ಹಾಗೆ ಎಲ್ಲಿ ಬೇಕಂದರಲ್ಲಿ ಸುತ್ತಲೂ ಶುರು ಮಾಡಿದರು, ಹಾಗೆಯೇ ತಾವು ಸೋಂಕಿತರಾಗದೆ ತಮ್ಮ ಮನೆಯವರಿಗೆಲ್ಲ ಸೋಂಕನ್ನು ಹರಡಿಸುವ ಮೂಲಕ ಸಮಾಜಕ್ಕೆ ಮಾರಕವಾಗತೊಡಗಿದರು. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ, ಅವರಿಗೆ ಏನು ಹಾಗದೆ ಇರಬಹುದು ಆದರೆ ಅವರ ಮನೆಯಲ್ಲಿಯುವ ತಂದೆ ತಾಯಿ, ಅಜ್ಜ ಅಜ್ಜಿ ಯುವಕರಲ್ಲ ಅನ್ನೋವುದನ್ನು ಮರೆತು ಮಹಾಮಾರಿಯನ್ನು ಮನೆಗೆ ತರುತ್ತಿರುವುದು ಒಂದು ಕಳಕಳಿಯ ವಿಷಯ. ಸೋಂಕು ...